ಶ್ರೀನಗರ: ಕಾಶ್ಮೀರದ (Kashmir) ಪ್ರವಾಸಿ ತಾಣವಾದ ಗುಲ್ಮಾರ್ಗ್‌ನಲ್ಲಿ ಶನಿವಾರದಂದು ಮೊದಲ ಹಿಮಪಾತವಾಗಿದೆ. ಬಯಲು ಪ್ರದೇಶಗಳಲ್ಲಿ ಮಳೆ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣಿವೆಯ ಬಹುತೇಕ ಬಯಲು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಇನ್ನು ಕೆಲವೆಡೆ ಹಗುರದಿಂದ ಸಾಧಾರಣ ಹಿಮಪಾತವಾಗುತ್ತಿದೆ. ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಮತ್ತು ಗುಲ್ಮಾರ್ಗ್ ಮತ್ತು ಗುರೇಜ್ ಕಣಿವೆಯಲ್ಲಿ ಮುಂಜಾನೆ ಹಿಮಪಾತವಾಗಿದೆ. ಗುಲ್ಮಾರ್ಗ್ನಲ್ಲಿ ಲಘು ಹಿಮಪಾತ ದಾಖಲಾಗಿದ್ದರೆ, ಗುರೇಜ್ ಕಣಿವೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದೆ. ಮಧ್ಯಾಹ್ನದ ನಂತರ ಹವಾಮಾನದಲ್ಲಿ ಸುಧಾರಣೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ಸಾಲ ಬಾಧೆ – ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ
ಗುಲ್ಮಾರ್ಗ್‌ನಲ್ಲಿ (Gulmarg) ಶನಿವಾರ ಬೆಳಗ್ಗೆ ಒಂದು ಇಂಚು ಹಿಮಪಾತವಾಗಿದ್ದು, ಬಂಡಿಪೋರಾ ಗುರೇಜ್ ರಸ್ತೆ ಸಂಚಾರವನ್ನು ಸದ್ಯಕ್ಕೆ ಮುಚ್ಚಲಾಗಿದೆ. ನ.17ರಿಂದ 23ರವರೆಗೆ ಸಾಮಾನ್ಯವಾಗಿ ಶುಷ್ಕ ವಾತಾವರಣದಿಂದ ಕೂಡಿರುವ ಸಾಧ್ಯತೆ ಇರುತ್ತದೆ. ನ.24 ರಂದು ಕೆಲವು ಸ್ಥಳಗಳಲ್ಲಿ ಸ್ವಲ್ಪ ಮಳೆ ಮತ್ತು ಹಿಮಪಾತ ಆಗುವ ಸಾಧ್ಯತೆಯಿದೆ. ಪ್ರವಾಸಿಗರು ಮತ್ತು ಪ್ರಯಾಣಿಕರು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮ ಪ್ರಯಾಣ ಮಾಡುವಂತೆ ಹವಾಮಾನ ಇಲಾಖೆಯ ಉಪನಿರ್ದೇಶಕ ಡಾ. ಮುಖ್ತಾರ್ ಅಹ್ಮದ್ ಸೂಚಿಸಿದ್ದಾರೆ. ಇದನ್ನೂ ಓದಿ: ಕಬ್ಬು ಕಟಾವು ಹಿನ್ನೆಲೆ, ಮೆಟ್ರಿಕ್ ಟನ್ ಕಬ್ಬಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ- ಬಿ.ಫೌಜಿಯಾ ತರನ್ನುಮ್
ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ ಕೆಲವು ಭಾಗಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಹಿಮಪಾತವಾಗುತ್ತಿದೆ. ಹಿಮದ ತೆಳುವಾದ ಪದರವು ಮನೆಗಳ ಮೇಲ್ಛಾವಣಿ, ಕಾರು, ಮೈದಾನ, ಹುಲ್ಲು ಪ್ರದೇಶ, ಮರ-ಗಿಡ, ಹೂವು-ಬಳ್ಳಿಗಳ ಮೇಲೆ ಆವರಿಸಿದೆ. ಕಣಿವೆ ರಾಜ್ಯದ ಕೆಲವು ಭಾಗಗಳಲ್ಲಿ ಎಡಬಿಡದೇ ಮಂಜು ಸುರಿತುತ್ತಿರುವ ಕಾರಣ ನಗರದ ಬೀದಿಗಳು ಕೂಡ ಹಿಮದಿಂದ ಆವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್ ಟೈಸನ್ – ಜೇಕ್ ಪಾಲ್ ವಿರುದ್ಧ ಸೋಲು