ಶ್ರೀನಗರ: ಜಮ್ಮು (Jammu And Kashmir) ರಾಷ್ಟ್ರೀಯ ಹೆದ್ದಾರಿ ಬಂದ್ ಹಿನ್ನೆಲೆ ಸೇಬು (Kashmir Apple) ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ 40% ರಷ್ಟು ಬೆಲೆ ಕುಸಿತವಾಗಿದ್ದು, ಸೇಬು ಬೆಳೆಗಾರರಿಗೆ ತೀವ್ರ ತೊಂದರೆಯಾಗಿದೆ.
ಮಳೆ, ಪ್ರವಾಹದಿಂದಾಗಿ ಆಗಸ್ಟ್ ಅಂತ್ಯದಿಂದ ಸೆಪ್ಟೆಂಬರ್ ಮಧ್ಯದವರೆಗೆ ಮೂರು ವಾರಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು. ಈ ಪರಿಣಾಮ ಟ್ರಕ್‍ಗಳಲ್ಲಿ ತುಂಬಿದ್ದ ಸೇಬು ಹಣ್ಣುಗಳು ಕೊಳೆತುಹೋಗಿವೆ. ಇದರ ನಡುವೆ ಕೇಂದ್ರ ಸರ್ಕಾರವು ಕಣಿವೆ ರಾಜ್ಯದ ಆರ್ಥಿಕತೆಯನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತಕ್ಕೆ ತಾಯಿ, ಇಬ್ಬರು ಮಕ್ಕಳು ಬಲಿ – ಕಂದಮ್ಮಗಳನ್ನು ಅಪ್ಪಿಕೊಂಡೇ ಪ್ರಾಣಬಿಟ್ಟ ಅಮ್ಮ
ಕಾಶ್ಮೀರದಲ್ಲಿ ವಾರ್ಷಿಕ 20 ಲಕ್ಷ ಮೆಟ್ರಿಕ್‍ಟನ್‍ಗಳಿಗಿಂತ ಹೆಚ್ಚು ಸೇಬು ಬೆಳೆಯುತ್ತಾರೆ. ಕಾಶ್ಮೀರದಿಂದ ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್ ಸೇರದಂತೆ ಹಲವು ರಾಜ್ಯಗಳಿಗೆ ರಫ್ತು ಮಾಡಲಾಗುತ್ತೆ. ಇದನ್ನೂ ಓದಿ: ನವರಾತ್ರಿಯಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಉತ್ಸವ – ಸ್ವದೇಶಿ ವಸ್ತುಗಳನ್ನು ಖರೀದಿಸಿ: ಮೋದಿ ಕರೆ