ಬೆಂಗಳೂರು: ಚಂದನವನದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇಂದು ವಿಧಿವಶರಾಗಿದ್ದಾರೆ. ಈ ಹಿಂದೆ ನಟ ಕಾಶಿನಾಥ್ ಪಬ್ಲಿಕ್ ಟಿವಿ ‘ಹಾಟ್ ಸೀಟ್’ ಸಂದರ್ಶನದಲ್ಲಿ ಭಾಗಿಯಾಗಿದ್ದು, ಹೆಚ್.ಆರ್.ರಂಗನಾಥ್ ನೇರ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರವನ್ನು ನೀಡಿದ್ದರು.
ನಿಮ್ಮ ಆಸೆ ಏನಾಗಿತ್ತು?
ಉತ್ತರ: ನಾನು ಚಿಕ್ಕವನಿದ್ದಾಗ ವಿಜ್ಞಾನಿ ಆಗಬೇಕೆಂದು ಆಸೆಯಿತ್ತು. ನಮ್ಮ ಚಿಕ್ಕಪ್ಪರನ್ನು ನೋಡಿ ಯಾವಾಗಲೂ ಹೊಸತನ್ನು ಕಂಡುಹಿಡಿಯಬೇಕು ಎಂಬುದು ಮನದಲ್ಲಿತ್ತು. ನನ್ನ ಹೊಸತನವನ್ನು ಸಿನಿಮಾದಲ್ಲಿ ಕಂಡುಹಿಡಿದೆ.
Advertisement
Advertisement
ಅನುಭವ ಸಿನಿಮಾ ರಿಲೀಸ್ ಆಗಿದ್ದು ಹೇಗೆ?
ಸತ್ಯ ಘಟನೆ ಆಧಾರಿತ ಸಿನಿಮಾ ಮಾಡಲಾಯಿತು. ಈ ಹಿಂದೆ ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳ ಮದುವೆಯನ್ನು ಮಾಡಲಾಗುತ್ತಿತ್ತು. ಸಿನಿಮಾ ರಿಲೀಸ್ ಮಾಡಬೇಕಾದ್ರೆ ಸೆನ್ಸಾರ್ ತೊಂದರೆ ಆಗಿತ್ತು. ಆ ವೇಳೆ ನಾನು ಮದ್ರಾಸ್ ನಿಂದ ಮರಳಿ ಬಂದು ಇಲ್ಲಿ ಕೆಲವು ಹಿರಿಯನರನ್ನು ಭೇಟಿಯಾದೆ. ಆವತ್ತು 20 ವರ್ಷದ ಮುಂದೆ ಮಾಡಬೇಕಿದ್ದ ಸಿನಿಮಾವನ್ನು ಇವತ್ತು ಯಾಕೆ ಮಾಡಿದ್ದೀಯಾ ಅಂತಾ ಪ್ರಶ್ನೆ ಮಾಡಿದ್ದರು.
Advertisement
ಅನುಭವ ರೀ ರಿಲೀಸ್ ಆಗಿದ್ದು ಯಾಕೆ?
ಅನುಭವ ಸಿನಿಮಾ ರಿಲೀಸ್ ಮಾಡಿದ್ದಾಗ ಇದು 20 ವರ್ಷ ಮುಂದೆ ಮಾಡಬೇಕಿತ್ತು ಅಂತಾ ಕೆಲವರು ಹೇಳಿದ್ದರು. ಹಾಗಾಗಿ ಸಿನಿಮಾ ಮತ್ತೊಮ್ಮೆ ರಿಲೀಸ್ ಮಾಡಲಾಯಿತು. ಅನುಭವ ಸಿನಿಮಾ ಸಾರ್ವಕಾಲಿಕ ಸತ್ಯದ ಕಥೆಯನ್ನು ಹೊಂದಿದೆ. ಅನುಭವ ಸಿನಿಮಾವನ್ನು ಇಂದಿನ ಪೀಳಿಗೆಯ ಜನರು ನೋಡಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯಲು ಸಿನಿಮಾ ಮತ್ತೊಮ್ಮೆ ಬಿಡುಗಡೆ ಮಾಡಲಾಯಿತು.
Advertisement
ಡಿಫರೆಂಟ್ ಸಿನಿಮಾದ ಐಡಿಯಾ ಬಂದಿದ್ದು ಹೇಗೆ?
ಫಸ್ಟ್ ‘ಅಪರೂಪದ ಅತಿಥಿಗಳು’ ಎಂಬ ಕಾಮಿಡಿ ಸಿನಿಮಾ ಮಾಡಿದೆ. ನಂತರ ‘ಅಪರಿಚಿತ’ ಎಂಬ ಹಾರರ್ ಸಿನಿಮಾ. ಎರಡು ವಿಭಿನ್ನ ಸಿನಿಮಾ ಮಾಡಿದ ನಂತರ ಮುಂದೆ ಏನು ಎಂಬ ಪ್ರಶ್ನೆ ಬಂದಾಗ ಒಮ್ಮೆ ಸತ್ಯಜಿತ್ ರೇ ಅವರ ‘ಬಾಲಿಕಾ ಮಧು’ ಸಿನಿಮಾ ನೋಡಿದಾಗ ಅನುಭವ ಚಿತ್ರದ ಐಡಿಯಾ ಬಂತು. ಅಲ್ಲಿ ಶರ್ಮಿಳಾ ಟ್ಯಾಗೋರ್ ಚಿಕ್ಕ ಬಾಲಕಿಯಾಗಿ ನಟಿಸಿದ್ದರು. ಸಿನಿಮಾ ನೋಡುವ ಮುಂಚೆ ಒಂದು ದಿನ ನಮ್ಮ ತಾಯಿ, ದೂರದ ಸಂಬಂಧಿಕರ ಮನೆಯಲ್ಲಿ ಚಿಕ್ಕ ಹುಡುಗಿ ಜೊತೆ ನಡೆದಿರುವ ಘಟನೆ ಬಗ್ಗೆ ಹೇಳಿದ್ದರು. ಆ ಸತ್ಯ ಕಥೆಯನ್ನು ಆಧಾರವಾಗಿಟ್ಟುಕೊಂಡು ಅನುಭವ ಸಿನಿಮಾ ಮಾಡಲಾಗಿತ್ತು.
ಇಂದಿನ ಸಿನಿಮಾ ಹೇಗಿದೆ?
ಇಂದು ಸಿನಿಮಾದ ಕಥೆಯನ್ನು ಹೇಳುವ ಶೈಲಿ ಬದಲಾಗಿದೆ. ಅನುಭವ ಚಿತ್ರದ ಕಥೆ ಇಂದಿಗೂ ಚರ್ಚೆಗೆ ಒಳಪಡುತ್ತದೆ. ಇಂದು ಎಕ್ಸ್ ಪೋಸ್ ಅಂತಾ ಹೇಳುವ ಯಾವ ಸೀನ್‍ಗಳು ಅನುಭವ ಸಿನಿಮಾ ಹೊಂದಿಲ್ಲ. ಅಂದು ಸಿನಿಮಾ ನೋಡಿದ ಬಹಳಷ್ಟು ಜನ ತಮ್ಮ ಸುತ್ತಮುತ್ತಲಿನ ಘಟನೆಗಳೊಂದಿಗೆ ಹೋಲಿಕೆ ಮಾಡಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಆನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗಿನ ಜಾವ ಸುಮಾರು 3.30ಕ್ಕೆ ನಿಧನ ಹೊಂದಿದ್ದಾರೆ. ಬಸವನಗುಡಿಯ ಎನ್‍ಆರ್ ಕಾಲೋನಿಯ ಎಪಿಎಸ್ ಕಾಲೇಜ್ ಗ್ರೌಂಡ್‍ನಲ್ಲಿ ಕಾಶಿನಾಥ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಾಶಿನಾಥ್ ಅವರ ಮಗಳು ದುಬೈನಿಂದ ಇಂದು ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿಗೆ ಬಂದ ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ.
https://www.youtube.com/watch?v=LxyUcIpnDwg