ಲಕ್ನೋ: ಹಿಂದೂಗಳ ಪುಣ್ಯಭೂಮಿಯಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಮಂದಿರ ಜೀರ್ಣೋದ್ಧಾರವಾಗಿದೆ. ಸ್ವಕ್ಷೇತ್ರವೂ ಆಗಿರುವ ವಾರಾಣಸಿಯ ಗಂಗಾತಟದ ಮೇಲಿನ ಕಾಶಿ ವಿಶ್ವನಾಥ ಕಾರಿಡಾರನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಸುಮಾರು 800 ಕೋಟಿ ವೆಚ್ಚದ `ಕಾಶಿ ವಿಶ್ವನಾಥ ಧಾಮ್’ ಯೋಜನೆಗೆ ಮೊದಲ ಹಂತದಲ್ಲಿ ದೇಗುಲ ಪುನಃಶ್ಚೇತನಕ್ಕೆ 339 ಕೋಟಿ ಖರ್ಚಾಗಿದೆ.
Advertisement
2019ರ ಮಾರ್ಚ್ 8 ರಂದು `ದಿವ್ಯ ಕಾಶಿ; ಭವ್ಯ ಕಾಶಿ’ ಹೆಸರಿನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ ಕಾಲಕಾಲಕ್ಕೆ ಯೋಜನೆ ಸಂಪೂರ್ಣ ಪ್ರಗತಿಯ ಮಾಹಿತಿ ಪಡೆದು, ಖುದ್ದು ಪರಿಶೀಲಿಸ್ತಿದ್ದರು. ಕಿಷ್ಕಿಂದೆಯಂತಿದ್ದ ಕಾಶಿಯಲ್ಲಿ ಗತಕಾಲದ ವೈಭವ ಮರುಕಳಿಸಿದೆ. ಪಾರಂಪರಿಕತೆಯನ್ನು ಕಾಪಾಡಿಕೊಂಡೇ ವಿಶ್ವನಾಥನ ಸನ್ನಿಧಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಯೋಜನೆಯ ಎರಡನೇ ಹಂತದಲ್ಲಿ ಗಂಗಾ ನದಿ ತೀರ ಸಮಗ್ರ ಅಭಿವೃದ್ಧಿಯಾಗಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ
Advertisement
Advertisement
ಬನಾರಸ್‍ನಲ್ಲಿ ಪ್ರಧಾನಿ ಮೋದಿ:
ಕೊರೊನಾದಿಂದಾಗಿ ಹಲವು ತಿಂಗಳ ಬಳಿಕ ಬೆಳಗ್ಗೆ 11 ಗಂಟೆಗೆ ವಾರಾಣಸಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ ಬರಮಾಡಿಕೊಂಡರು. ಬಳಿಕ ಏರ್‍ಪೋರ್ಟ್‍ನಿಂದ ಕಾರಿನ ಮೂಲಕ ತೆರಳುವಾಗ ಕಾರ್ಯಕರ್ತರು ಗುಲಾಬಿ ಹೂವಿನ ಮಳೆ ಸುರಿಸಿದರು. ದಾರಿ ಮಧ್ಯೆ ಕಾರಿನಲ್ಲಿ ಕೂತಿದ್ದ ಮೋದಿಗೆ ಸ್ವಾಮೀಜಿಯೊಬ್ಬರು ಪೇಟ ತೊಡಿಸಿ, ಕೇಸರಿ ಶಾಲು ಹೊದಿಸಿದರು. ಮೋದಿ ಅವರು ಹಸನ್ಮುಖಿಯಾಗಿ ಸ್ವೀಕರಿಸಿದರು. ಈ ವೇಳೆ, ಮೋದಿ.. ಮೋದಿ.. ಹರಹರ ಮಹಾದೇವ್ ಅನ್ನೋ ಘೋಷಣೆ ಮುಗಿಲು ಮುಟ್ಟಿತ್ತು.
Advertisement
ಕಾಲಭೈರವೇಶ್ವರನಿಗೆ ಪೂಜೆ:
ನರೇಂದ್ರ ಮೋದಿ ಮೊದಲಿಗೆ ಕಾಲಭೈರವೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕಾಲಭೈರವೇಶ್ವರನಿಗೆ ಶಿರಬಾಗಿ ನಮಿಸಿದರು. ಬಳಿಕ ಮಂಗಳಾರತಿ ಮಾಡಿ ವಿಶೇಷ ಪೂಜೆ ಸಲ್ಲಿಸಿ, ದೇಗುಲ ಪ್ರದಕ್ಷಿಣೆ ಹಾಕಿದರು. ಬಳಿಕ 11.30ರ ಸುಮಾರಿಗೆ ದೇಗುಲದಿಂದ ಹೊರಗೆ ಬರುತ್ತಿದ್ದಂತೆ ಜನರತ್ತ ಕೈ ಬೀಸಿದ್ರು. ನೆರೆದಿದ್ದ ಜನಸ್ತೋಮ ಮೋದಿ ಮೋದಿ ಅಂತ ಘೋಷ ಮೊಳಗಿಸಿತು.
ಕಾಶಿ ವೀಕ್ಷಣೆ:
ಖಿರಕಿಯ ಘಾಟ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಂದ ಅಲ್ಕಾನಂದ ಡಬಲ್ ಡೆಕ್ಕರ್ ಕ್ರೂಸ್‍ನಲ್ಲಿ ವಿಹಾರ ಮಾಡುತ್ತಾ ಲಲಿತ್ ಘಾಟ್‍ಗೆ ಆಗಮಿಸಿದ್ದರು. ರುದ್ರಾಕ್ಷಿ ಹಾರ ಧರಿಸಿದ್ದ ಮೋದಿ, ಪುನಃಶ್ಚೇತನಗೊಂಡ ಕಾಶಿ ವೀಕ್ಷಿಸಿದ್ರು. ಪ್ರಧಾನಿ ಮೋದಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ರು. ಈ ವೇಳೆ, ಇಬ್ಬರೂ ಪರಸ್ಪರ ವಿಷಯ ವಿನಿಮಯ ಮಾಡಿಕೊಂಡರು.
ಗಂಗಾ ಪುಣ್ಯಸ್ನಾನ:
ಮಧ್ಯಾಹ್ನ 12:15ರ ಸುಮಾರಿಗೆ ಬಳಿಕ ಲಲಿತ್ ಘಾಟ್‍ಗೆ ಬಂದಿಳಿದ ಮೋದಿ, ಕಾವಿ ಬಟ್ಟೆ ತೊಟ್ಟು ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದರು. ರುದ್ರಾಕ್ಷಿ ಮಾಲೆ ಹಿಡಿದು ಜಪಿಸುತ್ತಾ ಗಂಗೆಗೆ ಅಘ್ರ್ಯ, ಗುಲಾಬಿ ಎಸಳುಗಳನ್ನು ಅರ್ಪಿಸಿದರು. ತಾಯಿ ಗಂಗೆಯ ಸ್ಪರ್ಶದಿಂದ ಕೃತಾರ್ಥನಾದೆ. ವಿಶ್ವನಾಥನ ಧಾಮಕ್ಕಾಗಿ ಆಶೀರ್ವದಿಸಿ ಭಾವ ಮೂಡಿತು ಅಂತ ಟ್ವೀಟ್ ಕೂಡ ಮಾಡಿದ್ದರು. ಇದನ್ನೂ ಓದಿ: ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?
ವಿಶ್ವನಾಥನಿಗೆ ಪೂಜೆ:
ಪವಿತ್ರ ಸ್ನಾನದ ಬಳಿಕ ಮುಖ್ಯ ದೇಗುಲದ ಬಣ್ಣ ಇರೋ ಬಂಗಾರ ವರ್ಣದ ಉಡುಗೆ ಧರಿಸಿ, ಗಂಗೆಯಿಂದ ನೇರವಾಗಿ ಗೋಚರಿಸುವ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದರು. ಪುರೋಹಿತರು ತಿಲಕವಿಟ್ಟು ಸ್ವಾಗತಿಸಿದರು. ವಿಶ್ವನಾಥನಿಗೆ ಅರಶಿನ, ಹಾಲಿನ ಅಭಿಷೇಕ ಮಾಡಿದ್ರು. ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸಿ, ಪೂಜೆ ಸಲ್ಲಿಸಿ, ಮಂತ್ರ ಪಠಣದೊಂದಿಗೆ ವಿಶೇಷ ಆರತಿ ಬೆಳಗಿದರು.
ಕಾರಿಡಾರ್ ಇನಾಗ್ರೇಷನ್:
ಕಾಶಿ ವಿಶ್ವನಾಥ್ ಧಾಮ್‍ನ ಮೊದಲ ಹಂತದ 339 ಕೋಟಿ ಮೊತ್ತದ ಕಾರಿಡಾರ್ ಉದ್ಘಾಟಿಸಿದ ಮೋದಿ, ಕಾಶಿ ನೆಲದ ಮಹತ್ವ ವಿವರಿಸಿದರು. ಕಾಶಿ ಅಂದರೆ ಅವಿನಾಶಿನಿ. ಕಾಶಿ ನಮ್ಮ ಸಂಸ್ಕೃತಿಯ ಧ್ಯೋತಕ. ಕಾಶಿ ಎಂದರೆ ಭಾವುಕನಾಗುತ್ತೇನೆ. ಇಲ್ಲಿ ದೈವಿಕ ವಾತಾವರಣ ಇದೆ. ಕಾಶಿ ಎಂದರೆ ಇಲ್ಲಿ ಮೃತ್ಯು ಕೂಡ ಮಂಗಳವೇ. ಕಾಶಿಯಲ್ಲಿ ಸತ್ಯವೇ ಸಂಸ್ಕಾರ. ಕಾಶಿಯಲ್ಲಿ ಪ್ರೇಮವೇ ಪರಂಪರೆ. ಇಲ್ಲಿ ಇರೋದು ಒಂದೇ ಸರ್ಕಾರ. ಅದು ಶಿವನ ಸರ್ಕಾರ. ಇಲ್ಲಿ ಯಾರೇ ಬರಬೇಕು ಅಂದರೂ ಶಿವನ ಅನುಗ್ರಹ ಇರಬೇಕು. ಅಂಥದ್ದೊಂದು ಪುಣ್ಯಭೂಮಿಯಲ್ಲಿ ಇಂಥಹ ಕಾರ್ಯ ಮಾಡುವ ಅವಕಾಶ ನಮ್ಮ ಸರ್ಕಾರಕ್ಕೆ ಸಿಕ್ಕಿರೋದು ನಮ್ಮ ಪುಣ್ಯ ಅಂದ್ರು. ನಮ್ಮ ಸಂಸ್ಕøತಿ, ಪರಂಪರೆ ಮೇಲೆ ಔರಂಗಜೇಬ್ ಎಂಬ ತೀವ್ರಗಾಮಿ ಆಕ್ರಮಣ ಮಾಡಿದ್ದ, ಅದೇ ಸಮಯಕ್ಕೆ ಶಿವಾಜಿಯ ಹುಟ್ಟೂ ಆಗಿತ್ತು ಅಂದ್ರು. ಕಾಶಿ ಕಾರಿಡಾರ್ ಲೋಕಾರ್ಪಣೆ ನೆನಪಿಗೆ ಗಿಡ ನೆಡಲಾಯಿತು. ಉತ್ತರ ಪ್ರದೇಶ ಸರ್ಕಾರ ನೂತನ ಕಾಶಿಯ ವಾಸ್ತುಶಿಲ್ಪ ರಚನೆಯನ್ನಿತ್ತು ಸನ್ಮಾನಿಸಿದ್ರು. ಇದನ್ನೂ ಓದಿ: ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಫೋಟೋಗೆ ಪ್ರಶ್ನೆ ಯಾಕೆ? ಹೆಮ್ಮೆ ಪಡಿ – ಕೇರಳ ಹೈಕೋರ್ಟ್
काशी की गंगा आरती हमेशा अंतर्मन को नई ऊर्जा से भर देती है।
आज काशी का बड़ा सपना पूरा होने के बाद दशाश्वमेध घाट पर गंगा आरती में शामिल हुआ और मां गंगा को उनकी कृपा के लिए नमन किया।
नमामि गंगे तव पाद पंकजम्। pic.twitter.com/pPnkjmgzxa
— Narendra Modi (@narendramodi) December 13, 2021
ಕಾರಿಡಾರ್ ಉದ್ಘಾಟನೆ, ಭಾಷಣ ಬಳಿಕ ಅಲ್ಲಿಯೇ ಮುಂದಿನ ಸಾಲಿನಲ್ಲಿ ಕೂತಿದ್ದ, ಕಾಶಿ ವಿಶ್ವನಾಥ್ ಧಾಮ್ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದ ಕಾರ್ಮಿಕರು, ಎಂಜಿನಿಯರ್‍ಗಳು ಸೇರಿದಂತೆ ಕೆಲಸ ಮಾಡಿದವರ ಮೇಲೆ ಹೂ ಸುರಿದು ಗೌರವ ಸಲ್ಲಿಸಿದರು. ನಂತರ ಪೌರ ಕಾರ್ಮಿಕರ ಜೊತೆಗೆ ಫೋಟೋಗೆ ಪೋಸ್ ಕೊಟ್ಟರು. ತದನಂತರ ಪೌರ ಕಾರ್ಮಿಕರ ಜೊತೆ ಸಹಪಂಕ್ತಿಯಲ್ಲಿ ಮಧ್ಯಾಹ್ನದ ಭೋಜನ ಸವಿದರು. ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದರು. ಕೆಲ ಸಮಯದ ಬಳಿಕ ಮೊದಲ ಹಂತದ ಕಾರಿಡಾರ್ ಯೋಜನೆಯನ್ನು ಪರಿಶೀಲಿಸಿದರು. ಯೋಗಿ ಆದಿತ್ಯನಾಥ್ ಕೆಲವು ಮಾಹಿತಿ ಹಂಚಿಕೊಂಡರು. ಅಲ್ಲಿಂದ ತಮ್ಮ ದೋಣಿ ವಿಹಾರ ಮುಂದುವರಿಸಿ, ಲಲಿತ್ ಘಾಟ್‍ನಿಂದ ರವಿದಾಸ್ ಘಾಟ್‍ಗೆ ತೆರಳಿದರು. ಘಾಟ್‍ಗಳಲ್ಲಿ ನಿಂತಿದ್ದ ಜನರತ್ತ ಕೈ ಬೀಸಿದರು. ಇಷ್ಟೊತ್ತಿಗೆ ಸಂಜೆ 4 ಗಂಟೆ ಆಗಿತ್ತು.
काशी वो है… pic.twitter.com/lrqEI46lTs
— Narendra Modi (@narendramodi) December 13, 2021
ಗಂಗಾರತಿಯಲ್ಲಿ ಭಾಗಿ:
ನಂತರ 6 ಗಂಟೆ ಸುಮಾರಿಗೆ ಗಂಗಾರತಿ ಮಾಡಿ ಮೋದಿ ಭಕ್ತಿ ಪರವಶರಾದರು. ಇದನ್ನೂ ಓದಿ: ತಾಯಿ ಗಂಗೆ, ಕಾಶಿ ವಿಶ್ವನಾಥ ಎಲ್ಲರಿಗೂ ಸೇರಿದವರು: ಮೋದಿ
ಕಾರಿಡಾರ್ ವಿಶೇಷತೆ ಏನು?:
`ದಿವ್ಯ ಕಾಶಿ, ಭವ್ಯ ಕಾಶಿ’ 5 ಲಕ್ಷ ಚದರ ಅಡಿ ಪ್ರದೇಶಕ್ಕೆ ದೇಗುಲ ಸಂಕಿರ್ಣ ವಿಸ್ತರಣೆ. ಈ ಹಿಂದೆ 3 ಸಾವಿರ ಚದರ ಅಡಿಯಲ್ಲಿ ದೇಗುಲ ಕಿಷ್ಕಿಂದೆಯಂತಿತ್ತು. ಕಾಶಿ ವಿಶ್ವನಾಥ ದೇಗುಲಕ್ಕೂ ಗಂಗಾನದಿಗೂ ನೇರ ಸಂಪರ್ಕ ಕಲ್ಪಿಸಲಾಗಿದೆ. ಗಂಗಾ ನದಿಯಲ್ಲಿ ಮಿಂದು ನೇರ ವಿಶ್ವನಾಥನ ದರ್ಶನಕ್ಕೆ ಅನುಕೂಲ. ವಿಶೇಷ ಚೇತನರು, ಹಿರಿಯ ನಾಗರಿಕರ ಅನುಕೂಲಕ್ಕೆ ಎಸ್ಕಲೇಟರ್ ವ್ಯವಸ್ಥೆ. ಭಕ್ತರು, ಯಾತ್ರಿಗಳ ಅನುಕೂಲಕ್ಕಾಗಿ 23 ಕಟ್ಟಡಗಳ ನಿರ್ಮಾಣ. ಮಂದಿರ ಸುತ್ತಲಿನ 300 ಕಟ್ಟಡಗಳ ಕಾನೂನುಬದ್ಧ ಸ್ವಾಧೀನ, ನೆಲಸಮ. 1400ಕ್ಕೂ ಹೆಚ್ಚು ವರ್ತಕರು, ಬಾಡಿಗೆದಾರರು, ಮಾಲೀಕರ ಮನವೊಲಿಕೆ ಮಾಡಿ 40ಕ್ಕೂ ಹೆಚ್ಚು ಪುರಾತನ ಸಣ್ಣ ದೇಗುಲಗಳು ಪತ್ತೆಯಾಗಿತ್ತು ಅದನ್ನು ನವೀಕರಣ ಮಾಡಲಾಗಿದ್ದು, ವಾಸ್ತು ಶಿಲ್ಪಿ ಬಿಮಲ್ ಪಟೇಲ್ ಕಾರಿಡಾರ್‍ನ ರೂವಾರಿ.
ಇಂದು ಏನೇನು ಉದ್ಘಾಟನೆಯಾಗಿದೆ?
– ಬೃಹತ್ ಆವರಣ, ವಾರಾಣಸಿ ಸಿಟಿ ವೀಕ್ಷಣಾ ಗ್ಯಾಲರಿ
– ಮ್ಯೂಸಿಯಂ, ವಿವಿಧೋದ್ದೇಶದ ಆಡಿಟೋರಿಯಮ್‍ಗಳು
– ಸಭಾಂಗಣ, ಭಕ್ತರ ಸೌಲಭ್ಯ ಕೇಂದ್ರ
– ಅರ್ಚಕರು, ಸೇವಾದಾರರಿಗೆ ಆಶ್ರಯ
– ಏಕಕಾಲಕ್ಕೆ 1 ಲಕ್ಷ ಭಕ್ತರ ಮಹಾಸಂಗಮಕ್ಕೆ ಅವಕಾಶ
– ಇದಕ್ಕಾಗಿ 7 ಸಾವಿರ ಚದರ ಮೀಟರ್ ವೇದಿಕೆ, 7 ಭವ್ಯ ಪ್ರವೇಶ ದ್ವಾರಗಳು
– ವೈದಿಕ- ಧಾರ್ಮಿಕ ಗ್ರಂಥಾಲಯ
– ಊಟ, ಉಪಾಹಾರ ಕೇಂದ್ರ
– ಕಟ್ಟಡಗಳ ಗೋಡೆಗಳಲ್ಲಿ ಶ್ಲೋಕ, ಸ್ತೋತ್ರ ಕೆತ್ತನೆ
– ಹಿಂದೊಮ್ಮೆ ದೇಗುಲ ಮರುಸ್ಥಾಪನೆಗೊಳಿಸಿದ್ದ ಮರಾಠ ರಾಣಿ ಅಭಿಲ್ಯಾಭಾಯ್ ಹೋಳ್ಕರ್ ಪ್ರತಿಮೆ ಉದ್ಘಾಟನೆ ಮಾಡಲಾಯಿತು.
ಕಾಶಿ ವಿಶ್ವನಾಥ ಕಾರಿಡಾರ್ ಲೋಕಾರ್ಪಣೆಯನ್ನು ದೇಶಾದ್ಯಂತ 51 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಬೃಹತ್ ಎಲ್‍ಇಡಿ ಪರದೆಗಳಲ್ಲಿ ನೇರ ಪ್ರಸಾರದ ಮೂಲಕ ಜನ ಕಣ್ತುಂಬಿಕೊಂಡರು.