ಮಂಗಳೂರು: ಕಾಸರಗೋಡಿನ (Kasaragod) ವೈದ್ಯನ (Doctor) ಸಾವಿನ ಹಿಂದೆ ಅನೇಕ ಟ್ವಿಸ್ಟ್ ದೊರೆತಿದ್ದು, ಲ್ಯಾಂಡ್ ಜಿಹಾದ್‍ನಿಂದ ಅವರನ್ನು ಕೊಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.
ನ.10ರಂದು ಉಡುಪಿ (Udupi) ಜಿಲ್ಲೆಯ ಕುಂದಾಪುರದ ಹಟ್ಟಿಯಂಗಡಿ ಬಳಿ ರೈಲ್ವೆ ಹಳಿಯಲ್ಲಿ ಅಪರಿಚಿತ ಶವ ಪತ್ತೆ ಆಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆ ಮೃತ ದೇಹವನ್ನು ಕಾಸರಗೋಡಿನ ದಂತ ವೈದ್ಯ ಡಾ. ಕೃಷ್ಣಮೂರ್ತಿ ಎಂದು ಗುರುತಿಸಿದ್ದರು. ಈ ಬಗ್ಗೆ ಪ್ರಖ್ಯಾತ ದಂತ ವೈದ್ಯನ ಸಾವಿನ ಬಗ್ಗೆ ಕೊಲೆ ಮಾಡಲಾಗಿದೆ ಎಂದು ವಿಹೆಚ್‍ಪಿ ಗಂಭೀರ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಹಾಗೂ ಕೃಷ್ಣಮೂರ್ತಿ ದೇಹದ ಮೇಲೆ ಆದ ಗಾಯವನ್ನು ನೋಡಿದ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ.
Advertisement
Advertisement
ಕೃಷ್ಣಮೂರ್ತಿ ಅವರು ಸುಮಾರು 30 ವರ್ಷಗಳಿಂದ ಮಂಗಳೂರು ಗಡಿ ಭಾಗದ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಆರು ತಿಂಗಳಿನಿಂದ ಜಾಗದ ವಿಚಾರದಲ್ಲಿ ಡಾ.ಕೃಷ್ಣಮೂರ್ತಿ ಅವರು ಲ್ಯಾಂಡ್ ಮಾಫಿಯಾ ಬೆನ್ನು ಬಿದ್ದಿತ್ತು. ಜಾಗ ಖರೀದಿ ವಿಚಾರದಲ್ಲಿ ಡಾ.ಕೃಷ್ಣಮೂರ್ತಿಗೆ ಸ್ಥಳೀಯ ಕೆಲ ಮುಸ್ಲಿಮರು ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅದಾದ ಬಳಿಕ ನ. 8ರಂದು ಬದಿಯಡ್ಕದ ಡಾ.ಕೃಷ್ಣಮೂರ್ತಿ ಅವರ ಕ್ಲಿನಿಕ್‍ಗೆ ಮುಸ್ಲಿಂ ಯುವತಿಯೊಬ್ಬಳು ಬಂದಿದ್ದಳು. ಈ ವೇಳೆ ಕ್ಲಿನಿಕ್‍ಗೆ ಬಂದಿದ್ದ ಮುಸ್ಲಿಂ ಯುವತಿ ಜೊತೆ ಕೃಷ್ಣಮೂರ್ತಿ ಅವರು ಅನುಚಿತ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
Advertisement
ಈ ಹಿನ್ನೆಲೆಯಲ್ಲಿ ಯುವಕರ ತಂಡ ಕೃಷ್ಣಮೂರ್ತಿಗೆ ಬೆದರಿಕೆವೊಡ್ಡಿ ಹಲ್ಲೆಗೆ ಮುಂದಾಗಿದ್ದರು. ಆ ಘಟನೆ ಬಳಿಕ ಡಾ.ಕೃಷ್ಣಮೂರ್ತಿ ನಾಪತ್ತೆಯಾಗಿದ್ದರು. ಅದಾದ ಬಳಿಕ ಉಡುಪಿಯ ಕುಂದಾಪುರ ಬಳಿಯ ರೈಲ್ವೆ ಟ್ರ್ಯಾಕ್ ಬಳಿ ಶವವಾಗಿ ಪತ್ತೆ ಆಗಿದ್ದರು. ಇದನ್ನೂ ಓದಿ: ಗಾಂಜಾ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಆರೋಪಿ ಸಾವು – ಸಿಐಡಿ ತನಿಖೆಗೆ ಶಿಫಾರಸು
Advertisement
ಇದೀಗ ಈ ಸಾವಿಗೆ ಅನೇಕ ಟ್ವಿಸ್ಟ್ ದೊರೆತಿದ್ದು, ಮುಸ್ಲಿಂ ಯುವತಿ ಮೂಲಕ ವೈದ್ಯರನ್ನು ಬ್ಲ್ಯಾಕ್‌ಮೇಲ್ ಮಾಡಿದ್ರಾ? ಬ್ಲ್ಯಾಕ್ ಮೇಲ್‍ಗೆ ಬೆದರಿ ಆತ್ಮಹತ್ಯೆ ಮಾಡಿಕೊಂಡರಾ ಡಾ.ಕೃಷ್ಣಮೂರ್ತಿ? ಲಕ್ಷ ಲಕ್ಷ ಹಣಕ್ಕೆ ಯುವತಿ ಮುಂದಿಟ್ಟು ಬ್ಲ್ಯಾಕ್‌ಮೇಲ್? ಲ್ಯಾಂಡ್ ಜಿಹಾದ್‍ಗೆ ಬಗ್ಗದ ದಂತ ವೈದ್ಯನಿಗೆ ಯುವತಿ ಮುಂದಿಟ್ಟು ಬ್ಲ್ಯಾಕ್ ಮೇಲ್ ಮಾಡಿದ್ರಾ ಎಂಬ ಪ್ರಶ್ನೆ ಮೂಡುತ್ತಿದೆ. ಇದನ್ನೂ ಓದಿ: ಸಹೋದರ ಮೊಬೈಲ್ ಪಾಸ್‌ವರ್ಡ್ ಬದಲಾಯಿಸಿದ್ದಕ್ಕೆ ಯುವತಿ ಆತ್ಮಹತ್ಯೆ
ಘಟನೆಗೆ ಸಂಬಂಧಿಸಿ ಮುಸ್ಲಿಂ ಲೀಗ್ ಮುಖಂಡ ಸೇರಿ ಐವರನ್ನು ಬದಿಯಡ್ಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತ್ ಕಾರ್ಯದರ್ಶಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತ್ ಪದಾಧಿಕಾರಿ ಮುಹಮ್ಮದ್ ಹನೀಫ್ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್, ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ನಿವಾಸಿ ಉಮರುಲ್ ಫಾರೂಕ್‍ನನ್ನು ವಶಪಡಿಸಿಕೊಳ್ಳಲಾಗಿದೆ.