Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಟಿ ಲೀಲಾವತಿ ನಿಧನಕ್ಕೆ ಕಸಾಪ ಅಧ್ಯಕ್ಷ ಜೋಶಿ ಕಂಬನಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ನಟಿ ಲೀಲಾವತಿ ನಿಧನಕ್ಕೆ ಕಸಾಪ ಅಧ್ಯಕ್ಷ ಜೋಶಿ ಕಂಬನಿ

Cinema

ನಟಿ ಲೀಲಾವತಿ ನಿಧನಕ್ಕೆ ಕಸಾಪ ಅಧ್ಯಕ್ಷ ಜೋಶಿ ಕಂಬನಿ

Public TV
Last updated: December 8, 2023 9:36 pm
Public TV
Share
2 Min Read
Leelavathi 5
SHARE

ಕನ್ನಡ (Sandalwood) ನಾಡಿನ ಹಿರಿಯ ನಟಿ ಲೀಲಾವತಿ (Leelavati) ಅವರು ಇಂದು ನಮ್ಮನ್ನು ಅಗಲಿದ್ದಾರೆ. ಕನ್ನಡದ ಕಲಾ ಸಾಧಕಿಯೊಬ್ಬರು ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ, ಸರಿಸುಮಾರು 6೦೦ ಚಿತ್ರಗಳಲ್ಲಿ ನಟಿಸುವ ಮೂಲಕ ದೇಶದ ಚಿತ್ರ ಜಗತ್ತಿಗೆ ಕನ್ನಡದ ಅಮ್ಮ ಎಂದು ಗುರುತಿಸಿಕೊಂಡ ಲೀಲಾವತಿಯವರ ನಿಧನ ವಾರ್ತೆ ಸಮಸ್ತ ಕನ್ನಡಿಗರಿಗೆ ಆಘಾತ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಸಂತಾಪ ಸೂಚಿಸಿದ್ದಾರೆ.

Leelavathi 1 1

ಲೀಲಾವತಿ ಅಮ್ಮನವರು ತಮ್ಮೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಹಿಂದೆ ದೂರದರ್ಶನದ ನಿರ್ದೇಶಕರಾಗಿದ್ದಾಗ ನಡೆಸಲಾಗುತ್ತಿರುವ ಮಧುರ ಮಧುರ ವೀ ಮಂಜುಳಗಾನ ಕಾರ್ಯಕ್ರಮದಲ್ಲಿ  ಅನೇಕ ಸಲ ಲೀಲಾವತಿಯವರು ಭಾಗವಹಿಸಿದ್ದರು. ಜೊತೆಗೆ ಅನೇಕ ಕಾರ್ಯಕ್ರಮಗಳಲ್ಲಿ ನಮ್ಮೊಂದಿಗೆ ಇದ್ದು ಸದಾ ಮಾರ್ಗದರ್ಶನವನ್ನು ನೀಡುತ್ತಿದ್ದರು. ಕನ್ನಡ ನಾಡು,ನುಡಿ, ಕಲೆ ಸಂಸ್ಕೃತಿಯ ಬಗ್ಗೆ ಅಪಾರ ಕಳಕಳಿ ಹೊಂದಿರುವ ಹಿರಿಯ ನಟಿ ಲೀಲಾವತಿ ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದರು.. ಕನ್ನಡ ಭಾಷೆಯಲ್ಲಿ ಬರೋಬ್ಬರಿ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಮತ್ತು ಸಂತ ತುಕಾರಾಂ ಮೊದಲಾದ ಚಿತ್ರಗಳಲ್ಲಿನ  ಸ್ಮರಣೀಯ ಅಭಿನಯಕ್ಕಾಗಿ ಅವರು ಹೆಸರುವಾಸಿಯಾಗಿದ್ದರು. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ‘ಡಾ.ರಾಜಕುಮಾರ್ ಪ್ರಶಸ್ತಿ’ಯನ್ನು 1999-2000 ಸಾಲಿನಲ್ಲಿ ಲೀಲಾವಯವರು ಪಡೆದಿದ್ದು ಅಂದು ತಮ್ಮ ಚಿತ್ರ ಬದುಕಿನ ಸಾರ್ಥಕತೆಗಳನ್ನು ವ್ಯಕ್ತಪಡಿಸಿದ ಕ್ಷಣಗಳನ್ನು ನಾಡೋಜ ಡಾ. ಮಹೇಶ ಜೋಶಿ ಅವರು ನೆನಪಿಸಿಕೊಂಡರು.

Leelavathi 2 1

2008ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ಚಿಕ್ಕಂದಿನಿಂದಲೇ ಕಲೆಯ ಕುರಿತು  ಆಸಕ್ತಿಯನ್ನು  ಹೊಂದಿದ್ದ ನಟಿ ಲೀಲಾವತಿ ಅವರು, ಮೈಸೂರಿನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ವೃತ್ತಿ ರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ನಂತರದ ದಿನಗಳಲ್ಲಿ ಚಿತ್ರರಂಗವನ್ನು ಪ್ರವೇಶಿಸಿ ತಮ್ಮ ಕಲಾ ಪ್ರತಿಭೆಯನ್ನು ಮೆರೆದ ಲೀಲಾವತಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಲೀಲಾವತಿಯವರ ಮೂಲ ಹೆಸರು ಲೀಲಾಕಿರಣ್.  ಅಭಿನಯದ ಆಕಾಂಕ್ಷೆಯನ್ನು  ಹೊತ್ತು ಮೈಸೂರಿಗೆ ಬಂದಿಳಿದ ಅವರಿಗೆ ದೊರೆತಿದ್ದು 1949ರಲ್ಲಿ ಡಿ. ಶಂಕರಸಿಂಗ್ ಅವರ  ನಾಗಕನ್ನಿಕಾ ಚಿತ್ರದಲ್ಲಿ ನಾಯಕಿ ನಾಗಕನ್ಯೆಗೆ ಗಾಳಿ ಬೀಸುವ ಸಖಿ ಪಾತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಮಾಡಿದ ಲೀಲಾವತಿಯವರ  ಸಾಧನೆ ಪ್ರತಿಯೊಬ್ಬ ಕನ್ನಡಿಗರು ಮೆಚ್ಚಿಕೊಳ್ಳುವಂತಹದ್ದು ಎನ್ನುವ ಅಭಿಪ್ರಾಯವನ್ನು ನಾಡೋಜ ಡಾ. ಮಹೇಶ ಜೋಶಿ ಅವರು ವ್ಯಕ್ತಪಡಿಸಿದರು. ಲೀಲಾವತಿಯವರು ನಟಿಸಿದ ʻಕನ್ನಡದ ಕಂದʼ, ‘ಗೆಜ್ಜೆಪೂಜೆ’, “ಸಿಪಾಯಿ ರಾಮು’, ‘ಡಾಕ್ಟರ್ ಕೃಷ್ಣ’ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಮಂಡಳಿಯ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು.

 

ಮಗ ವಿನೋದ್ ರಾಜ್ ಅವರ ಜೊತೆ  ನೆಲಮಂಗಲ ಸಮೀಪದ ಸೋಲದೇವನಹಳ್ಳಿಯಲ್ಲಿ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದ ಅವರು ಜನ ಸೇವೆಯಲ್ಲಿ ಸಹ ತೊಡಗಿಕೊಂಡಿದ್ದರು. ನಾಡು, ನುಡಿ ಕಲೆ ಸಂಸ್ಕೃತಿಗೆ ನಿತ್ಯವೂ ಗೌರವಿಸುವ ಲೀಲಾವತಿ ಸಮಸ್ತ ಕನ್ನಡಿಗರಿಂದ ಅಮ್ಮಾ ಎಂದೇ ಕರೆಸಿಕೊಂಡವರು. ಅವರ ಸಾವು ಕನ್ನಡ ಚಿತ್ರರಂಗಕ್ಕೆ, ಕನ್ನಡ ನಾಡಿಗೆ ಅವರ ಅಭಿಮಾನಿಗಳ ಪಾಲಿಗೆ ತುಂಬಲಾರದ ನಷ್ಟವಾಗಿದೆ. ಲೀಲಾವತಿಯವರು ಕನ್ನಡ ಭಾಷೆ, ನಾಡು ನುಡಿಗೆ ಸಲ್ಲಿಸಿದ  ಸೇವೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಗೌರವದಿಂದ ಸ್ಮರಿಸಿ, ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕಂಬನಿ ಮಿಡಿದಿದ್ದಾರೆ.

TAGGED:LeelavatisandalwoodSoladevanahalliಲೀಲಾವತಿಸೋಲದೇವನಹಳ್ಳಿಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

Sharukh khan son aryan khan
ಆರ್ಯನ್ ಖಾನ್ ಜೊತೆಗೆ ಸ್ಟಾರ್ ಕಿಡ್‌ಗಳಿಗೆ ಕಾನೂನು ಕಂಟಕ? – ಕಂಪ್ಲೀಟ್ ತನಿಖೆ ನಡೆಸಲು ಗೃಹ ಸಚಿವರ ಸೂಚನೆ
Bengaluru City Cinema Latest Top Stories
malayalam actor dileep 3
ಮಂಜು ಹೇಳಿಕೆಯ ನಂತ್ರ ಸಂಚು, ಕೆರಿಯರ್ ನಾಶಮಾಡಲೆಂದೇ ಸಿಲುಕಿಸಲಾಗಿತ್ತು- ದಿಲೀಪ್‌ ಮೊದಲ ಮಾತು
Cinema Court Latest Main Post National South cinema
Bigg Boss 19 Winner Gaurav Khanna
Bigg Boss 19: ಹಿಂದಿ ಬಿಗ್‌ ಬಾಸ್‌ ಟ್ರೋಫಿ ಗೆದ್ದ ಗೌರವ್‌ ಖನ್ನಾ – 50 ಲಕ್ಷ ನಗದು ಬಹುಮಾನ
Bollywood Cinema Latest Top Stories TV Shows
dileep
ಬಹುಭಾಷಾ ನಟಿಯ ಕಿಡ್ನಾಪ್‌, ರೇಪ್‌ ಕೇಸ್‌ – ನಟ ದಿಲೀಪ್ ಖುಲಾಸೆ, 6 ಮಂದಿ ದೋಷಿ
Cinema Court Latest Main Post National South cinema

You Might Also Like

Ram Mohan Naidu 1
Latest

ದೇಶದಲ್ಲಿ ಹೊಸ ವಿಮಾನಯಾನ ಕಂಪನಿ ಆರಂಭಿಸಲು ಬೆಸ್ಟ್‌ ಟೈಂ : ರಾಮ್ ಮೋಹನ್ ನಾಯ್ಡು

Public TV
By Public TV
3 minutes ago
Siddaramaiah HD Kumaraswamy
Districts

ಮಂಡ್ಯಕ್ಕೆ ನನ್ನ ಕೊಡುಗೆ ಬಗ್ಗೆ ಹೇಳ್ತೀನಿ, ನಿಮ್ಮ ಕೊಡುಗೆ ಪಟ್ಟಿ ಕೊಡಿ – ಸಿಎಂಗೆ ಹೆಚ್‌ಡಿಕೆ ಸವಾಲ್‌

Public TV
By Public TV
9 minutes ago
CT Ravi 1
Belgaum

ಸಿಎಂ ಹುದ್ದೆಗೆ 500 ಕೋಟಿ ಕೊಡುವುದಾಗಿದ್ರೆ ಕನಕಪುರ, ಬೆಳಗಾವಿಯ ಸಾಹುಕಾರ ರೇಸ್‌ನಲ್ಲಿ ಇರ್ತಿದ್ರು: ಸಿ.ಟಿ ರವಿ

Public TV
By Public TV
13 minutes ago
Madhu Bangarappa 1
Belgaum

ನಮ್ಮ ರಕ್ತದಲ್ಲಿ ಕನ್ನಡವಿದೆ, ಯಾವುದೇ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲ್ಲ: ಮಧು ಬಂಗಾರಪ್ಪ

Public TV
By Public TV
18 minutes ago
DEVARAJE GOWDA
Districts

ಸಿಎಂ ಹಾದಿಯಾಗಿ 224 ಜನ ಎಂಎಲ್‌ಎ ಅನರ್ಹವಾಗೋದು ಖಚಿತ – ವಕೀಲ ದೇವರಾಜೇಗೌಡ ಬಾಂಬ್‌

Public TV
By Public TV
31 minutes ago
KH Muniyappa 2
Belgaum

ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ, ಮಾರಾಟ; 570 ಜನರ ಬಂಧನ: ಮುನಿಯಪ್ಪ

Public TV
By Public TV
34 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?