ಬೆಂಗಳೂರು: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊದಲ ತಲೆದಂಡವಾಗಿದ್ದು, ಭ್ರಷ್ಟಾಚಾರ ಆರೋಪದಡಿ ಹಿರಿಯ ಕೆಎಎಸ್ ಅಧಿಕಾರಿಯನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.
ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಎಲಿಷಾ ಆಂಡ್ರೂಸ್ ಅವರನ್ನು ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಉಪಕಾರ್ಯದರ್ಶಿ-3 ಹುದ್ದೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು.
Advertisement
Advertisement
ಬಿಬಿಎಂಪಿ ಇಂಜಿನಿಯರ್‌ಗಳ ಪದೋನ್ನತಿಗೆ ಸಂಬಂಧಿಸಿದಂತೆ ಇಂಜಿನಿಯರ್‌ಗಳಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ಕಡತ ವಿಲೇವಾರಿಯಲ್ಲಿ ನಿಯಮ ಉಲ್ಲಂಘಿಸಿದ ಆರೋಪವನ್ನು ಎಲಿಷಾ ಆಂಡ್ರೂಸ್ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಜಹಾಂಗೀರ್‌ಪುರಿ ಗಲಭೆ ಪ್ರಕರಣಕ್ಕೆ ಟ್ವಿಸ್ಟ್ – ಇಡಿಗೆ ಪತ್ರ ಬರೆದ ದೆಹಲಿ ಪೊಲೀಸ್ ಆಯುಕ್ತ
Advertisement
ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತವಿಖೆಗೆ ಆದೇಶಿಸಿದ್ದರು. ಮೇಲ್ನೋಟಕ್ಕೆ ಆರೋಪ ನಿಜವೆಂದು ಕಂಡ ಬಂದ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಜರುಗಿಸಿದೆ. ಅಲ್ಲದೇ ಅಧಿಕಾರಿ ತಮ್ಮ ಮೇಲಿನ ಆರೋಪ ನಿರಾಕರಿಸಿಲ್ಲ ಎಂದು ಸರ್ಕಾರ ತಿಳಿಸಿದೆ. ಪ್ರಮುಖ ಅಂಶ ಅಂದರೆ ಅಮಾನತಾದ ಎಲಿಷಾ ಆಂಡ್ರೂಸ್ ರಾಜ್ಯ ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿದ್ದಾರೆ. 40%ಭ್ರಷ್ಟಾಚಾರ ಆರೋಪಗಳ ನಡುವೆ ಸರ್ಕಾರ ಹಿರಿಯ ಅಧಿಕಾರಿಯ ತಲೆ ದಂಡ ಮಾಡಿರುವುದು ಮಹತ್ವ ಪಡೆದಿದೆ. ಇದನ್ನೂ ಓದಿ: ಮೇವು ಹಗರಣ – ಲಾಲೂ ಪ್ರಸಾದ್ ಯಾದವ್‌ಗೆ ಜಾಮೀನು