ಕಾರವಾರ: ಕೊರೊನಾ ಸಂದರ್ಭದಲ್ಲಿ ಪ್ರಯಾಣಿಕರ ಕೊರತೆಯಿಂದ ಬಂದ್ ಆಗಿದ್ದ ಕಾರವಾರ-ಗೋವಾದ ಮಡಗಾಂವ್ ರೈಲುಸಂಚಾರ ಪುನರಾರಂಭಕ್ಕೆ ಕಾರವಾರ ಶಾಸಕಿ ರೂಪಾಲಿ ನಾಯ್ಕ್ ಹಾಗೂ ಸಂಸದ ಅನಂತ್‍ಕುಮಾರ್ ಹೆಗ್ಡೆ ಮನವಿ ಮೇರೆಗೆ ಕೇಂದ್ರ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ.
Advertisement
ಕಾರವಾರದಿಂದ ಗೋವಾಕ್ಕೆ ಪ್ರತಿ ದಿನ ಉದ್ಯೋಗಕ್ಕೆ ತೆರಳುತ್ತಿದ್ದ ಜನರಿಗೆ ಪ್ರಯಾಣಿಸಲು ಸಹಕಾರಿ ಆಗುತ್ತಿದ್ದ ಕೊಂಕಣ ರೈಲ್ವೇ ಇಲಾಖೆಯ ಲೋಕಲ್ ಟ್ರೈನ್ ಕೊರೊನಾದಿಂದಾಗಿ ಪ್ರಯಾಣಿಕರ ಕೊರತೆ ಎದುರಿಸಿತ್ತು. ಈ ಕಾರಣದಿಂದ ಲೋಕಲ್ ಟ್ರೈನ್ ಅನ್ನು ರೈಲ್ವೆ ಇಲಾಖೆ ಬಂದ್ ಮಾಡಿತ್ತು. ಇದನ್ನೂ ಓದಿ: ನೂತನ ವಧು-ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಸ್ನೇಹಿತರು
Advertisement
Advertisement
ಇದರಿಂದಾಗಿ ಗೋವಾ ರಾಜ್ಯದಲ್ಲಿ ಉದ್ಯೋಗ ಮಾಡುತಿದ್ದ ಕಾರವಾರದ ನೂರಾರು ಉದ್ಯೋಗಿಗಳಿಗೆ ತೊಂದರೆ ಆಗಿತ್ತು. ಈ ಹಿನ್ನಲೆಯಲ್ಲಿ ರೂಪಾಲಿ ನಾಯ್ಕ್ ಹಾಗೂ ಅನಂತಕುಮಾರ್ ಹೆಗ್ಡೆ ಅಮಿತ್ ಶಾ ರವರಿಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಸೋಮವಾರದಿಂದ ಎಂದಿನಂತೆ ಕಾರವಾರ-ಮಡಗಾಂವ್ ಲೋಕಲ್ ಟ್ರೈನ್ ಸಂಚರಿಸಲಿದೆ. ಇದನ್ನೂ ಓದಿ: ಅಯುಧಕ್ಕೆ ಪೂಜೆ ಸಲ್ಲಿಸಿ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಶಾಸಕ
Advertisement