ಕಾರವಾರ: ನೆರೆ ಸಂತ್ರಸ್ಥರಿಗೆ ಸಾಮಾಗ್ರಿಗಳನ್ನು ವಿತರಸಲು ತೆರಳಿದ್ದ ಲಾರಿ ಡಿಕ್ಕಿ ಹೊಡೆದು ದಂಪತಿ ಹಾಗೂ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೈರುಂಬೆ ಬಳಿ ನಡೆದಿದೆ.
ಅಪಘಾದಲ್ಲಿ ಬೈರುಂಬೆ ಮೂಲದ ಸೂರಿಮನೆ ಎಮ್.ಜಿ ಹೆಗಡಿ, ಪತ್ನಿ ಮತ್ತು ಕಾರು ಚಾಲಕ ಸಾವನ್ನಪ್ಪಿದ್ದಾರೆ. ಮೈಸೂರಿನಿಂದ ಪ್ರವಾಹ ಪಿಡೀತ ಪ್ರದೇಶಗಳಿಗೆ ಸಾಮಾಗ್ರಿಯನ್ನು ಹೊತ್ತು ತಂದಿದ್ದ ಲಾರಿ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ.
Advertisement
Advertisement
ಮೈಸೂರಿನಿಂದ ಯಲ್ಲಾಪುರದ ಸಂತ್ರಸ್ಥರಿಗೆ ಉಪಯೋಗವಾಗುವ ದಿನ ಬಳಕೆ ಸಾಮಾಗ್ರಿಗಳನ್ನು ತೆಗೆದುಕೊಂಡು ಬಂದಿದ್ದ ಲಾರಿ, ಅವುಗಳನ್ನು ವಿತರಿಸಿ ವಾಪಸ್ ತೆರಳುತ್ತಿತ್ತು. ಈ ವೇಳೆ ಯಲ್ಲಾಪುರದಿಂದ ಹೋಗುತ್ತಿರುವ ದಂಪತಿಯಿದ್ದ ಮಾರುತಿ 800 ಕಾರಿಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಜೊತೆ ಕಾರು ಚಾಲಕನೂ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Advertisement
ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.