ಕಾರವಾರ: ಮಗನ ಹುಟ್ಟುಹಬ್ಬಕ್ಕೆ ಸರ್‍ಪ್ರೈಸ್ ನೀಡಲೆಂದು ಪಂಜಾಬಿನ ಪಠಾಣ್‍ಕೋಟ್ ನಿಂದ ಹೊರಟಿದ್ದ ಯೋಧರೊಬ್ಬರು ಅನುಮಾನಸ್ಪದವಾಗಿ ರೈಲಿಗೆ ಬಿದ್ದು ಮೃತಪಟ್ಟಿದ್ದಾರೆ.
ದುಮ್ಮಿಂಗ್ ಸಿದ್ದಿ (39) ಮೃತ ಯೋಧರಾಗಿದ್ದು, ಮೂಲತಃ ಕಾರವಾರ ತಾಲೂಕಿನ ಮಖೇರಿ ಗ್ರಾಮದ ನಿವಾಸಿಯಾಗಿದ್ದಾರೆ. ಕಳೆದ 15 ವರ್ಷದಿಂದ ದುಮ್ಮಿಂಗ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೇ ಗುರುವಾರ ಮಗನ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ರಜೆ ಹಾಕಿದ್ದರು. ಹೀಗಾಗಿ ಸ್ವಗ್ರಾಮಕ್ಕೆ ತೆರಳಲು ಸೋಮವಾರ ಪಂಜಾಬಿನ ಪಠಾಣ್‍ಕೋಟ್ ರೈಲ್ವೇ ನಿಲ್ದಾಣದಲ್ಲಿ ರೈಲನ್ನು ಏರಿದ್ದರು. ಆದರೆ ಅನುಮಾನಾಸ್ಪದವಾಗಿ ರೈಲಿನ ಕೆಳಭಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Advertisement
Advertisement
ದುಮ್ಮಿಂಗ್ ಸಿದ್ದಿ ಮೃತಪಟ್ಟಿರುವ ಮಾಹಿತಿಯನ್ನು ಸೇನಾ ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಅಲ್ಲದೇ ಬುಧವಾರ ಯೋಧನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರುವುದಾಗಿ ತಿಳಿಸಿದ್ದಾರೆ. ಆದರೆ ಯೋಧನ ಸಾವಿಗೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ. ಮಾಹಿತಿಗಳ ಪ್ರಕಾರ ಯೋಧ ದುಮ್ಮಿಂಗ್ ಸಿದ್ದಿ 15 ವರ್ಷಗಳ ಕಾಲ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದರು. ಬಳಿಕ ದೇಶಕ್ಕೆ ಮತ್ತಷ್ಟು ಸೇವೆ ಸಲ್ಲಿಸುವ ಹಂಬಲದಿಂದ ಹೆಚ್ಚುವರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು.
Advertisement
ಮಗನ ಹುಟ್ಟುಹಬ್ಬಕ್ಕೆ ಊರಿಗೆಲ್ಲ ಊಟ ಹಾಕಿಸಿ ಸಿದ್ಧತೆ ನಡೆಸಿದ್ದ ಕುಟುಂಬಕ್ಕೆ ಯೋಧನ ಸಾವು ಆಘಾತ ನೀಡಿದೆ. ಇದಲ್ಲದೇ ಇಡೀ ಕುಟುಂಬದ ಜವಾಬ್ದಾರಿ ಮೃತ ದುಮ್ಮಿಂಗ್ ಸಿದ್ದಿ ಮೇಲಿತ್ತು. ಅಲ್ಲದೇ ಹೊಸದಾಗಿ ಮನೆಕಟ್ಟಿಸಿದ್ದ ಮನೆಯನ್ನು ಇದೇ ತಿಂಗಳ ಕೊನೆಯಲ್ಲಿ ಗೃಹಪ್ರವೇಶಕ್ಕೆ ಸಿದ್ಧತೆ ನಡೆಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv