ಕಾರವಾರ: ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ಭಾರತ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ಬೆನ್ನಲ್ಲೇ ಕಾರವಾರದಲ್ಲಿ (Karwar) ಕದಂಬ ನೌಕಾನೆಲೆ (Kadamba Naval Base) ಹಾಗೂ ಬಂದರಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಭಾರತೀಯ ತಟರಕ್ಷಕ ದಳ ಕೂಡ ಅರಬ್ಬಿ ಸಮುದ್ರದಲ್ಲಿ ಕೂಂಬಿಗ್ ಕಾರ್ಯಾಚರಣೆ ಹೆಚ್ಚಿಸಿದ್ದು, ಕಾರವಾರದ ಬಂದರಿಗೆ ಬರುವ ಅನ್ಯ ದೇಶದ ಕ್ರೂಶಿಪ್‌ನಲ್ಲಿ ಪಾಕಿಸ್ತಾನ, ಚೀನಾ ದೇಶದ ಸಿಬ್ಬಂದಿಗಳಿದ್ದರೆ ಅಂತಹ ಹಡಗುಗಳಿಗೂ ನಿರ್ಬಂಧ ವಿಧಿಸಲಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಭೇಟಿಯಾಗಿ ‘ಆಪರೇಷನ್ ಸಿಂಧೂರ’ ಬಗ್ಗೆ ವಿವರಿಸಿದ ಮೋದಿ
ಕರಾವಳಿ ಕಾವಲು ಪಡೆ ಪೊಲೀಸರು ಬಂದರಿಗೆ ಬಂದ ಹಡಗಿನಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ಮೀನುಗಾರಿಕಾ ಬೋಟ್‌ಗಳನ್ನು ಸಹ ತಪಾಸಣೆ ಮಾಡಲಾಗುತ್ತಿದೆ. 12 ನಾಟಿಕಲ್ ಮೈಲೂ ದೂರದಿಂದ ಹೊರ ಹೋಗದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. 12 ನಾಟಿಕಲ್ ಮೈಲು ದೂರದಲ್ಲೇ ಮೀನುಗಾರಿಕೆ ನಡೆಸಲು ಮೀನುಗಾರಿಕಾ ಇಲಾಖೆ ಸೂಚನೆ ನೀಡಿದ್ದು, ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ಕೊಟ್ಟಿದೆ. ಇದನ್ನೂ ಓದಿ: ಭಾರತದ ವಿರುದ್ಧ ಪ್ರತಿದಾಳಿಗೆ ಪಾಕ್ ಕುತಂತ್ರ – ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ಶೆಹಬಾಜ್ ಶರೀಫ್