ಕಾರವಾರ: ಹಣದ ಆಮಿಷಕ್ಕೆ ಒಳಗಾಗಿ ಇಲ್ಲಿನ ಕದಂಬ ನೌಕಾನೆಲೆಯ (Kadamba Naval Base Karwar) ಶಿಪ್‌ಗಳ ಮಾಹಿತಿ ಹಾಗೂ ನೌಕಾದಳದ ಫೋಟೋಗಳನ್ನು ಪಾಕಿಸ್ತಾನ (Pakistan) ಹಾಗೂ ವಿದೇಶಿ ಗುಪ್ತಚರ ಏಜೆಂಟರಿಗೆ ನೀಡಿರುವ ಆರೋಪದ ಮೇಲೆ ಮೂವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಶಕ್ಕೆ ಪಡೆದಿದೆ.
ಎನ್‌ಐಎಯ ಡಿವೈಎಸ್‌ಪಿ ಹಾಗೂ ಮೂವರು ಇನ್ಸ್‌ಪೆಕ್ಟರ್‌ಗಳ ತಂಡ ಕಾರವಾರಕ್ಕೆ ಆಗಮಿಸಿ, ನೌಕಾದಳದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕಿನ ತೋಡೂರಿನ ಸುನೀಲ್ ನಾಯ್ಕ್, ಮುದುಗಾದ ವೇತನ್ ತಾಂಡೇಲ್ ಹಾಗೂ ಹಳವಳ್ಳಿಯ ಅಕ್ಷಯ್ ರವಿ ನಾಯ್ಕ್ ಮೂವರನ್ನು ವಶಕ್ಕೆ ಪಡೆದಿದೆ. ರಾಷ್ಟ್ರವಿರೋಧಿ ಚಟುವಟಿಕೆ ಅಡಿ 2023ರಲ್ಲಿ ಹೈದ್ರಾಬಾದ್‌ನಲ್ಲಿ NIA ದೀಪಕ್ ಹಾಗೂ ಇತರರನ್ನು ಬಂಧಿಸಲಾಗಿತ್ತು.
ಪಾಕಿಸ್ತಾನ ಹಾಗೂ ವಿದೇಶಿ ಏಜೆಂಟರು, ಅಧಿಕಾರಿಗಳಿಗೆ ಕದಂಬ ನೌಕಾನೆಯ ಮಾಹಿತಿ ರವಾನಿಸುತ್ತಿದ್ದ ದೀಪಕ್ ವಿಚಾರಣೆ ವೇಳೆ ಸುನೀಲ್ ನಾಯ್ಕ್, ವೇತನ್ ತಾಂಡೇಲ್ ಹಾಗೂ ಅಕ್ಷಯ್ ನಾಯ್ಕ್ ಹೆಸರನ್ನು ಬಾಯ್ಬಿಟ್ಟಿದ್ದ. ನೌಕಾದಳದ ಶಿಪ್‌ಗಳು, ಸ್ಥಳದ ಮಾಹಿತಿ ಫೋಟೋ ಹಾಗೂ ಇತರ ಮಾಹಿತಿಗಳನ್ನ ದೀಪಕ್ ಹಾಗೂ ಇತರರಿಗೆ ಈ ಮೂವರು ರವಾನಿಸಿದ್ದರು. ಇದನ್ನೂ ಓದಿ: ನಮ್ಮ ಆಸ್ತಿ ಬಗ್ಗೆ ದಾಖಲೆ ಇದ್ದರೆ ಬಹಿರಂಗ ಪಡಿಸಲಿ: ಛಲವಾದಿ ಮಾತಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಅಲ್ಲದೇ, ಮಾಹಿತಿ ನೀಡಿದ್ದಕ್ಕೆ ಸುನೀಲ್ ನಾಯ್ಕ್, ವೇತನ್ ತಾಂಡೇಲ್ ಹಾಗೂ ಅಕ್ಷಯ್ ನಾಯ್ಕ್ ಖಾತೆಗೆ ಹಣ ಕೂಡ ಜಮೆ ಮಾಡಲಾಗಿತ್ತು. ಅಕ್ಷಯ್ ನಾಯ್ಕ್ ಈ ಹಿಂದೆ ಸೀ ಬರ್ಡ್ ಒಳಗೆ ಕೆಲಸ ಮಾಡ್ತಿದ್ದನಾದರೂ ಬಳಿಕ ಗೋವಾದಲ್ಲಿ ಕ್ಯಾಂಟೀನ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇದನ್ನೂ ಓದಿ: ಮದುಮಗನ ಗೆಟಪ್‌ನಲ್ಲಿ ನಾಗಚೈತನ್ಯ- ಸೀಕ್ರೆಟ್ ಆಗಿ ಶೋಭಿತಾ ಜೊತೆ ಮದುವೆಗೆ ರೆಡಿಯಾದ್ರಾ ಸಮಂತಾ ಮಾಜಿ ಪತಿ?
ಸದ್ಯ ಅಕ್ಷಯ್‌ಗೆ ಸೇರಿದ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಸುನೀಲ್ ನಾಯ್ಕ್‌ಗೆ ನೋಟೀಸ್ ನೀಡಿ ಹೊರಗೆ ಬಿಟ್ಟಿದ್ದಾರೆ. ಆದ್ರೆ ವೇತನ್ ತಾಂಡೇಲ್‌ನನ್ನು ಹಾಗೂ ಅಕ್ಷಯ್ ನಾಯ್ಕ್‌ನನ್ನು ಗೌಪ್ಯ ಸ್ಥಳದಲ್ಲಿರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹೆಂಡತಿ ಕೊಂದು ದೃಶ್ಯ ಸಿನಿಮಾ ಮಾದರಿಯಲ್ಲಿ ಹೂತಿಟ್ಟ; ಸ್ನೇಹಿತನ ಹೆಂಡತಿ ಕೊಲೆಯಲ್ಲಿ ಭಾಗಿಯಾಗಿ ಹಳೇ ಕೇಸಲ್ಲೂ ತಗ್ಲಾಕೊಂಡ ಖತರ್ನಾಕ್