– ವಾಹನ ಬಿಟ್ಟು ಚಾಲಕರು ಪರಾರಿ
ಕಾರವಾರ: ಲಾಕ್‍ಡೌನ್ ನಡುವೆಯೂ ಅನುಮತಿಯಿಲ್ಲದೇ ಲಾರಿ ಚಲಾಯಿಸಿ ನಂತರ ಅದರ ಪರಿವೇ ಇಲ್ಲದೇ ಬೀದಿಯಲ್ಲಿ ನಿಂತುಕೊಂಡು ಚಾಲಕರು ಹೊಡೆದಾಡಿಕೊಂಡ ಘಟನೆ ಕಾರವಾರದಲ್ಲಿ ನಡೆದಿದೆ.
ಇಡೀ ರಾಜ್ಯದಲ್ಲಿ ಲಾಕ್‍ಡೌನ್ ಇದೆ. ವಾಹನ ಸಂಚಾರಕ್ಕೂ ನಿಷೇಧವಿದೆ. ಆದರೆ ಇದರ ನಡುವೆಯೂ ಹಾವೇರಿ ಇಂದ ಕಾರವಾರ ನಗರಕ್ಕೆ ಯಾವುದೇ ಪರವಾನಿಗೆ ಇಲ್ಲದೇ ಕಾಲಿ ಟಾರ್ ಲಾರಿಯನ್ನು ಚಲಾಯಿಸಿಕೊಂಡು ಬಂದ ಇಬ್ಬರು ಚಾಲಕರು, ನಗರ ಪ್ರವೇಶಿಸುವ ಕುರಿತು ಒಬ್ಬರಿಗೊಬ್ಬರು ಹೆದ್ದಾರಿಯಲ್ಲೇ ಬಡಿದಾಡಿಕೊಂಡ ಘಟನೆ ಕಾರವಾರ ನಗರದ ಬೈತಖೋಲ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
Advertisement
Advertisement
ಲಾರಿಗೆ ನಗರ ಪ್ರವೇಶಿಸಲು ಯಾವುದೇ ಪರವಾನಿಗೆ ಸಹ ಇಲ್ಲ. ಇದಲ್ಲದೇ ಮಾಸ್ಕ್ ಕೂಡ ಹಾಕಿಕೊಳ್ಳದ ಇಬ್ಬರು ಚಾಲಕರು ನಗರ ಪ್ರವೇಶಿಸುತ್ತಿದ್ದರು. ಈ ವೇಳೆ ಓರ್ವ ಚಾಲಕ ಲಾರಿ ಚಲಾಯಿಸುತಿದ್ದ ನಾಸಿರ್ ನಿಗೆ ಗಾಡಿ ನಿಲ್ಲಿಸಲು ಹೇಳಿದ್ದಾನೆ. ಆದರೆ ಆತ ಒಪ್ಪದೇ ಚಲಾಯಿಸಿದ್ದು, ಈ ವೇಳೆ ಇಬ್ಬರೂ ಹೆದ್ದಾರಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಘಟನೆ ಕುರಿತು ಕಾರವಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಈ ವೇಳೆ ಇಬ್ಬರು ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.