ಕಾರವಾರ: ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕನಿಗೆ ವಾಹನ ಡಿಕ್ಕಿ ಹೊಡೆದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಕಟ್ಟಡ ಕಾರ್ಮಿಕ ಜಸ್ತಿ ಮಂಡಾಲ್ (50) ಸಾವಿಗೀಡಾದ ವ್ಯಕ್ತಿ. ನೌಕಾನೆಲೆಯಲ್ಲಿ ಎಲ್‌ಎನ್‌ಟಿ ಕಂಪನಿಯಡಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ ಕೆಲಸ ಮುಗಿಸಿ ಹಿಂತಿರುಗುವ ವೇಳೆ ಕಾರ್ಮಿಕರನ್ನು ಕರೆದೊಯ್ಯಲು ಟೆಂಪೋ ಬಂದಿತ್ತು. ನೌಕಾನೆಲೆ ಪ್ರಮುಖ ಗೇಟ್ ವಾಟರ್ ಪಾಯಿಂಟ್ ಬಳಿಯಿಂದ ಕಾರ್ಮಿಕರನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಕಾರ್ಮಿಕರು ನಾ ಮುಂದು ತಾ ಮುಂದು ಅಂತಾ ಟೆಂಪೋ ಹತ್ತಲು ಮುಂದಾಗಿದ್ರು.
Advertisement
ಕಾರ್ಮಿಕ ನೂಕು ನುಗ್ಗಲು ಕಂಡು ಚಾಲಕ ಚೆಂಡ್ಯಾ ನಿವಾಸಿ ಅಜಯ್ ಟೆಂಪೋ ಮುಂದಕ್ಕೆ ಚಲಾಯಿಸಿದ್ದ. ಈ ವೇಳೆ ಚಾಲಕ ಅಜಯ್‌ಗೆ ನಿಯಂತ್ರಣ ತಪ್ಪಿದ್ದು, ಎದುರಿದ್ದ ಕಾರ್ಮಿಕ ಜಸ್ತಿ ಮಂಡಾಲ್‌ಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಕಾರ್ಮಿಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಟೆಂಪೋ ಚಾಲಕ ಅಜಯ್‌ನನ್ನು ಕಾರವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಮಿಕನ ಸಾವಿನ ಹಿನ್ನೆಲೆ ಇಂದು ಬೆಳಗ್ಗೆಯಿಂದ ಮೃತನ ಕುಟುಂಬಸ್ಥರು ಹಾಗೂ ಇತರ ಕಾರ್ಮಿಕರಿಂದ ಪ್ರತಿಭಟನೆ ನಡೆಸಿದ್ದಾರೆ. ನೌಕಾನೆಲೆ ಗೇಟ್ ಮುಂಭಾಗ ಜಮಾಯಿಸಿದ್ದರು. ಮೃತನ ಕುಟುಂಬಕ್ಕೆ ಎಲ್‌ಎನ್‌ಟಿ ಕಂಪೆನಿ 20 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯ