ಕಾರವಾರ: ಎರಡನೇ ಬಾರಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಭೇಟಿ ಕಾರ್ಯಕ್ರಮ ರದ್ದಾಗಿರುವುದಕ್ಕೆ ಸಂತ್ರಸ್ತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮುಂಜಾನೆಯಿಂದ ಕಾರವಾರದ ಸರ್ಕಿಟ್ ಹೌಸ್ ಬಳಿ ನರೆದಿದ್ದು ನೆರೆ ಸಂತ್ರಸ್ತರು ತಮ್ಮ ಊರಿನ ಸಮಸ್ಯೆ ಕುರಿತು ಸಿಎಂ ಬಳಿ ಮನವಿ ಸಲ್ಲಿಸುವವರಿದ್ದರು. ಆದರೆ ಹವಾಮಾನ ವೈಪರಿತ್ಯದಿಂದ ಸಿಎಂ ಅವರ ಅಧಿಕೃತ ಕಾರ್ಯಕ್ರಮ ಮೊಟಕುಗೊಳಿಸಿ, ಹಾವೇರಿಗೆ ಮಾತ್ರ ನಿಗದಿಮಾಡಲಾಗಿತ್ತು. ಇದರಿಂದ ಸಿಎಂ ಬಿಎಸ್‍ವೈಗಾಗಿ ಕಾದು ಕುಳಿತ ಜನರು ಅಸಮಾಧಾನ ಹೊರ ಹಾಕಿದರು.
Advertisement
Advertisement
ಸಿಎಂ ಬಾರದ ಕಾರಣ ಸಂತ್ರಸ್ತರು ಆಕ್ರೋಶಗೊಂಡಿದ್ದು, ಈ ಹಿಂದೆ ಸಹ ಕಾರ್ಯಕ್ರಮ ನಿಗದಿಯಾಗಿತ್ತು ಆದರೆ ರದ್ದಾಗಿತ್ತು. ಜಿಲ್ಲೆಗೆ ಕೇಂದ್ರ ನಿಯೋಗ ಸಹ ಬರಲಿಲ್ಲ. ವಿರೋಧ ಪಕ್ಷದ ನಾಯಕರೂ ಬರಲಿಲ್ಲ. ನಮ್ಮ ಕಷ್ಟವನ್ನು ಕೇಳಲು ನಾಯಕರಿಗೆ ಸಮಯ ಇಲ್ಲ. ಪ್ರವಾಹ ಪೀಡಿತ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂಗಾಗಿ ಕಾದು ಕುಳಿತ ಅಧಿಕಾರಿಗಳಿಂದ ಹಿಡಿದು ಎಲ್ಲರೂ ಮರಳಿ ಹೋದರು.