ದೆಹಲಿ ಚುನಾವಣೆ ಕಾರ್ಪೋರೇಷನ್ ಮಟ್ಟದ್ದು ಅದಕ್ಕೆ ಅಷ್ಟೊಂದು ಮಹತ್ವ ಬೇಡ: ಅಶ್ವಥ್ ನಾರಾಯಣ್

Public TV
1 Min Read
Ashwath Narayan 1

ಕಾರವಾರ: ದೆಹಲಿ ಚುನಾವಣೆ ಬೆಂಗಳೂರು ಕಾರ್ಪೊರೇಷನ್ ಮಟ್ಟದ್ದು, ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅವಶ್ಯಕತೆಯಿಲ್ಲ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಇಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಒಕ್ಕಲಿಗರ ಸಭಾ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೆಹಲಿ ಚುನಾವಣೆ ಪ್ರಧಾನಿ ಮೋದಿ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಕೇಂದ್ರದ ಚುನಾವಣೆ ವೇಳೆ ಎಲ್ಲರೂ ಒಂದಾಗಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಾರೆ. ಕೇಜ್ರಿವಾಲ್ ನಗರ ಪ್ರದೇಶದಲ್ಲಿ ಸೀಮಿತವಾಗಿ ಗೆದ್ದಿರುವುದು. ಅವರಿಗೆ ನಾನೂ ಕೂಡಾ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Ashwath Narayan2

ನೂತನ ಶಾಸಕರಿಗೆ ಖಾತೆ ಹಂಚಿಕೆ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅಸಮಾಧಾನಗೊಂಡಿರುವ ನಾಯಕರೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಿದ್ದಾರೆ. ಖಾತೆ ಪುನರ್ ಹಂಚಿಕೆ ಮಾಡಿ ಅವರಿಗೆ ಸೂಕ್ತ ಇಲಾಖೆ ಕೊಡುವ ಕೆಲಸ ಮಾಡಿದ್ದಾರೆ. ಕೆಲವರು ತಮ್ಮ ಅಪೇಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಅಡೆತಡೆಯಿಲ್ಲದೇ ಸರ್ಕಾರ ಮುಂದಿನ ಅವಧಿಯಲ್ಲಿ ಉತ್ತಮ ಆಡಳಿತ ನೀಡಲಿದೆ ಎಂದು ಹೇಳಿದರು.

CABINET BSY 1 copy

ಇದೇ ವೇಳೆ ಸಚಿವ ಸಂಪುಟದಿಂದ ಕೆಲವು ಸಚಿವರನ್ನು ಕೈ ಬಿಡುವ ವಿಚಾರವಾಗಿ ಮಾತನಾಡಿದ ಅವರು, ಸಚಿವರ ಕಾರ್ಯಕ್ಷಮತೆ ಅಳೆಯುವಷ್ಟು ಕಾಲ ಆಗಿಲ್ಲ. ಮುಂದಿನ ಒಂದು ವರ್ಷದಲ್ಲಿ ಸಚಿವರುಗಳು ಏನನ್ನು ಮಾಡುತ್ತಾರೆ ಎಂಬುವುದನ್ನು ತೋರಿಸುತ್ತೇವೆ ಎಂದರು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *