ಕಾರವಾರ: ಸಿನಿಮಾ ನಿರೂಪಣೆ, ಪ್ರೊಡಕ್ಷನ್ ಎಂದು ಸದಾ ಬ್ಯೂಸಿಯಾಗಿರುವ ನಟ ರಮೇಶ್ ಅರವಿಂದ್ (Ramesh Arvind) ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವರಿಗೆ ಕಾಂಗ್ರೆಸ್ ನಾಯಕಿ ಹನಿಟ್ರ್ಯಾಪ್; 20 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮಹಿಳೆ ಪೊಲೀಸರಿಗೆ ಲಾಕ್
ಕುಟುಂಬದ ಜೊತೆ ಪ್ರವಾಸ ಕೈಗೊಂಡಿರುವ ರಮೇಶ್ ಅರವಿಂದ್ ದಾಂಡೇಲಿಯ ಟ್ರಿಪ್ ಬಳಿಕ ಕಾರವಾರದ ದೇವಬಾಗ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ
ಇಂದು (ಅ.26) ಬೆಳಗ್ಗೆ ಕಾರವಾರಕ್ಕೆ ಬಂದಿಳಿದ ಅವರು ದೇವಬಾಗ್ ಕಡಲತೀರದಲ್ಲಿ ಸುತ್ತಾಡಿದ್ದಾರೆ. ಬಳಿಕ ಬೋಟ್ ಮೂಲಕ ಕೂರ್ಮಗಡ ದ್ವೀಪ ಹಾಗೂ ಸುತ್ತಮುತ್ತಲ ಕಡಲ ಸೌಂದರ್ಯವನ್ನು ಆಸ್ವಾದಿಸಿದರು.ಇದನ್ನೂ ಓದಿ: ಜಾರ್ಖಂಡ್ ವಿಧಾನಸಭಾ ಚುನಾವಣೆ ರಾಯಭಾರಿಯಾಗಿ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ನೇಮಕ