ಕಾರವಾರ: ರಾಜ್ಯ ಸರ್ಕಾರ ಅಂಗನವಾಡಿಗಳನ್ನು (Anganawadi) ನಿರ್ಲಕ್ಷಿಸುತ್ತಾ ಬಂದಿದ್ದು ಕಟ್ಟಡದ ಬಾಡಿಗೆಯಿಂದ ಹಿಡಿದು ಕಾರ್ಯಕರ್ತರ ಸೀರೆಗೂ ಹಣ ನೀಡಲು ವಿಳಂಬ ಮಾಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳೇಗೋಡದಲ್ಲಿ ಇರುವ ಅಂಗನವಾಡಿ ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದು, ಬಾಡಿಗೆ ಕಟ್ಟಡಕ್ಕೆ ಹಣವಿಲ್ಲದೇ ಉತ್ತಮ ಕಟ್ಟಡವೂ ಸಿಗದೇ ತಗಡಿನ ಶೆಡ್ ನಿರ್ಮಿಸಿ ಅಲ್ಲಿಯೇ ನಡೆಸಲಾಗುತ್ತಿದೆ.
ಇಲ್ಲಿನ ಶಾಲೆಯೊಂದರ ಆಡದ ಮೈದಾನದ ಮಣ್ಣಿನ ನೆಲದಲ್ಲಿ ತಗಡಿನ ಶೆಡ್ ಹಾಕಲಾಗಿದ್ದು, ಇಲ್ಲಿಯೇ 25 ಜನ ಮಕ್ಕಳು ಇರಬೇಕಾಗಿದ್ದು ಬಿಸಿಲ ಝಳಕ್ಕೆ ಮಣ್ಣಿನ ನೆಲದಲ್ಲಿ ಚಿಕ್ಕ ಮಕ್ಕಳು ನರಕ ಯಾತನೆಯಲ್ಲೇ ಪಾಠ ಕೇಳುವಂತಾಗಿದೆ. ಆದರೆ ಈ ಕುರಿತು ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ ಮಾತ್ರ ದಿವ್ಯ ನಿರ್ಲಕ್ಷ್ಯ ತೋರಿದೆ. ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಟ್ಟರೇ ತಪ್ಪೇನಿದೆ – ನಾಗೇಂದ್ರ ಪ್ರಶ್ನೆ
ಜಿಲ್ಲೆಯಲ್ಲಿ 2687 ಅಂಗನವಾಡಿಗಳಿವೆ, 2102 ಅಂಗನವಾಡಿಗೆ ಸ್ವಂತ ಕಟ್ಟಡಗಳಿವೆ, 81 ಕಟ್ಟಡಗಳು ಅಪೂರ್ಣ ಕಾಮಗಾರಿಯಲ್ಲಿದೆ, 45 ಕಟ್ಟಡಗಳು ಮಂಜೂರಾಗಿದೆ. 62 ಕಟ್ಟಡಗಳು ಶಿಥಿಲಗೊಂಡು ಬೇರೆಕಡೆ ಸ್ಥಳಾಂತರಗೊಂಡಿದೆ. ಇನ್ನು ಬಾಡಿಗೆ ನೀಡದೇ 15ಕ್ಕೂ ಹೆಚ್ಚು ಅಂಗನವಾಡಿ ಇದ್ದು, ಈ ಅಂಗನವಾಡಿಗಳಿಗೆ ಕಾರ್ಯಕರ್ತೆಯರೇ ಬಾಡಿಗೆ ಹಣ ನೀಡುತ್ತಿದ್ದಾರೆ.