ಕಾರವಾರ: ವಾತಾವರಣ ಬದಲಾದಂತೆ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಿರುವಾಗ ನೀರು, ಗಾಳಿಯ ಮೂಲಕ ವೈರಸ್ ಸೋಂಕುಗಳು ಇದೀಗ ಜನರನ್ನು ಕಾಡುತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 120 ಮಕ್ಕಳಿಗೆ ಮಂಗನಬಾವು (Mumps) ಸೋಂಕಿಗೆ ತುತ್ತಾಗಿದ್ದಾರೆ.
ಮಂಗನಬಾವು ವೈಜ್ಞಾನಿಕ ಹೆಸರು ಮಂಪ್ಸ್ ಎಂದು. ಇದು ಹೇಗೆ ಹರಡುತ್ತದೆ? ಇದರ ಲಕ್ಷಣ ಏನು?, ಸೋಂಕು ತಗುಲಿದರೇ ಎಚ್ಚರಿಕೆ ವಹಿಸೋದು ಹೇಗೆ ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಇದನ್ನೂ ಓದಿ: ಮಂಗನಬಾವು ಸೋಂಕು 125ಕ್ಕೆ ಏರಿಕೆ – ಶಾಲೆಗೆ 3 ದಿನ ರಜೆ ಘೋಷಣೆ
ಮಂಗನಬಾವು ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಇದೇ ವರ್ಷ ಮಾರ್ಚ್‌ನಲ್ಲಿ ಕೇರಳದಲ್ಲಿ ಈ ಸೋಂಕು ಕಾಣಿಸಿಕೊಂಡು 15 ಸಾವಿರಕ್ಕೂ ಹೆಚ್ಚು ಜನರನ್ನು ಬಾಧಿಸಿ ಭಯ ಹುಟ್ಟಿಸಿತ್ತು.
ಮಂಪ್ಸ್ (Mumps Disease) ಅಥವಾ ಮಂಗನಬಾವು ಇದೊಂದು ಸಂಕ್ರಾಮಿಕ ಕಾಯಿಲೆ. ಒಬ್ಬರಿಂದ ಒಬ್ಬರಿಗೆ ಗಾಳಿ, ಸ್ಪರ್ಶಗಳ ಮೂಲಕ ಹರಡುತ್ತದೆ. ರೋಗ ಬಾಧಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಹಾಗೂ ಆರೋಗ್ಯವಂತ ವ್ಯಕ್ತಿಯ ಸಂಪರ್ಕ ಬೆಳೆಸಿದಾಗ ಈ ಸೋಂಕು ಹರಡುತ್ತದೆ. ಇದನ್ನೂ ಓದಿ: ಮುಂಡಗೋಡು ವಸತಿ ಶಾಲೆಯ 75 ವಿದ್ಯಾರ್ಥಿಗಳಿಗೆ ಮಂಗನಬಾವು ಸೋಂಕು
ಈ ರೋಗದ ಲಕ್ಷಣ ಏನು?
ಈ ಸೋಂಕು ಬಾಧಿತ ವ್ಯಕ್ತಿಗೆ ಮೊದಲು ಗಂಟಲುಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ದೇಹದ ಸ್ನಾಯು ಸೆಳೆತ, ನೋವು ಇರುತ್ತದೆ. ಸೋಂಕು ಹೆಚ್ಚಾದ ಭಾಗದಲ್ಲಿ ಊದಿಕೊಳ್ಳುತ್ತದೆ. ಗಂಟಲು, ಮುಖದ ಭಾಗದಲ್ಲಿ ಬಾವು ಕಾಣಿಸಿಕೊಳ್ಳುತ್ತದೆ. ಜ್ವರ, ಕೆಮ್ಮು, ನೆಗಡಿ ಬಾಧಿಸುತ್ತದೆ. ದೇಹ ನಿತ್ರಾಣವಾಗುತ್ತದೆ. ಒಂದರಿಂದ 16 ವರ್ಷದ ವರಿಗೆ ಮಾತ್ರ ಹೆಚ್ಚು ಕಾಣಿಸಿಕೊಳ್ಳುತ್ತದೆ. ವಯಸ್ಕರಿಗೆ ಬರುವುದು ಕಡಿಮೆ.
ಎಚ್ಚರ ವಹಿಸೋದು ಹೇಗೆ?
ಈ ಸೋಂಕಿಗೆ ತಕ್ಷಣ ಗುಣಪಡಿಸುವ ಔಷಧವಿಲ್ಲ. ಹೀಗಾಗಿ, ಸೋಂಕು ಬಾಧಿತ ವ್ಯಕ್ತಿಯನ್ನು ಪ್ರತ್ತೇಕವಾಗಿ ಇರಿಸಬೇಕು. ಸೋಂಕಿತರು ಕೆಮ್ಮಿದಾಗ, ಸೀನಿದಾಗ ಅಂತರದಲ್ಲಿರಬೇಕು. ಆದಷ್ಟು ರೋಗಿಯ ಸಂಪರ್ಕಕ್ಕೆ ಚಿಕ್ಕ ಮಕ್ಕಳು ಬಾರದಂತೆ ಎಚ್ಚರ ವಹಿಸಬೇಕು. ಇದನ್ನೂ ಓದಿ: ಬೆಂಗಳೂರು| ಹೆತ್ತ ಮಕ್ಕಳನ್ನೇ ಕೊಲೆ ಮಾಡಿದ ತಾಯಿ – ತಾನೂ ಆತ್ಮಹತ್ಯೆಗೆ ಯತ್ನ
ವೈದ್ಯ ಡಾ.ರಾಜೇಶ್ ಬಿಲ್ಲವ ಹೇಳುವಂತೆ, ಚಿಕ್ಕ ಮಕ್ಕಳಿಗೆ ವ್ಯಾಕ್ಸಿನ್ ಹಾಗೂ ಬೂಸ್ಟೇಜ್ ಹಾಕಿಸಿದರೆ ಈ ರೋಗದಿಂದ ದೂರ ಉಳಿಯಬಹುದು. ಮಗು ಹುಟ್ಟಿದ 9 ತಿಂಗಳಲ್ಲಿ ಈ ವ್ಯಾಕ್ಸಿನ್ ನೀಡಲಾಗುತ್ತದೆ. ವಾತಾವರಣ ಬದಲಾವಣೆಯಿಂದಾಗಿ ಸಾಂಕ್ರಾಮಿಕ ರೋಗಗಳು ಸಹ ಉಲ್ಭಣಿಸುತ್ತವೆ. ಹೀಗಾಗಿ ಅಂತಹ ರೋಗಿಯಿಂದ ದೂರ ಇರಬೇಕು. ಈ ರೋಗ ಕನಿಷ್ಠ 15 ದಿನ ರೋಗಿಯನ್ನು ಬಾಧಿಸುತ್ತದೆ. ಹೀಗಾಗಿ, ಎಚ್ಚರಿಕೆಯಿಂದ ಇದ್ದರೆ ಈ ರೋಗದಿಂದ ದೂರ ಉಳಿಯಬಹುದಾಗಿದೆ ಎಂದು ಹೇಳುತ್ತಾರೆ.