ಬೆಂಗಳೂರು: ಕರ್ನಾಟಕ ಬಂದ್ (Karnataka Bandh) ವಿಚಾರವಾಗಿ ಕೆಲವು ಕನ್ನಡಪರ ಸಂಘಟನೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಅಧ್ಯಕ್ಷ ನಾರಾಯಣಗೌಡ ಆಕ್ರೋಶ ಹೊರಹಾಕಿದ್ದಾರೆ. ಯಾರೋ ನಿನ್ನೆ, ಮೊನ್ನೆ ಬಂದವರ ಹಿಂದೆ ಹೋಗಬೇಕಾ ಎಂದು ಹೇಳುವ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಿರಂಗವಾಗಿ ಕೆಲ ಕನ್ನಡಪರ ಸಂಘಟನೆಗಳ ಬಗ್ಗೆ ಹೇಳಿಕೆ ನೀಡಿದ್ದಾರೆ. ನನ್ನ ನೇತೃತ್ವದಲ್ಲಿ ಹೋರಾಟ ಕರೆಯಬೇಕಿತ್ತು. ನಾನು ಯಾರೋ ನಿನ್ನೆ, ಮೊನ್ನೆ ಬಂದವರ ಹಿಂದೆ ಹೋಗ್ಲಾ? ಯಾರೋ ಎರಡು ಸಾವಿರ, ಮೂರು ಸಾವಿರ ಖರ್ಚು ಮಾಡುವವನ ಹಿಂದೆ ನಾನು ಹೋಗ್ಲಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಹರಿಸಿ – ಕರ್ನಾಟಕಕ್ಕೆ ಕಾವೇರಿ ಪ್ರಾಧಿಕಾರ ಸೂಚನೆ
Advertisement
Advertisement
ಮುಂದುವರೆದು ಮಾತನಾಡಿದ ಅವರು, ವಾಟಾಳ್ ನಾಗರಾಜ್ ಅವರ ಹೋರಾಟದ ಬಗ್ಗೆ ಆಕ್ಷೇಪ ಇಲ್ಲ. ಆದರೆ ಅವರ ಸುತ್ತಮುತ್ತ ಇರುವವರ ಬಗ್ಗೆ ಆಕ್ಷೇಪ ಇದೆ. ಬಂದ್ ಬಿಟ್ಟರೆ ನಾನು ಎಲ್ಲರ ಜೊತೆಯಲ್ಲೂ ಹೋರಾಡುತ್ತೇನೆ. ನಾಯಕತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ. ನನಗೆ ಇತಿಹಾಸ ಇಲ್ವಾ ಎಂದು ಕೇಳಿದ್ದಾರೆ.
Advertisement
Advertisement
ಕೆಪಿಸಿಸಿ ಕಚೇರಿಗೆ ಆಗಮಿಸಿ ಜಮೀರ್ ಅಹ್ಮದ್ ಅವರನ್ನು ಭೇಟಿಯಾಗಿದ್ದೇನೆ. ಈ ವೇಳೆ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಬಂದಿದ್ದೆ. ಈ ವೇಳೆ ಅವರು ನಿಂಬೆಹಣ್ಣು ಕೊಟ್ಟರು ಎಂದು ತಿಳಿಸಿದ್ದಾರೆ.
ಬೆಂಗಳೂರು ಬಂದ್‍ನಲ್ಲಿ ಭಾಗಿಯಾಗಿ, ಕರ್ನಾಟಕ ಬಂದ್‍ನಲ್ಲಿ ಅವರು ಪಾಲ್ಗೊಂಡಿಲ್ಲ. ಈ ಹೋರಾಟದಿಂದ ದೂರ ಉಳಿದಿರುವುದು ವೈಯುಕ್ತಿಕ ಪ್ರತಿಷ್ಠೆಗೆ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಇದನ್ನೂ ಓದಿ: ಕಾವೇರಿಗಾಗಿ ಕೈಕೊಯ್ದುಕೊಂಡು ರಕ್ತ ಚೆಲ್ಲಿದ ಹೋರಾಟಗಾರ; ಸಿದ್ದು, ಡಿಕೆಶಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ
Web Stories