ಕರೂರು ಕಾಲ್ತುಳಿತ (Karur Stampede) ಪ್ರಕರಣ ಅಕ್ಷರಶಃ ತಮಿಳುನಾಡಿನಲ್ಲಿ (Tamilnadu) ಸಂಚಲವನ್ನ ಸೃಷ್ಟಿಸಿತ್ತು. ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಜೊತೆಗೆ ನಟ ವಿಜಯ್ (TVK Vijay) ಜೊತೆ ಎಲ್ಲ ನಟರ ಅಭಿಮಾನಿಗಳ ಎಚ್ಚರಿಕೆ ಗಂಟೆಯೂ ಆಗಿತ್ತು. ಈ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಸ್ಟಾರ್ ನಟರೊಬ್ಬರು ಮಾತಾಡಿದ್ದಾರೆ. ಕೇವಲ ವಿಜಯ್‌ಯತ್ತ ಬೆರಳು ತೋರಿಸೋದು ತಪ್ಪು ಅಂತಾ ಮಿಂಚಿನಂತ ಮಾತುಗಳನ್ನಾಡಿದ್ದಾರೆ.
ವಿಜಯ್ ದಳಪತಿ ಸಿನಿಮಾ ಜರ್ನಿಗೆ ಫುಲ್‌ಸ್ಟಾಪ್ ಇಟ್ಟು, ಕಂಪ್ಲೀಟ್ ಆಗಿ ರಾಜಕೀಯ ರಂಗದಲ್ಲೇ ತೊಡಗಿಸಿಕೊಳ್ಳುವ ಉದ್ದೇಶದಿಂದ ಟಿವಿಕೆ ಪಕ್ಷವನ್ನ ಸ್ಥಾಪನೆ ಮಾಡಿದ್ದಾರೆ. ಈ ಪಕ್ಷದ ಮೂಲಕ ಜನರ ಸೇವೆ ಮಾಡಲು ಮುಂದಾಗಿದ್ದಾರೆ. ಈ ಮೊದಲು ಎರಡ್ಮೂರು ಕಡೆ ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರಿದ್ದರು. ಆದ್ರೆ ಕರೂರಿನಲ್ಲಿ ಆದ ಕಾಲ್ತುಳಿತ ಪ್ರಕರಣ ವಿಜಯ್ ರಾಜಕೀಯ ಜೀವನದ ಆರಂಭಕ್ಕೆ ಕೊಳ್ಳಿ ಇಟ್ಟಂತಾಗಿತ್ತು.ಇದನ್ನೂ ಓದಿ: ನಟ ಭುವನ್ ಪೊನ್ನಣ್ಣ ಲಕ್ ಬದಲಿಸಿದ ಮಗಳು ತ್ರಿದೇವಿ ಪೊನ್ನಕ್ಕ
ಕರೂರು ಪ್ರಕರಣದಲ್ಲಿ ಅಪಾರ ಪ್ರಮಾಣದ ಸಾವು-ನೋವು ನಟ ವಿಜಯ್ ದಳಪತಿ ಹಾಗೂ ಟಿವಿಕೆ ಪಕ್ಷದವರಿಗೆ ಘಾಸಿಗೊಳಿಸಿದೆ. ಈ ಘಟನೆಯ ಬಗ್ಗೆ ತಮಿಳು ನಟ ತಲಾ ಅಜಿತ್ ಮಾತನಾಡಿದ್ದಾರೆ. ಇಲ್ಲಿ ಯಾರನ್ನೂ ದೂಷಿಸುವ ಪ್ರಯತ್ನ ನಮ್ಮದಲ್ಲ, ಕರೂರು ಕಾಲ್ತುಳಿತ ಪ್ರಕರಣಕ್ಕೆ ಕೇವಲ ನಟ ವಿಜಯ್ ದಳಪತಿಯವರನ್ನ ಗುರಿಯಾಗಿಸೋದು ಸೂಕ್ತವಲ್ಲ. ಇದಕ್ಕೆ ನಾವು ಕೂಡಾ ಜವಾಬ್ದಾರರು ಎನ್ನುವ ಮಾತುಗಳನ್ನ ಆಡುವ ಮೂಲಕ ನಟ ಹಾಗೂ ರಾಜಕಾರಣಿ ವಿಜಯ್ ದಳಪತಿ ಬೆನ್ನಿಗೆ ನಿಂತಿದ್ದಾರೆ ಅಜಿತ್.
ಸಾಮಾನ್ಯವಾಗಿ ಈತರದ ಘಟನೆಗಳು ಸಂಭವಿಸಿದಾಗ ಆ ಘಟನೆಯ ಲಾಭವನ್ನ ಪಡೆದುಕೊಳ್ಳುವವರೇ ಜಾಸ್ತಿ. ಇದೊಳ್ಳೆಯ ಸಮಯ ಅಂತಾ ತಮ್ಮ ಬೇಳೆ ಬೇಯಿಸಿಕೊಳ್ಳುವವರೇ ಜಾಸ್ತಿ. ಆದರೆ ವಿಜಯ್ ದಳಪತಿ ರ‍್ಯಾಲಿಯಲ್ಲಿ ಆದ ಈ ಘಟನೆಗೆ ಅಸಲಿ ಕಾರಣಗಳು ಹೀಗೂ ಇರುತ್ತೆ ಎನ್ನುವ ಮಾತುಗಳನ್ನ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ ತಲಾ ಅಜಿತ್. ಸಂದರ್ಶನವೊಂದರಲ್ಲಿ ಮಾತನಾಡಿರುವ ತಲಾ ಅಜಿತ್ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಸುಮಾರು 63 ಸಿನಿಮಾಗಳಲ್ಲಿ ನಟಿಸಿರುವ ಅಜಿತ್ ಇತ್ತೀಚೆಗೆ ತಾವು ಕಾರ್ ರೇಸ್‌ನಲ್ಲೇ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಇತನ್ಮಧ್ಯೆ 64ನೇ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಅಜಿತ್ ನಟಿಸಿದ್ದ ಥುನಿವು ಸಿನಿಮಾ ಬಿಡುಗಡೆ ಆಗಿತ್ತು. ಫಸ್ಟ್ ಡೇ ಸಿನಿಮಾ ಸೆಲೆಬ್ರೇಷನ್ ವೇಳೆ ಅಭಿಮಾನಿಯೊಬ್ಬ ಚಲಿಸುತ್ತಿದ್ದ ಟ್ರಕ್ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈಥರದ ಘಟನೆಗಳು ಸಿನಿಮಾ, ಸೆಲೆಬ್ರಿಟಿ ಹಾಗೂ ಚಿತ್ರಮಂದಿರಗಳಲ್ಲಿ ಮರುಕಳಿಸುತ್ತವೆ. ಕ್ರಿಕೆಟ್ ನೋಡೋಕೆ ಲಕ್ಷಾಂತರ ಜನ ಸೇರಿರ್ತಾರೆ. ಆದ್ರೆ ಇಂತಹ ಅನಾಹುತಗಳು ಯಾಕೆ ಚಿತ್ರೋದ್ಯಮದಲ್ಲೇ ನಡೆಯುತ್ತೆ ಅನ್ನೋದು ನಮಗೂ ಪ್ರಶ್ನೆಯಾಗಿ ಕಾಡ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಪ್ರಕೃತಿ ಪ್ರೇಮಿ ಯಶ್ ಪುತ್ರನಿಗೆ ಪ್ರಾಣಿಗಳ ಮಧ್ಯೆ ಸ್ಪೆಷಲ್ ಹುಟ್ಟುಹಬ್ಬ

