ಕನ್ನಡದ ಸ್ಟಾರ್ ನಟ ದರ್ಶನ್ (Darshan) ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಆರೋಪಿಯಾಗಿ ಕಂಬಿ ಹಿಂದಿದ್ದಾರೆ. ಈ ಪ್ರಕರಣದ ವಿಚಾರವಾಗಿ ಸುದೀಪ್, ಶಿವಣ್ಣ, ಜಗ್ಗೇಶ್ ಬಳಿಕ ಸ್ಯಾಂಡಲ್‌ವುಡ್ ನಟಿ ಕಾರುಣ್ಯ ರಾಮ್ (Karunya Ram) ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ಪ್ರಕರಣದ ಬಗ್ಗೆ ನಾನು ಮಾತನಾಡಲ್ಲ: ನಟ ಜಗ್ಗೇಶ್
ದರ್ಶನ್ ಸರ್ ತುಂಬನೇ ಒಳ್ಳೆಯ ವ್ಯಕ್ತಿ. ರೇಣುಕಾಸ್ವಾಮಿಗೆ ಏನು ಅನ್ಯಾಯ ಆಗಿದೆ. ಅವರ ಕುಟುಂಬಕ್ಕೂ ನ್ಯಾಯ ಸಿಗಬೇಕು. ಇದರ ತನಿಖೆ ನಡೆಯುತ್ತಿದೆ. ಪ್ರಕರಣದ ಬಗ್ಗೆ ಕಾದುನೋಡೋಣ. ನಮ್ಮೆಲ್ಲರ ಆಸೆ ಏನೆಂದರೆ ದರ್ಶನ್ ಸರ್ ನಿರಾಪರಾಧಿಯಾಗಿ ಆಚೆ ಬರಲಿ ಎಂದು ಕಾರುಣ್ಯ ರಾಮ್ ಮಾತನಾಡಿದ್ದಾರೆ.
ನಾನು ಚಿಕ್ಕ ವಯಸ್ಸಿನಿಂದ ದರ್ಶನ್ ಸಿನಿಮಾಗಳನ್ನು ನೋಡುತ್ತಲೇ ಬಂದಿದ್ದೇನೆ. ಅವರು ಯಾವಾಗ ಸಿಕ್ಕಿದ್ರು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಪ್ರತಿ ವರ್ಷ ಅವರ ಹುಟ್ಟುಹಬ್ಬಕ್ಕೆ ಭೇಟಿಯಾಗುತ್ತಿದ್ದೆ ಎಂದು ನಟಿ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಟಿವಿಯಲ್ಲಿ ನೋಡಿದಾಗ ಬೇಸರ ಆಯಿತು. ಕಾನೂನಿಗಿಂತ ಯಾರು ದೊಡ್ಡವರಿಲ್ಲ ಎಂದಿದ್ದಾರೆ. ಈ ವೇಳೆ, ನಾನು ಕೆಟ್ಟ ಕಾಮೆಂಟ್‌ಗಳ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನಟಿ ಮಾತನಾಡಿದ್ದಾರೆ.
ಅಂದಹಾಗೆ, ಪೆಟ್ರೋಮ್ಯಾಕ್ಸ್, ಎರಡು ಕನಸು, ವಜ್ರಕಾಯ (Vajrakaya) ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.