ಚೆನ್ನೈ: ತಮಿಳುನಾಡಿನ ಅಪೂರ್ವ ನಿಧಿ ಕಲೈನಾರ್ ಮರೆಯಾಗಿದ್ದಾರೆ. ನಿಧಿ ಇಲ್ಲದ ದ್ರಾವಿಡ ನಾಡು ಬಡವಾಗಿದ್ದು, ರಾಜ್ಯದಲ್ಲಿ ಕಣ್ಣೀರ ಕೋಡಿ ಹರಿದಿದೆ. ಪತ್ನಿಯರಿಬ್ಬರು, ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿರುವ ಮುತ್ತುವೇಲು ನಿಧನಕ್ಕೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಂಗಳವಾರ ಸಂಜೆ 6 ಗಂಟೆ 10 ನಿಮಿಷಕ್ಕೆ ಕಾವೇರಿ ಆಸ್ಪತ್ರೆ ವೈದ್ಯರು ಕರುಣಾನಿಧಿ ಅವರ ಸಾವಿನ ಸುದ್ದಿಯನ್ನ ಪ್ರಕಟಿಸಿದ್ದರು. ನಂತ್ರ ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ರಾತ್ರಿ 9.30ರ ಸುಮಾರಿಗೆ ಕಾವೇರಿ ಆಸ್ಪತ್ರೆಯಿಂದ ಗೋಪಾಲಪುರಂ ನಿವಾಸಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕಿಡಲಾಗಿತ್ತು. ಈ ವೇಳೆ ನಟ ರಜಿನಿಕಾಂತ್, ಪಶ್ಚಿಮಗಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ಕರುಣಾನಿಧಿ ಯಾವಾಗಲೂ ಕಪ್ಪು ಕನ್ನಡಕವನ್ನೇ ಧರಿಸುತ್ತಿದ್ದರು ಯಾಕೆ?
ಮಧ್ಯರಾತ್ರಿ 1.30 ರ ಸುಮಾರಿಗೆ ಸಿಐಟಿ ಕಾಲೋನಿಯಲ್ಲಿರುವ ಪುತ್ರಿ ಕನಿಮೋಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯ್ತು. ನಸುಕಿನ ಜಾವ 5.30ರ ನಂತರ ರಾಜಾಜಿ ಹಾಲ್‍ನಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಗಿದ್ದು, ಸಾಗರೋಪಾದಿಯಲ್ಲಿ ಜನ ಹರಿದು ಬರ್ತಿದ್ದಾರೆ. ಇದನ್ನೂ ಓದಿ: ಸಾಹಿತಿ, ಹೋರಾಟಗಾರ, ಪತ್ರಕರ್ತ, ರಾಜಕೀಯ ನಾಯಕ: ಇಲ್ಲಿದೆ ಕರುಣಾನಿಧಿ ಹೆಜ್ಜೆಗುರುತು
Tamil Nadu Chief Minister E Palaniswamy & Deputy CM O Panneerselvam at Chennai's Rajaji Hall where mortal remains of former Tamil Nadu CM M #Karunanidhi are kept. pic.twitter.com/WPcwZfWrPN
— ANI (@ANI) August 8, 2018
ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾವೇರಿ ಆಸ್ಪತ್ರೆ ವೈದ್ಯರು ಸೋಮವಾರವೇ 24 ಗಂಟೆಗಳ ಕಾಲ ಯಾವ ಭರವಸೆಗಳನ್ನು ನೀಡೋದಕ್ಕೆ ಸಾಧ್ಯವಿಲ್ಲ. ಕ್ಷಣ ಕ್ಷಣಕ್ಕೂ ಕರುಣಾನಿಧಿ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಸ್ಪಷ್ಟಪಡಿಸಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ವಿಧಿವಶರಾದ್ರು. ಇದನ್ನೂ ಓದಿ: ಡಿಎಂಕೆ Vs ಎಐಎಡಿಎಂಕೆ: ಕರುಣಾ ಮೇಲೆ ಜಯಾ ಮುನಿಸಾಗಿದ್ದು ಯಾಕೆ? ಏನದು ಆ ಒಂದು ತಪ್ಪು?
TTV Dhinakaran arrives at Chennai's Rajaji Hall where mortal remains of former Tamil Nadu CM M #Karunanidhi are kept. pic.twitter.com/CtQ0vPPpVu
— ANI (@ANI) August 8, 2018
ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಇದನ್ನೂ ಓದಿ: ಬದುಕಿರುವಾಗಲೇ ದಂತಕಥೆಯಂತಿದ್ದ ಕರುಣಾನಿಧಿ ಜೊತೆಗಿನ ಒಡನಾಟವನ್ನು ಹಂಚಿಕೊಂಡ ಎಚ್‍ಡಿಕೆ