ಚೆನ್ನೈ: ಮಾಜಿ ಸಿಎಂ ಕರುಣಾನಿಧಿ ಅಂತ್ಯಕ್ರಿಯೆ ಸ್ಥಳಕ್ಕೆ ಸಂಬಂಧಿಸಿದಂತೆ ಮರೀನಾ ಬೀಚ್‍ನಲ್ಲಿಯೇ ಅಂತಿಮ ವಿಧಿ ವಿಧಾನಗಳನ್ನು ಸಲ್ಲಿಸಬಹುದು ಎಂದು ಮದ್ರಾಸ್ ಹೈಕೋಟ್ ತೀರ್ಪು ನೀಡಿದೆ.
ಟ್ರಾಫಿಕ್ ರಾಮಸ್ವಾಮಿ ಸೇರಿದಂತೆ ಐವರು ಮರೀನಾ ಬೀಚ್‍ನಲ್ಲಿ ಅಂತ್ಯಕ್ರಿಯೆ ನಡೆಸಬಾರದು ಎಂದು ಕೋರ್ಟ್ ಗೆ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಆದ್ರೆ ಇಂದು ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಪರ ವಕೀಲರು ಮರೀನಾ ಬೀಚ್ ನಲ್ಲಿ ಅಂತ್ಯಕ್ರಿಯೆ ನಮ್ಮ ತಕರಾರು ಇಲ್ಲ ಎಂದು ವಾದ ಮಂಡಿಸಿದ್ದಾರೆ. ಕೂಡಲೇ ನ್ಯಾಯಾಧೀಶರು ಹಾಗಾದ್ರೆ ನಿಮ್ಮ ಪಿಐಎಲ್ ಅರ್ಜಿಯನ್ನು ಹಿಂಪಡೆದುಕೊಳ್ಳಬಹುದು ಅಲ್ವಾ ಎಂದು ಸೂಚಿಸಿದ್ದಾರೆ. ನ್ಯಾಯಾಧೀಶರ ಸಲಹೆಯಂತೆ ಟ್ರಾಫಿಕ್ ರಾಮಸ್ವಾಮಿ ತಮ್ಮ ಪಿಐಎಲ್ ಹಿಂಪಡೆಯಲು ನಿರ್ಧರಿಸಿದರು.
Advertisement
ಮರೀನಾ ಬೀಚ್ ಗೆ ಸಂಬಂಧಿಸಿದ ಎಲ್ಲ ಪಿಐಎಲ್ ಅರ್ಜಿಗಳು ವಾಪಾಸ್ಸಾದ ಹಿನ್ನೆಲೆಯಲ್ಲಿ ಆಡಳಿತಾರೂಢ ಸರ್ಕಾರಕ್ಕೆ ಹಿನ್ನಡೆ ಆಗಿದೆ. ಕರುಣಾನಿಧಿ ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದ ವಿವಾದಕ್ಕೆ ತೊಡಕಾಗಿದ್ದ ಎಲ್ಲ 5 ಅರ್ಜಿಗಳು ವಜಾಗೊಂಡಿವೆ.
Advertisement
Advertisement
ಹಾಲಿ ಸಿಎಂ ಮತ್ತು ಮಾಜಿ ಸಿಎಂ ಇಬ್ಬರು ಒಂದೇ ಅಲ್ಲ. ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳು ಸಾವನ್ನಪ್ಪಿದಾಗ ಮರೀನಾ ಬೀಚ್‍ನಲ್ಲಿಯೇ ಸ್ಥಳ ನೀಡಲಾಗಿತ್ತು. ಹಾಗಾಗಿ ಕರುಣಾನಿಧಿ ಅವರಿಗೆ ಮರೀನಾ ಬೀಚ್‍ನಲ್ಲಿಯೇ ಸ್ಥಳಾವಕಾಶ ನೀಡಲು ಸಾಧ್ಯವಿಲ್ಲ. ಬೇಕಾದ್ರೆ ಗಾಂಧಿ ಮಂಟಪದ ಬಳಿ 2 ಎಕರೆ ಸ್ಥಳ ನೀಡಲು ಸಿದ್ಧವಾಗಿದೆ ಎಂದು ಆಡಳಿತಾರೂಢ ಸರ್ಕಾರ ಪರ ವಕೀಲರು ವಾದ ಮಂಡಿಸಿದ್ದರು.
Advertisement
ಸಾವಿನಲ್ಲೂ ದ್ವೇಷದ ರಾಜಕಾರಣ ಬೇಡ. ಕೋಟಿ ಕೋಟಿ ತಮಿಳುಗರ ಭಾವನೆಗಳಿಗೆ ಧಕ್ಕೆ ತರೋದು ಬೇಡ. ಕರುಣಾನಿಧಿ ಅವರ ಅಂತ್ಯಕ್ರಿಯೆಯ ಮರೀನಾ ಬೀಚ್ ನಲ್ಲಿ ನಡೆಸುವ ಸರ್ಕಾರ ಗೌರವ ಸಲ್ಲಿಸಬೇಕು. ಗಾಂಧಿ ಮಂಟಪದ ಬಳಿ ಅಂತ್ಯಕ್ರಿಯೆ ನಮ್ಮ ಆಯ್ಕೆ ಅಲ್ಲ. ಕರುಣಾನಿಧಿ ಸಾವಿನ ಬಳಿಕ ಒಂದು ವಾರ ಶೋಕಾಚರಣೆ ಮಾಡುತ್ತಿದ್ದೀರಿ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದೀರಿ. ಹಾಗಾದ್ರೆ ಸ್ಥಳ ಕೊಡುತ್ತಿಲ್ಲ ಯಾಕೆ ಎಂದು ಡಿಎಂಕೆ ಪರ ವಕೀಲರು ಪ್ರತಿವಾದ ಮಂಡಿಸಿದ್ದಾರೆ.
ಕರುಣಾನಿಧಿಯವರ ಅಂತ್ಯಕ್ರಿಯೆಯನ್ನು ಮರೀನಾ ಬೀಚ್‍ನಲ್ಲಿ ಮಾಡಬೇಕೆಂದು ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದರು. ಆದರೆ ಆಡಳಿತರೂಢ ಸರ್ಕಾರ ಕಾರ್ಯಕರ್ತರ ಮನವಿಯನ್ನು ತಿರಸ್ಕರಿಸಿತ್ತು. ಚೆನ್ನೈ ಮರೀನಾ ಬೀಚ್ ಪ್ರದೇಶ ಸೂಕ್ಷ್ಮ ವಲಯದಲ್ಲಿದೆ. ಹೀಗಾಗಿ ಈ ಜಾಗದಲ್ಲಿ ರಾಜಕೀಯ ನಾಯಕರ ಅಂತ್ಯ ಸಂಸ್ಕಾರಕ್ಕೆ ಅನುಮತಿ ನೀಡಬಾರದು ಎಂದು ಕೋರ್ಟ್ ನಲ್ಲಿ ಎರಡು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಅರ್ಜಿ ಇತ್ಯರ್ಥವಾಗದ ಕಾರಣ ತಮಿಳುನಾಡು ಸರ್ಕಾರ ಅನುಮತಿ ನೀಡಿಲ್ಲ. ಪ್ರಕರಣ ಕೋರ್ಟ್ ನಲ್ಲಿ ಇರುವ ಮರೀನಾ ಬೀಚ್ ಬದಲಾಗಿ ಗಿಂಡಿ ಪ್ರದೇಶದ ಗಾಂಧಿ ಮಂಟಪದ ಬಳಿ ಅಂತ್ಯಸಂಸ್ಕಾರಕ್ಕೆ ಸ್ಥಳವಕಾಶ ಮಾಡಿಕೊಡುವುದಾಗಿ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.
ಸರ್ಕಾರ ಅನುಮತಿ ನೀಡದ ಕಾರಣ ಡಿಎಂಕೆ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಮರೀನಾ ಬೀಚ್ ನಲ್ಲೇ ಅಂತ್ಯಸಂಸ್ಕಾರ ನಡೆಸಬೇಕೆಂದು ಪಟ್ಟುಹಿಡಿದಿದ್ದರು. ಏನು ಮಾಡಬೇಕೆಂದು ತಿಳಿಯದ ತಮಿಳುನಾಡು ಸರ್ಕಾರ ಈಗ ಕೇಂದ್ರದ ಮೊರೆ ಹೋಗಿದೆ. ಈ ಮಧ್ಯೆ ಡಿಎಂಕೆ ಪಕ್ಷ ಮರೀನಾ ಬೀಚ್ ಬಳಿ ಇರುವ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲು ಅನುಮತಿ ನೀಡುವಂತೆ ಹೈಕೋರ್ಟ್ ನಲ್ಲಿ ತುರ್ತು ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಕೋರ್ಟ್ ನಲ್ಲಿ ಸರ್ಕಾರದ ಪರ ವಾದವನ್ನು ಆಲಿಸಿತ್ತು. ಇಂದು ಬೆಳಗ್ಗೆ ಡಿಎಂಕೆ ಮತ್ತು ಪಿಐಎಲ್ ಅರ್ಜಿ ಸಲ್ಲಿಸಿದ ಪರ ವಕೀಲರು ಸಹ ವಾದವನ್ನು ಮಂಡಿಸಿದ್ದರು.
ಮರೀನಾ ಬೀಚ್‍ನಲ್ಲಿಯೇ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮತ್ತು ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರನ್ನು ಅಂತ್ಯಸಂಸ್ಕಾರ ಮಾಡಲಾಗಿದ್ದು ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ.