ಬೆಂಗಳೂರು/ಮಂಡ್ಯ: ಮಳವಳ್ಳಿಯ ಹಳ್ಳಿಹೈದ ಗಿಲ್ಲಿ ಇದೀಗ ದೊಡ್ಮನೆ ದೊರೆಯಾಗಿ ಹೊರಹೊಮ್ಮಿದ್ದಾರೆ. ಇಡೀ ರಾಜ್ಯವೇ ಮೆಚ್ಚುವ ಮನೆಮಗನಾಗಿ ಮಿಂಚಿದ್ದಾರೆ. ಎಲ್ಲೆಲ್ಲೂ ಗಿಲ್ಲಿ, ಗಿಲ್ಲಿ ಸೌಂಡ್ ಕೇಳಿ ಬರ್ತಿದೆ. ಗಿಲ್ಲಿಗೆ ಗೆಲುವಿಗೆ ಇಡೀ ಕರುನಾಡೇ ಸಂಭ್ರಮದಲ್ಲಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾದಾಗಿನಿಂದಲೂ ವಿನ್ನರ್ ಆಗೋದು ಗಿಲ್ಲಿ ನಟ ಎಂಬ ಮಾತು ಕೇಳಿಬರುತ್ತಲೇ ಇತ್ತು. ಗಲ್ಲಿ ಗಲ್ಲಿಯಲ್ಲಿಯೂ ಗಿಲ್ಲಿ ನಟನ ಹವಾ ಜೋರಾಗಿತ್ತು. ಅದರಂತೆ ಇದೀಗ ಗಿಲ್ಲಿ ಗೆದ್ದಿದ್ದಾರೆ. ಆ ಮೂಲಕ ವ್ಯಕ್ತಿತ್ವದ ಆಟದಲ್ಲಿ ಗೆಲ್ಲೋದು ಹೀರೋನೇ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಶುರುವಿನಿಂದಲೂ ಒನ್ ಸೈಡೆಡ್ ಆಗಿದ್ದ ಬಿಗ್‌ಬಾಸ್‌ನಲ್ಲಿ ಗಿಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಗಿಲ್ಲಿ ನಟನ ಕಾಮಿಡಿ ಟೈಮಿಂಗ್, ಸಂದರ್ಭೋಚಿತ ಕಾಮಿಡಿ, ಪಂಚಿಂಗ್ ಲೈನ್ಸ್ ಸಿಕ್ಕಾಪಟ್ಟೆ ವರ್ಕೌಟ್ ಆಗಿತ್ತು. ತಮ್ಮ ಕಾಮಿಡಿಯಲ್ಲಿ ಸಿಲ್ಲಿ ಜೋಕ್ಸ್ನ ಗಿಲ್ಲಿ ಎಂದೂ ಮಿಕ್ಸ್ ಮಾಡಲಿಲ್ಲ. ಡಬಲ್ ಮೀನಿಂಗ್ ಅಥವಾ ಅಶ್ಲೀಲತೆಯನ್ನ ಸೋಕಿಸಲೂ ಇಲ್ಲ. ಇಡೀ ಫ್ಯಾಮಿಲಿ ಕೂತು. ಎಲ್ಲರೂ ಹೊಟ್ಟೆ ತುಂಬಾ ನಗುವಂತೆ ಮಾಡಿದವರು ಗಿಲ್ಲಿ ನಟ. ಇದೇ ಕಾರಣಕ್ಕೆ `ಗಿಲ್ಲಿ ಗೆಲ್ಲಬೇಕು’ ಅಂತ ಬಹುತೇಕರು ಬಯಸಿದ್ದರು. ವೀಕ್ಷಕರು ಅಂದುಕೊಂಡಂತೆ ಗಿಲ್ಲಿ ನಟ ವಿಜಯಪತಾಕೆ ಹಾರಿಸಿದ್ದಾರೆ. ನಿರೀಕ್ಷೆಯಂತೆ ಗಿಲ್ಲಿ ಬಿಗ್‌ಬಾಸ್ ವಿನ್ನರ್ ಆಗ್ತಿದ್ದಂತೆ ಇಡೀ ಕರುನಾಡೇ ಸಂಭ್ರಮಿಸಿದೆ. ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಶಿಳ್ಳೆ, ಚಪ್ಪಾಳೆ, ಕುಣಿದು, ಕುಪ್ಪಳಿಸಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: BBK Season 12 Winner | ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟ ಗಿಲ್ಲಿ
ಗಿಲ್ಲಿ ಬಿಗ್‌ಬಾಸ್ ಗೆಲುವಿಗೂ ಮುನ್ನವೇ ರಾಜ್ಯಾದ್ಯಂತ ಕಟೌಟ್‌ಗಳು ರಾರಾಜಿಸಿವೆ. ಇತ್ತ, ಗಿಲ್ಲಿ ನಟ ಬಿಗ್‌ಬಾಸ್ ಕಿರೀಟ ಮುಡಿಗೇರಿಸಿಕೊಳ್ತಿದ್ದಂತೆ ಹುಟ್ಟೂರಲ್ಲೂ ಸಂಭ್ರಮ ಮನೆ ಮಾಡಿತ್ತು. ಹುಟ್ಟೂರು ಮಳವಳ್ಳಿ ತಾಲೂಕು ದಡದಪುರದದಲ್ಲಿ ಪಟಾಕಿ ಸಿಡಿಸಿ, ಕಟೌಟ್ ಹಿಡಿದು ಗ್ರಾಮಸ್ಥರು ಸಂಭ್ರಮಾಚರಣೆ ಮಾಡಿದ್ರು. ಬಡವರ ಮಕ್ಕಳು ಬೆಳೀಬೇಕು ಅಂತ ಶುಭ ಹಾರೈಸಿದ್ರು. ಗಿಲ್ಲಿ ನಟ ನಮ್ಮೂರಿಗೆ ಹೆಮ್ಮೆ ತಂದಿದ್ದಾನೆ. ಗಿಲ್ಲಿ ನಟನಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ರು. ಈ ಬಾರಿ ಗಿಲ್ಲಿಯಿಂದಲೇ ಬಿಗ್‌ಬಾಸ್ ಕ್ರೇಜ್ ಹೆಚ್ಚಾಗಿತ್ತು. ಕಳೆದ 11 ಸೀಸನ್‌ಗಳಲ್ಲಿ ಯಾವುದೇ ಸ್ಪರ್ಧಿಗೆ ಸಿಗದ ಕ್ರೇಜ್ ಈ ಬಾರಿ ಗಿಲ್ಲಿಗೆ ಸಿಕ್ಕಿದೆ. ದಡದಪುರದ ಗ್ರಾಮಸ್ಥರು ಗಿಲ್ಲಿಯನ್ನು ಅದ್ಧೂರಿ ಸ್ವಾಗತಕ್ಕಾಗಿ ಕಾತರದಿಂದ ಕಾಯ್ತಿದ್ದಾರೆ. ಮದ್ದೂರಿನಿಂದ ದಡದಪುರವರೆಗೆ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಲು ಸಜ್ಜಾಗಿದ್ದಾರೆ. ಮುಂದಿನವಾರ ನಡೆಯುವ ಸಿಡಿ ಹಬ್ಬ ಇಂದೇ ನಡೆಯಲಿದೆ. ಇನ್ನು ಗಿಲ್ಲಿ ಇವತ್ತು ಹುಟ್ಟೂರಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಡಮಾಲ್ ಡಿಮಿಲ್ ಡಕ್ಕ.. ಗಿಲ್ಲಿ ಗೆಲ್ಲೋದು ಪಕ್ಕಾ.. ಟಕರ ಟಕರ ತಮಟೆ ಏಟು.. ಗಿಲ್ಲಿ ನಟ ಅಲ್ಟಿಮೇಟು ಎಂದು ಗಿಲ್ಲಿ ಹೇಳ್ತಿದ್ರು. ಇದೀಗ ಕರುನಾಡ ವೀಕ್ಷಕರಿಂದ ಅತೀ ಹೆಚ್ಚು ಮತಗಳನ್ನ ಪಡೆದು ಗಿಲ್ಲಿ ನಟ ದೊಡ್ಮನೆ ದೊರೆಯಾಗಿದ್ದಾರೆ. ಅರ್ಧ ಕೋಟಿಯ ಒಡೆಯನಾಗಿದ್ದಾರೆ. 50 ಲಕ್ಷ ನಗದು, ಮಾರುತಿ ಸುಜುಕಿ ಕಂಪನಿ ಕಾರು ಬಹುಮಾನ ನೀಡಲಾಗಿದೆ. ಪ್ರಾಯೋಜಕರ ಕಡೆಯಿಂದ ಮಾತ್ರವಲ್ಲ.. ಕಿಚ್ಚ ಸುದೀಪ್ ಕಡೆಯಿಂದಲೂ ಗಿಲ್ಲಿ ನಟನಿಗೆ ಬಹುಮಾನ ಹಣ ಲಭಿಸಿದೆ. ಪ್ರೀತಿಯಿಂದ 10 ಲಕ್ಷ ರೂ. ಸಿಕ್ಕಿದೆ.
ಇನ್ನು ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ 20 ಲಕ್ಷ ರೂ. ಪಡೆದಿದ್ದಾರೆ. 2ನೇ ರನ್ನರ್ ಅಪ್ ಅಶ್ವಿನಿ ಗೌಡ 14 ಲಕ್ಷ ರೂ., 3ನೇ ರನ್ನರ್ ಅಪ್ ಕಾವ್ಯಾ 10 ಲಕ್ಷ ರೂ., ಹಾಗೂ 4ನೇ ರನ್ನರ್ ಅಪ್ ಮ್ಯುಟೆಂಟ್ ರಘು 3.5 ಲಕ್ಷ ರೂ. ಪಡೆದಿದ್ದಾರೆ.ಇದನ್ನೂ ಓದಿ:BBK Season 12 | ಬಿಗ್ ಮನೆಯ ಫೈಯರ್ ಬ್ರ್ಯಾಂಡ್ ಅಶ್ವಿನಿ ಗೌಡಗೆ 3ನೇ ಸ್ಥಾನ!

