Connect with us

Districts

ಕುಡಿಯುವ ನೀರಿನ ಬಾನಿ – ಪ್ರಾಣಿ, ಪಕ್ಷಿಗಳ ಕಷ್ಟಕ್ಕೆ ಮರುಗಿನ ಕರುಣಾ ಕಲ್ಯಾಣ ಟ್ರಸ್ಟ್

Published

on

ಹಾವೇರಿ: ಪ್ರಾಣಿ ಪಕ್ಷಿಗಳು ತಮ್ಮ ಆಹಾರವನ್ನು ಹೇಗೋ ಹುಡುಕಿಕೊಳ್ಳುತ್ತವೆ. ಆದರೆ ಕುಡಿಯುವ ನೀರಿಗಾಗಿ ಬಹಳ ಪರದಾಡುತ್ತಿರುತ್ತವೆ. ಇವುಗಳ ಕಷ್ಟಕ್ಕೆ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಮರುಗಿದ್ದು ಕುಡಿಯುವ ನೀರಿನ ಬಾನಿಗಳನ್ನು ಇಡುವ ಮೂಲಕ ದಾಹವನ್ನು ನೀಗಿಸುತ್ತಿದೆ.

ನಗರದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಕೆಲವೊಂದು ಸ್ಥಳಗಳಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ಕುಡಿಯುವ ನೀರಿನ ಬಾನಿಗಳನ್ನು ಇಡಲಾಗಿದೆ. ಈ ಬಗ್ಗೆ ಮಾತನಾಡಿದ ವಸಂತ್ ಕುಮಾರ್ ಅವರು, ನಮಗೆ ಬಾಯಾರಿಕೆಯಾದರೆ ನಾವು ಎಲ್ಲಾದರೂ ಕೇಳಿ ಅಥವಾ ಕೊಂಡು ನೀರನ್ನು ಕುಡಿಯುತ್ತೇವೆ. ಆದರೆ ಪಕ್ಷಿ ಪ್ರಾಣಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಹೀಗಾಗಿ ನಗರದ ಹುಕ್ಕೇರಿ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ವರ್ತಕರಾದ ಪ್ರಭಾಕರ ರಾವ್ ಮಂಗಳೂರ, ಶಿವರಾಜ ಚ. ವಳಸಂಗದ ಹಾಗೂ ಸಮಾಜ ಸೇವಕರಾದ ಶಿವಬಸಪ್ಪ ಹಲಗಣ್ಣನವರು ಕಾಣಿಕೆಯಾಗಿ ನೀಡಿದ ಹಣದಿಂದ ಬಾನಿಗಳನ್ನು ಇಡಲು ಸಾಧ್ಯವಾಗಿದೆ. ಇನ್ನೂ ಅನೇಕ ವ್ಯಕ್ತಿಗಳು ಸಹಕಾರ ನೀಡುವುದಾದರೆ ನಮ್ಮನ್ನು 70197 32465 ಸಂಪರ್ಕಿಸಬಹುದೆಂದು ಹೇಳಿದರು.

ಜಿಗ್ನೇಶ್ ಪಟೇಲ್ ಮಾತನಾಡಿ, ನಾವು ಗಳಿಸುವ ಹಣದಲ್ಲಿ ಸ್ವಲ್ಪ ಹಣವನ್ನು ಸಮಾಜಮುಖಿ ಕೆಲಸಗಳಿಗಾಗಿ ಉಪಯೋಗಿಸಿದರೆ ಸಾರ್ಥಕವೆನಿಸುತ್ತದೆ. ನಗರದಲ್ಲಿ ನೂರಕ್ಕೂ ಹೆಚ್ಚು ಬಾನಿಗಳನ್ನು ಇಡಲು ಉದ್ದೇಶಿಸಲಾಗಿದೆ. ಹೆಚ್ಚುಹೆಚ್ಚು ಜನರು ಈ ಕೆಲಸದಲ್ಲಿ ಸಹಕಾರ ನೀಡಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯಕರ್ತರಾದ ಜುಂಜಪ್ಪ ಕಮತರ, ಸಂತೋಷ ಕುಂಬಾರಿ, ಹನುಮಂತ ಹೊನ್ನಪ್ಪನವರ, ವಿನಾಯಕ ಮುಷ್ಟಗೇರಿ, ಇರ್ಫಾನ ನದಾಫ್, ರಾಜಶೇಖರ ಕೋಲಾರ, ರಮೇಶ ಕಂಡೆಪ್ಪಗೌಡ ಇನ್ನಿತರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *