ವೇದಿಕೆ ಮೇಲೆ ಗಿಟಾರ್‌ನಿಂದ ಹಲ್ಲೆ ಮಾಡಿದ ಕಾರ್ತಿಕ್ ಆರ್ಯನ್- ಫ್ಯಾನ್ಸ್‌ ಶಾಕ್

Public TV
1 Min Read
karthik aryan sreeleela

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ (Karthik Aryan) ಪ್ರಸ್ತುತ ‘ಆಶಿಕಿ 3’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರ ವಿಡಿಯೋವೊಂದು ವೈರಲ್ ಆಗ್ತಿದೆ. ಶ್ರೀಲೀಲಾ (Sreeleela) ಎದುರೇ ವೇದಿಕೆ ಮೇಲೆ ಗಿಟಾರ್‌ನಿಂದ ವ್ಯಕ್ತಿಯೊಬ್ಬನ ಮೇಲೆ ಕಾರ್ತಿಕ್ ಹಲ್ಲೆ ಮಾಡಿರುವ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.‌ ಈ ವಿಡಿಯೋ ನೋಡಿ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್

sreeleela karthik aryan

‘ಆಶಿಕಿ 3’ (Aaashiqui 3) ಸಿನಿಮಾದಲ್ಲಿ ಕಾರ್ತಿಕ್ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ವಿಡಿಯೋವೊಂದು ಲೀಕ್ ಆಗಿದೆ. ಶ್ರೀಲೀಲಾ ಎದುರು ವೇದಿಕೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಕಾರ್ತಿಕ್ ಆರ್ಯನ್ ಗಿಟಾರ್‌ನಿಂದ ಹೊಡೆದಿದ್ದಾರೆ. ಬಳಿಕ ಆತನನ್ನು ವೇದಿಕೆಯಿಂದ ಒದ್ದು ಕೆಳಗೆ ಬೀಳಿಸಿದ್ದಾರೆ. ಶೂಟಿಂಗ್‌ನಲ್ಲಿ ಚಿತ್ರೀಕರಿಸಿದ ಈ ವಿಡಿಯೋ ಲೀಕ್ ಆಗಿದೆ. ಅನೇಕರು ಇದನ್ನು ನಿಜವಾಗಿ ನಡೆದಿದೆ ಎಂದು ಭಾವಿಸಿದ್ದಾರೆ. ಆದರೆ ಇದು ‘ಆಶಿಕಿ 3’ ಚಿತ್ರದ ವಿಡಿಯೋ ಆಗಿದೆ. ಇದನ್ನೂ ಓದಿ: ಸನ್ನಿ ಡಿಯೋಲ್ ಸಿನಿಮಾದಲ್ಲಿ ಸೊಂಟ ಬಳುಕಿಸಿದ ‘ಐರಾವತ’ ನಟಿ ಊರ್ವಶಿ

sreeleela

ಪಶ್ಚಿಮ ಬಂಗಾಳದಲ್ಲಿ ಈ ಚಿತ್ರದ ಚಿತ್ರೀಕರಣ ಕಳೆದ ಒಂದು ವಾರಗಳಿಂದ ನಡೆಯುತ್ತಿದೆ. ಗಾಯಕನ ಪಾತ್ರದಲ್ಲಿ ನಟಿಸುತ್ತಿರೋ ಕಾರ್ತಿಕ್‌ಗೆ ಶ್ರೀಲೀಲಾ ಜೊತೆಯಾಗಿದ್ದಾರೆ.‌ ಈ ಚಿತ್ರವನ್ನು ಅನುರಾಗ್‌ ಬಸು ನಿರ್ದೇಶನ ಮಾಡುತ್ತಿದ್ದಾರೆ.

Share This Article