ಮುಂಬೈ: ಆ್ಯಕ್ಟಿಂಗ್ & ಸೆಕ್ಸ್, ಬ್ರೆಡ್ ಆ್ಯಂಡ್ ಬಟರ್ ಇದ್ದಂತೆ ಎಂದು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಸಂದರ್ಶನದಲ್ಲಿ ಹೇಳಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಾರ್ತಿಕ್ ಆರ್ಯನ್, ನನ್ನ ಖಾಸಗಿ ಜೀವನವನ್ನು ಹಂಚಿಕೊಳ್ಳಲು ಇಷ್ಟಪಡಲ್ಲ. ಹಾಗೆಯೇ ಮರೆಮಾಚುವ ಪ್ರಯತ್ನವನ್ನು ಮಾಡಲ್ಲ. ಕೆಲವು ದಿನಗಳ ಹಿಂದೆ ಯಾರ ಜೊತೆಗೂ ಊಟಕ್ಕೆ ಹೋಗುತ್ತಿಲ್ಲ. ಡಿನ್ನರ್ ಹೋದರೆ ಅದು ಮತ್ತಷ್ಟು ಊಹಾಪೋಹ ಸುದ್ದಿಗಳಿಗೆ ಕಾರಣ ಆಗುತ್ತೆ ಎಂದು ಹೇಳಿದರು.
ನಟನೆ ಮತ್ತು ಸೆಕ್ಸ್ ಬಗ್ಗೆ ಮಾತನಾಡುತ್ತಾ ಎರಡೂ ಬ್ರೆಡ್ ಆ್ಯಂಡ್ ಬಟರ್ (ಬ್ರೆಡ್ ಮತ್ತು ಬೆಣ್ಣೆ) ಇದ್ದಂತೆ. ಎರಡೂ ಜೀವನದಲ್ಲಿ ಅವಶ್ಯಕವಾಗಿವೆ. ಪ್ರೀತಿ ಎಂಬುವುದು ಎರಡೂ ಕೈಗಳು ಅಂದ್ರೆ ಜೀವಗಳನ್ನು ಜೋಡಿಸುವ ಸೇತುವೆ ಎಂಬುವುದು ನನ್ನ ನಂಬಿಕೆ ಎಂದಿದ್ದಾರೆ.
ಇದೇ ಸಂದರ್ಶನದಲ್ಲಿ ‘ಪತಿ ಪತ್ನಿ ಔರ್ ವೋ’ ಸಿನಿಮಾದ ನಟಿಯರಾದ ಅನನ್ಯ ಪಾಂಡೆ ಮತ್ತು ಭೂಮಿ ಪೆಡ್ನೆಕರ್ ಸಹ ಭಾಗಿಯಾಗಿದ್ದರು. ಇಬ್ಬರು ಸಹ ಸಿನಿಮಾ ಮತ್ತು ಖಾಸಗಿ ಬದುಕಿನ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು.
ಮಾಜಿ ಗೆಳೆಯನನ್ನು ಹೊರತುಪಡಿಸಿ ಬೇರೆ ಯಾರು ನನಗೆ ಫ್ರೆಂಡ್ ಗಳಿಲ್ಲ. ಆತನಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಬೇಕಿದೆ. ಅವನು ನನ್ನನ್ನು ಬ್ಲಾಕ್ ಮಾಡಿದ್ದು, ಪ್ರಶ್ನೆಗಳಿಗೆ ಉತ್ತರಗಳಿಗಾಗಿ ಕಾಯುತ್ತಿದ್ದೇನೆ ಎಂದು ಅನನ್ಯ ತಮ್ಮ ಬ್ರೇಕಪ್ ಬಗ್ಗೆ ಹೇಳಿಕೊಂಡಿದ್ದಾರೆ.
ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಜೊತೆ ಕಾರ್ತಿಕ್ ಆರ್ಯನ್ ಹೆಸರು ಕೇಳಿ ಬಂದಿತ್ತು. ಶೂಟಿಂಗ್ ಸಮಯದ ಜೊತೆಗೆ ಖಾಸಗಿಯಾಗಿ ಇಬ್ಬರು ಹೆಚ್ಚು ಕಾಣಿಸಿಕೊಳ್ಳತೊಡಗಿದ್ದರು. ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ ಎಂಬ ಸುದ್ದಿಗಳೆಲ್ಲಾ ಬಾಲಿವುಡ್ ಅಂಗಳದಲ್ಲಿ ಹರಿದಾಡಿದ್ದವು. ಇತ್ತೀಚೆಗೆ ಕಾರ್ತಿಕ್ ಆರ್ಯನ್ ಸ್ಪಷ್ಟನೆ ನೀಡಿ ಗಾಸಿಪ್ ಗಳಿಗೆ ತೆರೆ ಎಳೆದಿದ್ದರು.