ಬಿಗ್ ಬಾಸ್ ಮನೆಯ (Bigg Boss House) ಚೆಂದದ ಜೋಡಿ ಅಂದರೆ ಸಂಗೀತಾ ಮತ್ತು ಕಾರ್ತಿಕ್. ಮನೆಯೊಳಗೂ ಮನೆಹೊರಗೂ ಈ ಜೋಡಿ ಸಖತ್ ಹೈಪ್ ಕ್ರಿಯೆಟ್ ಮಾಡಿದೆ. ಇದೀಗ ಬಿಗ್ ಮನೆಯಲ್ಲಿ ಸಂಗೀತಾಗೆ ರಕ್ತಪಿಪಾಸು ಎಂದು ಕಾರ್ತಿಕ್ ಕರೆದಿದ್ದಾರೆ. ನನ್ನ ರಕ್ತಹೀರಿಕೊಂಡು ಬಿಟ್ಟಿದ್ದಾರೆ ಎಂದು ಸಂಗೀತಾಗೆ ರೇಗಿಸಿದ್ದಾರೆ ಕಾರ್ತಿಕ್.
Advertisement
ಸಂಗೀತಾ ಮತ್ತು ಕಾರ್ತಿಕ್ ಅದ್ಯಾವಾಗ ಜಗಳ ಮಾಡಿಕೊಳ್ಳುತ್ತಾರೆ. ಅದ್ಯಾವಾಗ ಒಂದಾಗುತ್ತಾರೆ. ಮನೆಯೊಳಗೆ ಇರುವವರಿಗೂ ಪ್ರೇಕ್ಷಕರಿಗೂ ಇಬ್ಬರಿಗೂ ಅಚ್ಚರಿ ಮೂಡಿಸಿದೆ. ಟಾಸ್ಕ್ವೊಂದರಲ್ಲಿ ಒಬ್ಬರನೊಬ್ಬರು ಸೇಫ್ ಮಾಡಿಲ್ಲ ಎಂಬ ವಿಚಾರಕ್ಕೆ ಕಾರ್ತಿಕ್- ಸಂಗೀತಾ (Sangeetha Sringeri) ಇಬ್ಬರೂ ಸೂರು ಕಿತ್ತು ಹೋಗುವ ಹಾಗೆ ಜಗಳವಾಡಿದ್ದಾರೆ. ಇದರ ನಡುವೆ ಗಾಳಿಯಲ್ಲಿ ಗುಂಡು ಎಂಬಂತೆ ಇಬ್ಬರೂ ಇನ್ ಡೈರೆಕ್ಟ್ ಆಗಿ ಮಾತನಾಡಲು ಶುರುಮಾಡಿದ್ದಾರೆ.
Advertisement
Advertisement
ಕಾರ್ತಿಕ್ (Karthik Mahesh) ಅಡುಗೆ ಮನೆಯಲ್ಲಿ ತರಕಾರಿ ಕತ್ತರಿಸುವಾಗ ಕೈಗೆ ಕೊಂಚ ಚಾಕು ತಾಗಿ ಗೆರೆ ಬಿದ್ದಿದೆ. ಬ್ಯಾಂಡೇಜ್ ಬೇಕಾ ಅಂತ ನಮ್ರತಾ ಕೇಳುತ್ತಾರೆ. ಆಗ ರಕ್ತ ಬರುತ್ತಿಲ್ಲ, ರಕ್ತ ಹೀರಿಕೊಳ್ಳುವವರೆಲ್ಲಾ ಆಗಲೇ ರಕ್ತ ಹೀರಿಕೊಂಡು ಬಿಟ್ಟಿದ್ದಾರೆ. ರಕ್ತಪಿಪಾಸುಗಳು ಎಂದು ಸಂಗೀತಾಗೆ ಉರಿಸಿದ್ದಾರೆ ಕಾರ್ತಿಕ್.
Advertisement
ರಾಕ್ಷಸರು ಈಗಾಗಲೇ ರಕ್ತ ಹೀರಿಕೊಂಡು ಬಿಟ್ಟಿದ್ದಾರೆ. ರಕ್ತ ಬರುತ್ತಿಲ್ಲ ಎಂದು ನಗುತ್ತಲೇ ಸಂಗೀತಾಗೆ ಕಾಲೆಳೆದಿದ್ದಾರೆ ಕಾರ್ತಿಕ್. ಆದರೆ ಸಂಗೀತಾ ಏನೂ ಪ್ರತಿಕ್ರಿಯೆ ನೀಡದೇ ಸುಮ್ಮನೆ ಅಡುಗೆ ಮಾಡುವತ್ತ ಗಮನ ನೀಡಿದ್ದಾರೆ. ಇದನ್ನೂ ಓದಿ:ರಾಜಕಾರಣಕ್ಕೆ ನಟಿ ಮಾಧುರಿ ದೀಕ್ಷಿತ್ ಎಂಟ್ರಿ
ಸಂಗೀತಾಗೆ ರಕ್ತಪಿಪಾಸು ಎಂದು ಕಾರ್ತಿಕ್ ಹೇಳಿರೋದನ್ನ ಕೇಳಿ, ಸಂಗೀತಾ ಪರ ವಿನಯ್ ಮಾತನಾಡಿದ್ದಾರೆ. ಯಾಕೆ ಈಗ ಊಟ ಮಾಡ್ತೀದ್ದೀರಾ ಎಂದ ವಿನಯ್ಗೆ ಮಧ್ಯಾಹ್ನ ಊಟ ಮಾಡಿರಲಿಲ್ಲ. ಆಗ ಹೊಟ್ಟೆ ತುಂಬಿ ಹೋಗಿತ್ತು. ಈಗ ಹಸಿಯುತ್ತಿದೆ ಎಂದು ರಿಪ್ಲೈ ನೀಡಿದ್ದರು. ನನಗೆ ಹೇಳಿದ್ರೆ ನಾನೇ ನಿಮಗೆ ತಿನ್ನಿಸುತ್ತಿದ್ದೆ ಸಂಗೀತಾ ಎಂದು ಕಾರ್ತಿಕ್ಗೆ ಟಾಂಗ್ ಕೊಟ್ಟಿದ್ದಾರೆ ವಿನಯ್. ಒಟ್ನಲ್ಲಿ ಸಂಗೀತಾ ಜೊತೆ ವಿನಯ್ ಮಾತನಾಡುತ್ತ ಕಾರ್ತಿಕ್ಗೆ ಚಮಕ್ ಕೊಟ್ಟಿದ್ದಾರೆ.