ವಿಜಯಪುರ: ಇದೇ ಮೊದಲ ಬಾರಿ ರಾಜಕೀಯ ಪಕ್ಷಗಳ ಹೆಸರು ಹೇಳಿ ದೈವ ಭವಿಷ್ಯ ನುಡಿದಿದ್ದು, ರಾಜಕಾರಣಿಗಳಿಗೆ ಶಾಕ್ ನೀಡಿದೆ.
ಚಡಚಣ ತಾಲೂಕಿನ ಮಕಣಾಪುರದ ಸೋಮಲಿಂಗ ದೇವಸ್ಥಾನದ ಕಲ್ಲೂರುಸಿದ್ಧ ಭವಿಷ್ಯ ಬಹಳ ಪ್ರಸಿದ್ಧ. ಮಕಣಾಪುರ ಗ್ರಾಮದಲ್ಲಿ ಪ್ರತಿ ವರ್ಷ ಯುಗಾದಿ ಬಳಿಕ ದೈವ ಭವಿಷ್ಯ ನುಡಿಯುತ್ತೆ. ಶಿವನ ಅವತಾರ ಸೋಮಲಿಂಗ ದೇವರ ಸೇವಕನಾಗಿರುವ ಪವಾಡ ಪುರುಷ ಕಲ್ಲೂರುಸಿದ್ಧ ಭವಿಷ್ಯವನ್ನು ಜನರು ನಂಬುತ್ತಾರೆ. ನಾಲಿಗೆ ಮೇಲೆ ಶಿವನೆ ಕುಳಿತು ಭವಿಷ್ಯ ನುಡಿಯುತ್ತಾನೆ ಎಂಬ ನಂಬಿಕೆಯನ್ನು ಭಕ್ತರು ಹೊಂದಿದ್ದಾರೆ. ಇದನ್ನೂ ಓದಿ: ಇ-ಹರಾಜು ಮೂಲಕ ಸಾರಿಗೆಯೇತರ ವಾಹನಗಳಿಗೆ ‘ವಿಐಪಿ ಸಂಖ್ಯೆ’: ಹರಿಯಾಣ ಸಿಎಂ
ಹೇಳಿದ್ದೇನು?
ಕಯ್ಯಲ್ಲಿ ಬೆಳ್ಳಿ ತ್ರಿಶೂಲ, ಮುಖಕ್ಕೆ ದೇವರ ಮುಖವಾಡ ಧರಿಸಿ ಭವಿಷ್ಯವನ್ನು ನುಡಿಯುತ್ತೆ. ಈ ವೇಳೆ ದೈವ, ಕಾಂಗ್ರೆಸ್-ಬಿಜೆಪಿ ತಾ ಮುಂದು ನಾ ಮುಂದು ಎನ್ನುತ್ವೆ. ಎರಡು ಪಕ್ಷಗಳ ನಡುವೆ ಭಾರೀ ತಿಕ್ಕಾಟ ನಡೆಯುತ್ತೆ ಎಂದು ಭವಿಷ್ಯವನ್ನ ಕಲ್ಲೂರುಸಿದ್ಧ ದೈವ ನುಡಿದಿದೆ.
ಎರಡು ಪಕ್ಷಗಳು ನಾ ಮುಂದು, ತಾ ಮುಂದು ಎನ್ನುವಾಗ ಜಗತ್ತೆ ಅಲ್ಲೋಲ ಕಲ್ಲೋಲ ಆಗುತ್ತೆ. ಎರಡು ಪಕ್ಷದ ತಿಕ್ಕಾಟದಿಂದ ಅಲ್ಲೋಲ ಕಲ್ಲೋಲ. ಬಿಜೆಪಿ ಜನರಿಗೆ ಹೊಂದಿಕೊಂಡು ಹೋದರೆ ನಿಶಾನೆ(ಧ್ವಜ/ಗೆಲುವು) ಹಚ್ತೇನೆ. ಇಲ್ಲಂದ್ರ ಕಡಿದು ಮೂರು ತುಂಡು ಮಾಡೀನಿ ಎಂದು ದೈವ ನುಡಿದಿದೆ. ಇದನ್ನೂ ಓದಿ: ಪವಾರ್ ಆಯೋಜಿಸಿದ್ದ ಡಿನ್ನರ್‌ನಲ್ಲಿ ಗಡ್ಕರಿ, ರಾವತ್ ಭಾಗಿ
ಬಿಜೆಪಿ ಜನರೊಂದಿಗೆ ಹೊಂದಾಣಿಕೆ ಆದ್ರೆ ಗೆಲುವು ಎಂದು ಬರುತ್ತೆ. ಈ ವೇಳೆ ಭೂಕಂಪನ ಭವಿಷ್ಯವನ್ನು ಕಲ್ಲೂರುಸಿದ್ಧ ದೈವ ನುಡಿದಿದೆ. ನಾಲ್ಕು ಮೂಲೆ ಸೋಸಿ(ಶೋಧಿಸಿ) ನೋಡುದ್ರಾಗ ಕತ್ತಲೆ ಬಿತ್ತಲೆ. ಭೂತ್ಯಾನ ಹಚ್ಚಿ ಬಯಲು ಮಾಡಿದ್ರ ಎರಡು ಮೂಲೆ ತೊಟ್ಟಲಿಟ್ಟು ತೂಗಿತು ಎನ್ನುವ ಮೂಲಕ ಎರಡು ಭಾಗದಲ್ಲಿ ಭೂಕಂಪ ಆಗಬಹುದು ಎಂದಿದೆ.