ಬೆಂಗಳೂರು: ದಿನೇ ದಿನೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದ್ದರೆ ಆಶ್ಚರ್ಯಕರ ರೀತಿಯಲ್ಲಿ ಇದರಿಂದ ಕರ್ನಾಟಕ ಸರ್ಕಾರಕ್ಕೆ ಬರುತ್ತಿರುವ ಆದಾಯದಲ್ಲಿ ಭಾರೀ ಕುಸಿತವಾಗುತ್ತಿದೆ.
ಹೌದು. ಕರ್ನಾಟಕ ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆಯ ಮಾಹಿತಿ ಪ್ರಕಾರ ಬಜೆಟ್ ನಂತರದ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ತೈಲದಿಂದ ಸರ್ಕಾರಕ್ಕೆ ಬರುವ ಆದಾಯ ಕಡಿಮೆಯಾಗಿದೆ.
Advertisement
Advertisement
ಎಷ್ಟೆಷ್ಟು ಆದಾಯ?
ಜೂನ್ ತಿಂಗಳು – 1247 ಕೋಟಿ ರೂ. ಆದಾಯ ಬಂದಿತ್ತು. ಇದಾದ ನಂತರ ಜುಲೈ 5 ರಂದು ಕುಮಾರಸ್ವಾಮಿ ಬಜೆಟ್ ಮಂಡಿಸಿದ್ದರು. ಆದರೆ ಜುಲೈನಲ್ಲಿ 1,222 ಕೋಟಿ ರೂ. ಬಂದಿದ್ದರೆ ಆಗಸ್ಟ್ ನಲ್ಲಿ ಮತ್ತಷ್ಟು ಆದಾಯ ಇಳಿಕೆಯಾಗಿದ್ದು 1,205 ಕೋಟಿ ರೂ.ಬಂದಿದೆ.
Advertisement
ಹೆಚ್ಚುವರಿ ಆದಾಯಕ್ಕಾಗಿ ಸುಂಕ ಹೆಚ್ಚಿಸಿದ್ರೂ ಯಾಕೆ ಆದಾಯ ಕುಸಿಯುತ್ತಿದೆ ಎಂದು ಹೆಚ್‍ಡಿಕೆ ಸರ್ಕಾರ ಈಗ ತಲೆ ಕೆಡಿಸಿಕೊಂಡಿದೆ. ರೈತರ ಸಾಲ ಮನ್ನಾ ಸಲುವಾಗಿ ಕಳೆದ ಬಜೆಟ್‍ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಶೇ.2 ರಷ್ಟು ಹೆಚ್ಚಳವಾಗಿತ್ತು. ಇದರಿಂದಾಗಿ ಪ್ರತಿ ತಿಂಗಳು 1,500 ಕೋಟಿ ಆದಾಯ ಸಿಗುತ್ತೆ ಎಂದು ಸರ್ಕಾರ ಭಾವಿಸಿತ್ತು. ಆದರೆ ಮೊದಲಿಗಿಂತ ಆದಾಯ ಕಡಿಮೆಯಾಗಿದೆ. ಇದನ್ನೂ ಓದಿ: ಲೀಟರ್ ಪೆಟ್ರೋಲ್ ಬೆಲೆ 55 ರೂ., ಡೀಸೆಲ್ 50 ರೂ. ಆಗುತ್ತೆ: ಗಡ್ಕರಿ
Advertisement
ರಾಜ್ಯ ಪೆಟ್ರೋಲ್ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರನಾಥ್ ಸೇರಿದಂತೆ ಹಲವರು ಈ ಮಾಹಿತಿಯನ್ನು ಒಪ್ಪುತ್ತಿಲ್ಲ. ಕಡಿಮೆಯಾಗಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದು, ಆದಾಯ ಲೆಕ್ಕ ಹಾಕುವ ವಿಚಾರದಲ್ಲಿ ಎಲ್ಲೋ ಲೋಪವಾಗಿರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಖರೀದಿಸಿದ್ರೆ ಬೈಕ್, ಲ್ಯಾಪ್‍ಟಾಪ್ ಉಚಿತ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv