ನಿವೃತ್ತ IPS ಅಧಿಕಾರಿಗೆ 10 ಬಾರಿ ಚಾಕುವಿನಿಂದ ಇರಿದು ಕೊಂದ ಪತ್ನಿ; 15 ನಿಮಿಷ ನರಳಿ ಪ್ರಾಣಬಿಟ್ಟ ಓಂ ಪ್ರಕಾಶ್‌

Public TV
1 Min Read
om prakash EX IPS officer

– ಪತಿ ನರಳಾಟ ನೋಡುತ್ತಾ ನಿಂತಿದ್ದ ಹೆಂಡತಿ

ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (68) ಬರ್ಬರ ಕೊಲೆಯಾಗಿದೆ. ಹೆಚ್‌ಎಸ್‌ಆರ್ ಲೇಔಟ್‌ನ ಮನೆಯಲ್ಲಿ ಸಂಜೆ 4 ಗಂಟೆ ಸುಮಾರಿಗೆ ಪತ್ನಿ ಪಲ್ಲವಿ ಅವರೇ ಓಂ ಪ್ರಕಾಶ್‌ಗೆ ಚಾಕುವಿನಿಂದ 8-10 ಬಾರಿ ಎದೆ, ಹೊಟ್ಟೆ ಭಾಗಕ್ಕೆ ಇರಿದು ಕೊಂದಿದ್ದಾರೆ.

ಈ ವೇಳೆ, ಸುಮಾರು 10-15 ನಿಮಿಷ ರಕ್ತದ ಮಡುವಿನಲ್ಲಿ ಓಂ ಪ್ರಕಾಶ್ (Om Prakash) ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಈ ವೇಳೆ ಗಂಡನ ನರಳಾಟ ನೋಡುತ್ತಾ ಪತ್ನಿ ನಿಂತಿದ್ದರು. ಕೆಳಗಿನ ಮಹಡಿಯ ಹಾಲ್ ಸಂಪೂರ್ಣ ರಕ್ತಸಿಕ್ತವಾಗಿತ್ತು. ಸ್ಥಳ ಮಹಜರು ನಡೆಸಿದ ಪೊಲೀಸರು, ಪತ್ನಿ ಪಲ್ಲವಿ, ಮಗಳನ್ನು ವಶಕ್ಕೆ ಪಡೆದ್ದಾರೆ. ಇದನ್ನೂ ಓದಿ: ರಾಜ್ಯದ 38ನೇ ಡಿಜಿ & ಐಜಿಪಿ ಆಗಿದ್ದ ಓಂ ಪ್ರಕಾಶ್‌ ಹತ್ಯೆ – ಪತ್ನಿಯಿಂದಲೇ ಕೊಲೆ

om prakash

ಸ್ಥಳದಲ್ಲೇ ಇದ್ದ ಚಾಕು ಸೀಜ್ ಮಾಡಿದ್ದಾರೆ. ಸೊಸೆ, ಮಗ ಊಟಕ್ಕೆ ಹೊರಗಡೆ ಹೋದಾಗ ತಾಯಿ ಪಲ್ಲವಿ, ಮಗಳು ಕೃತಿಕಾ ಜೊತೆ ಸೇರಿ ಕೊಂದಿದ್ದಾರೆ. ಘಟನೆ ಬೆನ್ನಲ್ಲೇ ಡಿಜಿ ಅಲೋಕ್‌ಮೋಹನ್, ಬೆಂಗಳೂರು ಕಮಿಷನರ್ ದಯಾನಂದ್ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಓಂ ಪ್ರಕಾಶ್ ದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಹಾರದ ಚಂಪಾರಣ್ ಮೂಲದ ಓಂ ಪ್ರಕಾಶ್ 1981ನೇ ಕೇಡರ್‌ನ ಐಪಿಎಸ್ ಅಧಿಕಾರಿ, ರಾಷ್ಟçಪತಿಗಳ ಪದಕ ಪಡೆದಿದ್ದರು. 2015ರಲ್ಲಿ 3 ವರ್ಷ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿದ್ದರು. ಇದನ್ನೂ ಓದಿ: ಭಾರೀ ಗಾಳಿ ಮಳೆ – ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾರಿಗೆ ನೌಕರ ದುರ್ಮರಣ

Share This Article