ರಾಮನಗರ: ರಾಜ್ಯದಲ್ಲಿ ಪ್ರಥಮ ಬಾರಿಗೆ ತ್ಯಾಜ್ಯ ಇಂಧನ ಘಟಕವನ್ನು (WTE Plant) ಬಿಡದಿಯಲ್ಲಿ (Bidadi) ಆರಂಭಿಸಲಾಗುತ್ತಿದೆ. ಇದರ ಕಾಮಗಾರಿಯನ್ನು ಇಂಧನ ಸಚಿವ ಜಾರ್ಜ್ (K.J George) ಪರಿಶೀಲನೆ ಮಾಡಿದ್ದಾರೆ.
ಇದೇ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 15 ಎಕರೆ ವಿಸ್ತೀರ್ಣದಲ್ಲಿ ತ್ಯಾಜ್ಯ ಇಂಧನ ಘಟಕ ನಿರ್ಮಾಣಗೊಳ್ಳುತ್ತಿದೆ. ಇದು ಸುಮಾರು 280 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. 600 ಟನ್ ಸಾಮರ್ಥ್ಯ ಇರುವ ಇಂಧನ ಘಟಕ ಇದಾಗಿದೆ. ಇಲ್ಲಿ 11.5 ಮೆಗಾ ವ್ಯಾಟ್ ಪವರ್ ಉತ್ಪಾದನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರ, ಧರ್ಮ ಕಲಹದಲ್ಲಿ ತೊಡಗಿಕೊಳ್ಳದಂತೆ ಸಿಎಂ ಸಲಹೆ
Advertisement
Advertisement
ಪ್ರಥಮ ಬಾರಿಗೆ ರಾಜ್ಯದಲ್ಲಿ ತಾಜ್ಯ ಇಂಧನ ಘಟಕ ಬಿಡದಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಿರ್ಮಾಣವಾಗುತ್ತಿದೆ. ಇದರಿಂದ ಬೆಂಗಳೂರಿನ ಕಸಕ್ಕೆ ಮುಕ್ತಿ ನೀಡುವ ಜೊತೆಗೆ ಇಂಧನ ಉತ್ಪಾದನೆಗೆ ಕ್ರಮವಹಿಸಲಾಗಿದೆ. ಪ್ರತಿ ದಿನ ಬೆಂಗಳೂರಿನಲ್ಲಿ 6 ಸಾವಿರ ಟನ್ ಕಸ ಉತ್ಪಾದನೆಯಾಗುತ್ತದೆ. ಈ ಕಸವನ್ನ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರ ಜೊತೆಗೆ ಇಂಧನ ಉತ್ಪಾದನೆಯನ್ನೂ ಮಾಡುವುದು ಇದರ ಗುರಿ ಎಂದಿದ್ದಾರೆ.
Advertisement
Advertisement
ಈ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿದ್ದ ವೇಳೆ ಈ ಬಗ್ಗೆ ಚಿಂತಿಸಲಾಗಿತ್ತು. ನಂತರ ವಿದೇಶಿ ಪ್ರವಾಸ ಮಾಡಿ ಅಲ್ಲಿನ ಇಂಧನ ಘಟಕಗಳನ್ನು ಪರಿಶೀಲನೆ ಮಾಡಿದ್ದೆ. ಇದೀಗ ಬಿಬಿಎಂಪಿ (BBMP), ಕೆಪಿಟಿಸಿಎಲ್ ಸಹಯೋಗದೊಂದಿಗೆ ಸ್ಥಾವರ ನಿರ್ಮಿಸುತ್ತಿದ್ದೇವೆ. ವಿದೇಶಿ ತ್ಯಾಜ್ಯ ವಿದ್ಯುತ್ ಘಟಕಕ್ಕಿಂತಲೂ ಇಲ್ಲಿನ ಘಟಕವನ್ನು ಚೆನ್ನಾಗಿ ನಿರ್ಮಿಸಲಾಗುತ್ತಿದೆ. ಇಲ್ಲಿ ಕಸದ ವಾಸನೆ ಬರುವುದಿಲ್ಲ. ಪ್ರಾಯೋಗಿಕವಾಗಿ ಒಂದು ಸ್ಥಾವರ ಆರಂಭವಾಗಲಿದೆ ಎಂದಿದ್ದಾರೆ.
ವಿದ್ಯುತ್ ಉತ್ಪಾದನಾ ಸಾಮಥ್ರ್ಯ ತಿಳಿದು ಮತ್ತಷ್ಟು ಸ್ಥಾವರ ನಿರ್ಮಾಣ ಮಾಡುವ ಯೋಜನೆ ಇದೆ. ಎಲ್ಲಾ ಜಿಲ್ಲೆಯ ಕಸದ ಸಮಸ್ಯೆ ಈ ರೀತಿ ನಿವಾರಣೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಬಾಂಬ್ ಸ್ಫೋಟದ ಬೆದರಿಕೆ, ಪ್ರಧಾನಿ ಕೊಲ್ಲುವುದಾಗಿ ಕಾಮೆಂಟ್: ಆರೋಪಿಗಾಗಿ ತೀವ್ರ ಶೋಧ
Web Stories