ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೆ ಕೊರೊನಾ (Corona) ವ್ಯಾಕ್ಸಿನೇಷನ್‍ಗೆ (Vaccination) ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಆದ್ರೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಲಸಿಕೆ ಕೊರತೆ ಕಾಡುತ್ತಿದೆ.
Advertisement
ಬೆಂಗಳೂರು ಸಹಿತ ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಎರಡನೇ ಅಲೆಯಲ್ಲಿ ಲಾಕ್‍ಡೌನ್ ಸೇರಿದಂತೆ ಸಾವು-ನೋವಿನಿಂದ ಜನರನ್ನು ಕಂಗೆಡಿಸಿದ್ದು ಇನ್ನೂ ಕಣ್ಣಿಂದ ಮರೆಯಾಗಿಲ್ಲ. ಈಗ ಪರಿಸ್ಥಿತಿ ತಿಳಿಯಾಗಿದ್ದು, ಮೂರನೇ ಅಲೆಯಲ್ಲಿ ಕೊರೊನಾ ಅಟ್ಟಹಾಸ ಪಸರಿಸದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿತ್ತು. ಈಗ ಮತ್ತೊಮ್ಮೆ ಕೊರೊನಾ ಭಯ ಕಾಡುತ್ತಿದ್ದು, ಮಹಾಮಾರಿ ವಿರುದ್ಧ ಹೋರಾಟ ಮಾಡುವ ಲಸಿಕೆ ಕೊರೊನಾಗೆ ರಾಮಬಾಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಾಗಾಗಿ ಈಗ ಲಸಿಕೆಗೆ ಮತ್ತೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಇದನ್ನೂ ಓದಿ: ಚೀನಾದಲ್ಲಿ ಪ್ರತಿ ದಿನ 10 ಲಕ್ಷ ಕೇಸ್, 5000 ಸೋಂಕಿತರ ಸಾವು
Advertisement
Advertisement
ವಿಪರ್ಯಾಸವೆಂದರೆ ಕೊರೊನಾ ಲಸಿಕೆ ಲಭ್ಯತೆ ಕೊರತೆ ಎದ್ದು ಕಾಣುತ್ತಿದೆ. ಕೊರೊನಾ ಕೋವ್ಯಾಕ್ಸಿನ್ ಎಲ್ಲೆಡೆ ಪೂರ್ಣ ಪ್ರಮಾಣದಲ್ಲಿ ಲಭ್ಯವಿದೆ. ಆದ್ರೆ, ಕೋವಿಶೀಲ್ಡ್ (Covishield) ವ್ಯಾಕ್ಸಿನೇಷನ್ ಕೊರತೆ ಎದುರಾಗಿದ್ದು, ಕಳೆದ ಒಂದು ವಾರದಿಂದ ನಗರದ 198 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಲಸಿಕೆ ಲಭ್ಯವಿಲ್ಲ. ಮೂಲಗಳ ಪ್ರಕಾರ ಜನರು ಲಸಿಕೆ ಪಡೆಯುವುದು ಕಡಿಮೆ ಆಗಿತ್ತು. ಯಾಕೆಂದ್ರೆ ಕೊರೊನಾ ತೀವ್ರತೆ ಕಡಿಮೆ ಆಗಿ ಜನ ಲಸಿಕೆ ಪಡೆಯಲು ಹಿಂದೇಟು ಹಾಕಿದ್ರು. ಇದರ ಪರಿಣಾಮ ಎಲ್ಲ ಕೇಂದ್ರದಿಂದಲೂ ಆರೋಗ್ಯ ಇಲಾಖೆಗೆ ಲಸಿಕೆ ವಾಪಸ್ ನೀಡುವಂತೆ ಪತ್ರ ವ್ಯವಹಾರ ಮಾಡಿದ್ದಾರೆ. ಜೊತೆಗೆ ಕೊರೊನಾ ಆರೋಗ್ಯ ಕಾರ್ಯಕರ್ತರನ್ನೂ ಸಹ ಇಲಾಖೆಗಳಿಗೆ ವಾಪಸ್ ಕಳುಹಿಸಲಾಗಿದೆ. ಇದನ್ನೂ ಓದಿ: ಬಸ್, ಸಿನಿಮಾ ಥಿಯೇಟರ್, ಪಬ್ ಬಾರ್‌ಗಳಲ್ಲೂ ಮಾಸ್ಕ್ ಅಗತ್ಯ – ರಾಜ್ಯ ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ನಲ್ಲಿ ಏನೇನಿದೆ?
Advertisement
ಇದೀಗ ಕೊರೊನಾ ಟೆಸ್ಟಿಂಗ್, ವ್ಯಾಕ್ಸಿನೇಷನ್ ಹಾಗೂ ಜಾಗೃತಿಗಾಗಿ ನಮ್ಮ ಕ್ಲಿನಿಕ್‍ಗಾಗಿ ನೇಮಕ ಮಾಡುವ ಸಿಬ್ಬಂದಿ ಬಳಸಲು ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ ಬೂಸ್ಟರ್ ಡೋಸ್ (Booster Dose) ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.