ಚಿಕ್ಕಬಳ್ಳಾಪುರ: ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಸೋಮವಾರ ರಾತ್ರಿ (ಇಂದು) ಉಡಾವಣೆಯಾಗಲಿದೆ. ಈ ಉಪಗ್ರಹಕ್ಕೆ ರಾಜ್ಯದ ಪ್ರತಿಷ್ಟಿತ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ವತಿಯಿಂದ `ಅರ್ಪಿತ್’ ಪೇಲೋಡ್ ಒದಗಿಸಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಚಿಕ್ಕಬಳ್ಳಾಪುರದ ಎಸ್ಜೆಸಿಐಟಿ ಇಂಜಿನಿಯರಿಂಗ್ ಕಾಲೇಜಿನ (SJCIT Engineering College) ತಂಡ ಮುಂದಾಗಿದೆ.
Advertisement
ಅಂದಹಾಗೆ ಇಂದು ರಾತ್ರಿ 9 ಗಂಟೆ 58 ನಿಮಿಷಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2 ಉಪಗ್ರಹಗಳು ಉಡಾವಣೆಯಾಗಲಿದೆ. ಇದಕ್ಕಾಗಿ ʻಅರ್ಪಿತ್ʼ ಹೆಸರಿನ ಪೇಲೋಡ್ ನಿರ್ಮಿಸಿರುವ ಎಸ್ಜೆಸಿಐಟಿ ಇಂಜಿನಿಯರಿಂಗ್ ಕಾಲೇಜಿನ ತಂಡ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ತಲುಪಿದೆ. ಇದನ್ನೂ ಓದಿ: ಡಾಕಿಂಗ್ ಸಾಹಸಕ್ಕೆ ಇಸ್ರೋ ರೆಡಿ – ಏನಿದು ಪ್ರಯೋಗ? ಇಷ್ಟೊಂದು ಮಹತ್ವ ಯಾಕೆ?
Advertisement
Advertisement
ಈ ಪೇಲೋಡ್ನ ಮುಖ್ಯ ಉದ್ದೇಶ ಎಂದರೆ ಸಾರ್ವಜನಿಕರು ಸಹ ಸ್ಯಾಟಲೈಟ್ ಜೊತೆ ಸಂಪರ್ಕ ಸಾಧಿಸುವುದು, ಸ್ಯಾಟಲೈಟ್ ನಿಂದ ರೇಡಿಯೋ ತರಂಗಾಂತರ ಮೂಲಕ ಫೋಟೋ, ವಿಡಿಯೋ, ಆಡಿಯೋ ಹಂಚಿಕೊಳ್ಳಬಹುದಾಗಿದೆ. ಇದನ್ನೂ ಓದಿ: Bihar | ಮರುಪರೀಕ್ಷೆಗೆ ಆಗ್ರಹ – ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ
Advertisement
ಇನ್ನೂ ಈ ಸ್ಪೈಡೆಕ್ಸ್ ಸ್ಯಾಟಲೈಟ್ ಯೋಜನೆ ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನ ಒಂದಕ್ಕೊಂದು ಸಂಪರ್ಕ ಜೋಡಿಸುವುದಾಗಿದೆ. ಈ ಯೋಜನೆಯ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸಾಧಿಸಲಿದೆ. ಈ ಯೋಜನೆಯಲ್ಲಿ ಎರಡು ಉಗ್ರಹಗಳಿದ್ದು ಒಂದಕ್ಕೊಂದು ಸಂವಹನ ಸಾಧಿಸುವ ಪ್ರಯೋಗ ನಡೆಸಲಾಗುತ್ತದೆ.
ಇದರಲ್ಲಿ 24 ಪೇಲೋಡ್ ಗಳಿದ್ದು 14 ಪೆಲೋಡ್ ಗಳನ್ನ ಇಸ್ರೋ ಸಂಸ್ಥೆ ನಿರ್ಮಾಣ ಮಾಡಿದ್ರೆ ಉಳಿದ 10 ಪೇಲೋಡ್ ಇತರೆ ಸಂಸ್ಥೆಗಳು ತಯಾರಿ ಮಾಡಿವೆ. ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸ್ಮಾರಕಕ್ಕೆ ಸ್ಥಳ ಪರಿಶೀಲನೆ