ಚಿಕ್ಕಮಗಳೂರು: ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದಂತೆ ಮಲೆನಾಡಲ್ಲಿಯೂ ಮಳೆಯಬ್ಬರ ಜೋರಾಗಿದೆ. ಜಿಲ್ಲೆಯಲ್ಲಿ ತುಂಗಾ-ಭದ್ರೆಯರ ಅಬ್ಬರ ಜೋರಾಗಿದ್ದು, ಅಕ್ಕ-ತಂಗಿಯರು ಪ್ರವಾಹದಂತೆ ಹರಿಯುತ್ತಿದ್ದಾರೆ. ತುಂಗೆಯ ಅಬ್ಬರಕ್ಕೆ ಶೃಂಗೇರಿ ಅಕ್ಷರಶಃ ಜಲಾವೃತವಾಗಿದೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮಠದ ಗಾಂಧಿ ಮೈದಾನದ ಆವರಣದಲ್ಲಿ ಜಲದಿಗ್ಬಂಧನವಾಗಿದೆ. ಈ ಮೂಲಕ ಶಾರದಾಂಬೆಗೂ ಪ್ರವಾಹದ ಭೀತಿ ತಟ್ಟಿದೆ. ಜನರ ನೋವು, ಕಷ್ಟಗಳನ್ನು ಕೇಳುವವರಿಲ್ಲದಂತಾಗಿದ್ದು, ಜಿಲ್ಲಾಡಳಿತ, ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಭಕ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಹೊರನಾಡು ಮಾರ್ಗ ಬಂದ್:
ಭದ್ರೆಯ ಭೀಕರತೆಗೆ ಹೊರನಾಡು ಮಾರ್ಗ ಬಂದ್ ಆಗಿದ್ದು, ಅನ್ನಪೂರ್ಣೇಶ್ವರಿ ದರ್ಶನ ಅಸಾಧ್ಯವಾಗಿದೆ. ಭದ್ರೆಯ ಉಪನದಿ ಆರ್ಭಟಕ್ಕೆ ನೋಡ-ನೋಡುತ್ತಿದ್ದಂತೆ ರಸ್ತೆ ಕೊಚ್ಚಿಹೋಗಿದೆ. ಹೊರನಾಡಿನಿಂದ 2 ಕಿ.ಮೀ ಅಂತರದಲ್ಲಿ ಈ ರಸ್ತೆ ಕೊಚ್ಚಿ ಹೋಗಿದೆ.
Advertisement
ಹೊರನಾಡು – ಕಳಸ ಮಧ್ಯ ಭಾಗದಲ್ಲಿ ರಸ್ತೆ ಕುಸಿತವಾಗಿದ್ದು ಹೊರನಾಡಿಗೆ ಸಂಪರ್ಕಿಸುವ ಎಲ್ಲಾ ಮಾರ್ಗಗಳು ಬಂದ್ ಆಗಿವೆ. ಕುದುರೆಮುಖದಲ್ಲಿ ಮಳೆಯಬ್ಬರ ಹೆಚ್ಚುತ್ತಲೇ ಇದ್ದು, ಮಳೆಗಾಗಿ ಕಳೆದ ತಿಂಗಳು ಅನ್ನಪೂರ್ಣೇಶ್ವರಿಗೆ ಪರ್ಜನ್ಯ ಜಪ ಮಾಡಲಾಗಿತ್ತು.