ಸೂರತ್: ಸಯ್ಯದ್ ಮುಷ್ತಾಕ್ ಅಲಿ ಟಿ 20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಹರ್ಯಾಣ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿ ಕರ್ನಾಟಕ ಫೈನಲ್ ಪ್ರವೇಶಿಸಿದೆ.
ಇಂದು ಸೂರತ್‍ನ ಲಾಲ್ಬಾಯ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹರ್ಯಾಣ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದರೆ ಕರ್ನಾಟಕ 15 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿ ಜಯಗಳಿಸಿದೆ. ಒಂದೇ ಓವರಿನಲ್ಲಿ ಐದು ವಿಕೆಟ್ ಪಡೆದು ಮಿಂಚಿದ ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಭಾರತದ ಪರ ಹೊಸ ದಾಖಲೆ ಬರೆದಿದ್ದಾರೆ.
Advertisement
Karnataka beat Haryana by eight wickets to storm into the #MushtaqAliT20 final
For full scorecard ???????? https://t.co/fYjNa71y13#HARvKAR @paytm pic.twitter.com/6ijebCgYzR
— BCCI Domestic (@BCCIdomestic) November 29, 2019
Advertisement
ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡ, ಹರ್ಯಾಣ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನ ನೀಡಿತು. ಹರ್ಯಾಣ ಆರಂಭಿಕ ಚೈತನ್ಯ ಬಿಷ್ಣೋಯಿ 55 ರನ್(35 ಎಸೆತ, 7 ಬೌಂಡರಿ, 1 ಸಿಕ್ಸರ್) ಅವರ ಅರ್ಧಶತಕ ಮತ್ತು ಹಿಮಾಂಶು ರಾಣ 61 ರನ್ (34 ಎಸೆತ, 6 ಬೌಂಡರಿ, 2 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ನಿಂದ ಎಂಟು ವಿಕೆಟ್ ಕಳೆದುಕೊಂಡು 194 ರನ್‍ಗಳ ಬೃಹತ್ ಮೊತ್ತ ಸೇರಿಸಿತು.
Advertisement
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭಿಕಾರದ ಕೆ.ಎಲ್ ರಾಹುಲ್ ಮತ್ತು ದೇವದುತ್ ಪಡಿಕ್ಕಲ್ ಇಬ್ಬರು ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಆಡಿಪಾಯ ಹಾಕಿಕೊಟ್ಟರು. ಸೆಮಿಫೈನಲ್ ಪಂದ್ಯದಲ್ಲಿ ಸ್ಪೋಟಕ ಆಟ ಪ್ರದರ್ಶಿಸಿದ ಪಡಿಕ್ಕಲ್ ಕೇವಲ 42 ಎಸೆತಗಳಲ್ಲಿ ಭರ್ಜರಿ 11 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ 87 ರನ್ ಹೊಡೆದರೆ, ಇವರಿಗೆ ಉತ್ತಮ ಸಾಥ್ ಕೊಟ್ಟ ಕೆ.ಎಲ್ ರಾಹುಲ್ 31 ಎಸೆತಗಳಲ್ಲಿ 4 ಬೌಂಡರಿ ಮತ್ತು ಆರು ಭರ್ಜರಿ ಸಿಕ್ಸರ್ ನೊಂದಿಗೆ 66 ರನ್ ಸಿಡಿಸಿ ಕರ್ನಾಟಕವನ್ನು ಗೆಲುವಿನ ಸಮೀಪ ತಂದರು.
Advertisement
WATCH: @klrahul11's breezy 66 off 31 balls set the tone to Karnataka's run-chase against Haryana in the #MushtaqAliT20 semi-final. https://t.co/fPiEt74LPg#HARvKAR @paytm pic.twitter.com/ziIz5qk7cH
— BCCI Domestic (@BCCIdomestic) November 29, 2019
9.3 ಓವರ್ ಗಳಲ್ಲಿ ಮೊದಲ ವಿಕೆಟಿಗೆ 125 ರನ್ ಜೊತೆಯಾಟವಾಡಿ ರಾಹುಲ್ ಔಟ್ ಆದರು. ಮಯಾಂಕ್ ಅಗರವಾಲ್ ಔಟಾಗದೇ 30 ರನ್(14 ಎಸೆತ, 3 ಸಿಕ್ಸರ್) ನಾಯಕ ಮನಿಷ್ ಪಾಂಡೆ ಔಟಾಗದೇ 3 ರನ್ ಹೊಡೆದು ಜಯವನ್ನು ತಂದಿಟ್ಟರು. ಈ ಪಂದ್ಯದಲ್ಲಿ ಹರ್ಯಾಣ ಪರ 4 ಸಿಕ್ಸ್ ದಾಖಲಾದರೆ ಕರ್ನಾಟಕದ ಪರ 13 ಸಿಕ್ಸ್ ದಾಖಲಾಗಿದೆ.
ಅಭಿಮನ್ಯು ದಾಖಲೆ:
ಅಭಿಮನ್ಯು ಮಿಥುನ್ ಒಂದೇ ಓವರಿನಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಭಾರತದ ಪರ ದಾಖಲೆ ಬರೆದಿದ್ದಾರೆ. ಈ ದಾಖಲೆ ಅಭಿಮನ್ಯು ಎಸೆದ 4ನೇ ಓವರಿನಲ್ಲಿ ಬಂದಿದ್ದು ವಿಶೇಷ. 3 ಓವರ್ ಗಳಲ್ಲಿ ಒಂದೇ ವಿಕೆಟ್ ಪಡೆಯದ ಅಭಿಮನ್ಯು ಕೊನೆಯ ಓವರಿನ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ಒಂದು ವೈಡ್ ಒಂದು ರನ್ ಬಿಟ್ಟುಕೊಟ್ಟು ಕೊನೆಯ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದಿದ್ದಾರೆ. ಅಂತಿಮವಾಗಿ 4 ಓವರ್ ಗಳಲ್ಲಿ 39 ರನ್ ನೀಡಿದ್ದಾರೆ. ಈ ಹಿಂದೆ ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಶ್ರೀಲಂಕಾದ ವೇಗಿ ಲಸಿತ್ ಮಲಿಂಗ ಒಂದೇ ಓವರಿನಲ್ಲಿ 5 ವಿಕೆಟ್ ಪಡೆದಿದ್ದರು. ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಾಧನೆ ನಿರ್ಮಿಸಿದ್ದರು.
WATCH: W, W, W, W, WD, 1, W – @imAmithun_264’s five-wicket final over. ????????????????https://t.co/XnGPYu4GON#HARvKAR @paytm #MushtaqAliT20 pic.twitter.com/w1ij1xJlT0
— BCCI Domestic (@BCCIdomestic) November 29, 2019