ಚಿಕ್ಕೋಡಿ: ಕರ್ನಾಟಕ (Karnataka) ಮೂಲದ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಮಹಿಳೆ ಮತ್ತು ಮೂವರು ಪುಟ್ಟ ಹೆಣ್ಮಕ್ಕಳು ಮಹಾರಾಷ್ಟ್ರದ (Maharashtra) ಜತ್ತ ತಾಲೂಕಿನ ಬಿಳ್ಳೂರು ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕಳೆದ ಭಾನುವಾರ ಮುಂಜಾನೆ ಮನೆ ಬಿಟ್ಟು ಹೋಗಿದ್ದ ಮಹಿಳೆ ಮತ್ತು ಮೂವರು ಪುಟ್ಟ ಹೆಣ್ಮಕ್ಕಳು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದವರಾದ ಸುನಿತಾ ತುಕಾರಾಮ್ ಮಾಳಿ ಮತ್ತು ಪುತ್ರಿಯರಾದ ಅಮೃತಾ, ಅಂಕಿತಾ ಹಾಗೂ ಐಶ್ವರ್ಯಾ ಕೆರೆಯಲ್ಲಿ ಶವವಾಗಿ ಪತ್ತೆಯಾದವರು. ಇದನ್ನೂ ಓದಿ: ಡಿಸಿ ಕಚೇರಿಗೆ ಬೀಗ ಹಾಕಿ ರೈತರಿಂದ ಪ್ರತಿಭಟನೆ
ಇವರು ಮಹಾರಾಷ್ಟ್ರದ ಜತ್ತ ತಾಲೂಕಿನ ಬಿಳ್ಳೂರು ಗ್ರಾಮದಲ್ಲಿ ಮೃತಪಟ್ಟಿದ್ದಾರೆ. ಸುನಿತಾ ಅವರನ್ನು ಮಹಾರಾಷ್ಟ್ರದ ಬಿಳ್ಳೂರು ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿದ್ದು, ಅವರಿಗೆ ಮೂವರೂ ಹೆಣ್ಮಕ್ಕಳಿದ್ದಾರೆ. ಅಲ್ಲಿ ಸಂಸಾರ ಹೇಗೆ ನಡೆಯುತ್ತಿತ್ತು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಆಕೆ ಒಮ್ಮಿಂದೊಮ್ಮೆಗೇ ನಾಪತ್ತೆಯಾಗಿ ಶವವಾಗಿ ಪತ್ತೆಯಾಗಿರುವುದರಿಂದ ಕೌಟುಂಬಿಕ ಸಮಸ್ಯೆಗಳೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.
ಸುನೀತಾ ಅವರು ಕಳೆದ ಭಾನುವಾರ ಮುಂಜಾನೆ ಒಮ್ಮಿಂದೊಮ್ಮೆಗೇ ನಾಪತ್ತೆಯಾಗಿದ್ದು, ಜತೆಗೆ ಮಕ್ಕಳೂ ಕಾಣಿಸುತ್ತಿರಲಿಲ್ಲ. ಮನೆಯವರು ಹುಡುಕಾಟಕ್ಕೆ ಆರಂಭ ಮಾಡಿದಾಗ ಸಂಜೆಯ ಹೊತ್ತಿಗೆ ಬಿಳ್ಳೂರು ಗ್ರಾಮದಲ್ಲಿ ಶವವಾಗಿ ಪತ್ತೆಯಾದರು. ಪ್ರಕರಣವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಮಹಾರಾಷ್ಟ್ರದ ಜತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಫುಟ್‌ಪಾತ್ ಮೇಲೆ ಚಲಾಯಿಸಿದ ಚಾಲಕ – ಅಪಘಾತಕ್ಕೆ ನಿವೃತ್ತ ಯೋಧ ಬಲಿ