ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಕಳೆದ ಕೆಲದಿನಗಳಿಂದ ವರುಣ ಆರ್ಭಟಿಸುತ್ತಿದ್ದು, ಬೆಂಗಳೂರು ಸಹಿತ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಮುಂದಿನ ವಾರ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಇನ್ನೂ ಒಂದೆರಡು ದಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ ಇದ್ದು, ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 29-27
ಮಂಗಳೂರು: 31-24
ಶಿವಮೊಗ್ಗ: 30-20
ಬೆಳಗಾವಿ: 30-18
ಮೈಸೂರು: 30-20
ಮಂಡ್ಯ: 30-19
ರಾಮನಗರ: 29-19
ಮಡಿಕೇರಿ: 25-26
ಹಾಸನ: 28-18
ಚಾಮರಾಜನಗರ: 30-21
ಚಿಕ್ಕಬಳ್ಳಾಪುರ: 28-19
ಕೋಲಾರ: 28-20
ತುಮಕೂರು: 28-19
ಉಡುಪಿ: 31-24
ಕಾರವಾರ: 31-25
ಚಿಕ್ಕಮಗಳೂರು: 28-17
ದಾವಣಗೆರೆ: 31-21
ಚಿತ್ರದುರ್ಗ: 29-20
ಹಾವೇರಿ: 32-20
ಬಳ್ಳಾರಿ: 33-23
ಗದಗ: 32-21
ಕೊಪ್ಪಳ: 32-22
ರಾಯಚೂರು: 33-22
ಯಾದಗಿರಿ: 32-22
ವಿಜಯಪುರ: 32-21
ಬೀದರ್: 29-19
ಕಲಬುರಗಿ: 32-21
ಬಾಗಲಕೋಟೆ: 32-22