ಮಾಂಡಸ್ ಚಂಡಮಾರುತದ ರೌದ್ರವತಾರ ಜೋರಾಗಿದೆ. ಈಗ ಮತ್ತೆ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಎಷ್ಟು ದಿನ ಮಳೆ ಇರುತ್ತೆ. ವಾತಾವರಣದ ವ್ಯತ್ಯಯ ಹೇಗಿರುತ್ತೆ? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Advertisement
ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮೋಡಕವಿದ ವಾತಾವರಣ, ತುಂತುರು ಮಳೆ, ಮೈ ನಡುಗಿಸುವ ಚಳಿ ಹೀಗೆ ವಾತಾವರಣ ಜನರನ್ನು ಹೈರಾಣಾಗಿಸಿದೆ. ಹೀಗೆ ವಾತಾವರಣ ಬದಲಾವಣೆ ಆಗ್ತಿರೋದಕ್ಕೆ ಕಾರಣ ಮಾಂಡಸ್ ಚಂಡಮಾರುತ. ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಮಾಂಡಸ್ ಸೈಕ್ಲೋನ್‍ನಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಿಗೆ ತಟ್ಟಿದೆ. ಮಾಂಡಸ್ ತನ್ನ ಆರ್ಭಟವನ್ನು ಇನ್ನೂ 2 ದಿನ ಮುಂದುವರೆಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
Advertisement
Advertisement
ಡಿಸೆಂಬರ್ 15 ರವರೆಗೂ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೀಗೆ ಮೋಡ ಕವಿದ ವಾತಾವರಣ, ತುಂತುರು ಮಳೆ ಮತ್ತು ಚಳಿ ಇರುತ್ತೆ ಅಂತಾ ಹವಾಮಾನ ಇಲಾಖೆ ಹೈ ಅಲರ್ಟ್ ನೀಡಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 14 ರವರೆಗೂ ಮಳೆ ಜೊತೆಗೆ ಮೋಡಕವಿದ ವಾತಾವರಣ ಇರೋ ಬಗ್ಗೆ ಕೂಡ ಎಚ್ಚರಿಸಿದೆ. ಇದಲ್ಲದೇ ಕರಾವಳಿ ಭಾಗದ ಮೀನುಗಾರರಿಗೆ ಡಿಸೆಂಬರ್ 15 ರವರೆಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲೂ ಬಿಟ್ಟು ಬಿಟ್ಟು ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
Advertisement
ಇನ್ನೂ 2016ರಲ್ಲಿ ವಾದ್ರಾ ಚಂಡಮಾರುತ ವೇಳೆ ಬೆಂಗಳೂರಿನಲ್ಲಿ ಗರಿಷ್ಟ ತಾಪಮಾನ ಅತ್ಯಂತ ಕಡಿಮೆ ದಾಖಲಾಗಿತ್ತು. ಸಾಮಾನ್ಯವಾಗಿ ಚಳಿಗಾಲದ ಡಿಸೆಂಬರ್ ತಿಂಗಳು ಗರಿಷ್ಠ 25-27 ಡಿಗ್ರಿ ಇರುತ್ತೆ. ಮಾಂಡಸ್ ಚಂಡಮಾರುತ ಪರಿಣಾಮ ತಾಪಮಾನ ಇಳಿಕೆಯಾಗಿದೆ. ಬಂಗಾಳ ಉಪಸಾಗರ ವಾಯುಭಾರ ಕುಸಿತದ ಪರಿಣಾಮ ಕಳೆದೆರಡು ದಿನಗಳಿಂದ ಗರಿಷ್ಟ ತಾಪಮಾನ ಇಳಿಮುಖವಾಗಿದೆ. ಚಳಿ ವಾತಾವರಣ ಮುಂದಿನ ಮೂರು ದಿನ ಮುಂದುವರಿಕೆಯಾಗಲಿದ್ದು ಕನಿಷ್ಠ ತಾಪಮಾನ ಇನ್ನಷ್ಟು ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂದಿನ ಒಂದು ವಾರ ಬೆಂಗಳೂರಿನಲ್ಲ ಎಷ್ಟು ಕನಿಷ್ಠ ತಾಪಮಾನ ದಾಖಲಾಗಬಹುದು ಎಂಬುದನ್ನು ಹವಾಮಾನ ಇಲಾಖೆ ಅಂದಾಜಿಸಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 24-18
ಮಂಗಳೂರು: 28-24
ಶಿವಮೊಗ್ಗ: 28-21
ಬೆಳಗಾವಿ: 26-21
ಮೈಸೂರು: 26-19
ಮಂಡ್ಯ: 27-19
ಮಡಿಕೇರಿ: 23-16
ರಾಮನಗರ: 26-19
ಹಾಸನ: 25-18
ಚಾಮರಾಜನಗರ: 27-19
ಚಿಕ್ಕಬಳ್ಳಾಪುರ: 23-17
ಕೋಲಾರ: 24-18
ತುಮಕೂರು: 26-19
ಉಡುಪಿ: 29-24
ಕಾರವಾರ: 30-25
ಚಿಕ್ಕಮಗಳೂರು: 24-18
ದಾವಣಗೆರೆ: 28-21
ಹುಬ್ಬಳ್ಳಿ: 27-21
ಚಿತ್ರದುರ್ಗ: 26-19
ಹಾವೇರಿ: 28-21
ಬಳ್ಳಾರಿ: 28-21
ಗದಗ: 27-21
ಕೊಪ್ಪಳ: 27-21
ರಾಯಚೂರು: 28-21
ಯಾದಗಿರಿ: 27-19
ವಿಜಯಪುರ: 27-21
ಬೀದರ್: 27-19
ಕಲಬುರಗಿ: 29-21
ಬಾಗಲಕೋಟೆ: 27-22