ಕರ್ನಾಟಕದಲ್ಲಿ ಮುಂಗಾರಿನ ಅಬ್ಬರ ಜೋರಾಗಿದೆ. ಇನ್ನೂ ಮೂರು ದಿನಗಳ ಕಾಲ ರಾಜ್ಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆಯಾಗಲಿದೆ. ಮೈಸೂರು ರಸ್ತೆ, ಟೌನ್ ಹಾಲ್, ಮೆಜೆಸ್ಟಿಕ್, ಆರ್.ಆರ್. ನಗರ, ಚಾಮರಾಜಪೇಟೆ ಸೇರಿ ಹಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಯಲ್ಲಿ ಮಳೆಯಿಂದ ಹಲವು ಅನಾಹುತಗಳು ಸಂಭವಿಸಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೂನ್ 29ರ ವರೆಗೆ ಕೆಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಉತ್ತರ ಒಳನಾಡು ಪ್ರದೇಶಗಳಿಗೆ ಇಂದು ಕೂಡ ಯೆಲ್ಲೋ ಅಲರ್ಟ್ ಇದೆ. ದಕ್ಷಿಣ ಹಾಗೂ ಕರಾವಳಿ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಡಗು ಹಾಗೂ ದಕ್ಷಿಣ ಕನ್ನಡದಲ್ಲಿ ಎಚ್ಚರಿಕೆ ವಹಿಸಬೇಕು. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 28-24
ಶಿವಮೊಗ್ಗ: 28-22
ಬೆಳಗಾವಿ: 25-21
ಮೈಸೂರು: 29-21
ಮಂಡ್ಯ: 31-22
ಮಡಿಕೇರಿ: 22-17
ರಾಮನಗರ: 30-22
ಹಾಸನ: 26-20
ಚಾಮರಾಜನಗರ: 30-21
ಚಿಕ್ಕಬಳ್ಳಾಪುರ: 29-21
ಕೋಲಾರ: 31-22
ತುಮಕೂರು: 29-21
ಉಡುಪಿ: 28-24
ಕಾರವಾರ: 28-26
ಚಿಕ್ಕಮಗಳೂರು: 24-19
ದಾವಣಗೆರೆ: 29-22
ಹುಬ್ಬಳ್ಳಿ: 27-22
ಚಿತ್ರದುರ್ಗ: 29-22
ಹಾವೇರಿ: 28-22
ಬಳ್ಳಾರಿ: 32-24
ಗದಗ: 28-22
ಕೊಪ್ಪಳ: 30-22
ರಾಯಚೂರು: 32-24
ಯಾದಗಿರಿ: 31-24
ವಿಜಯಪುರ: 29-23
ಬೀದರ್: 28-23
ಕಲಬುರಗಿ: 30-24
ಬಾಗಲಕೋಟೆ: 29-23