ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು, ಮೇ 28ರ ಬೆಳಗ್ಗೆ ವರೆಗೂ ಹಲವೆಡೆ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಉತ್ತರ ಒಳನಾಡಿನ ಉಳಿದೆಡೆ ಒಣಹವೆ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆ ಸಾಧ್ಯತೆಯಿದೆ. ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ. ರಾಜ್ಯದ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ಗಳಷ್ಟು ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 32-21
ಮಂಗಳೂರು: 34-27
ಶಿವಮೊಗ್ಗ: 36-22
ಬೆಳಗಾವಿ: 34-20
ಮೈಸೂರು: 34-22
Advertisement
ಮಂಡ್ಯ: 34-22
ಮಡಿಕೇರಿ: 28-18
ರಾಮನಗರ: 33-22
ಹಾಸನ: 32-20
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 32-21
ಕೋಲಾರ: 33-23
ತುಮಕೂರು: 33-22
ಉಡುಪಿ: 34-27
ಕಾರವಾರ: 34-27
ಚಿಕ್ಕಮಗಳೂರು: 31-19
ದಾವಣಗೆರೆ: 37-22
ಹುಬ್ಬಳ್ಳಿ: 36-22
ಚಿತ್ರದುರ್ಗ: 35-22
ಹಾವೇರಿ: 37-22
ಬಳ್ಳಾರಿ: 38-26
ಗದಗ: 36-22
ಕೊಪ್ಪಳ: 37-24
ರಾಯಚೂರು: 38-27
ಯಾದಗಿರಿ: 39-27
ವಿಜಯಪುರ: 38-24
ಬೀದರ್: 37-26
ಕಲಬುರಗಿ: 38-27
ಬಾಗಲಕೋಟೆ: 38-24