ರಾಜ್ಯಾದ್ಯಂತ ಮುಂಗಾರು ಚುರುಕು ಪಡೆದುಕೊಂಡಿದ್ದು, ಇಂದು ಕೂಡಾ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾದ್ಯತೆ ಇದೆ. ಜೂನ್ 25ರ ವರೆಗೆ ರಾಜ್ಯದ 18 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೋ ಅಲರ್ಟ್ ಘೋಷಿಸಿರುವ ಭಾಗಗಳನ್ನು ಹೊರತುಪಡಿಸಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇತರ ಭಾಗಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ. ಮುಂಜಾನೆ ಸ್ವಲ್ಪ ಚಳಿ ಇರಲಿದೆ. ಮಂಗಳೂರು, ಶಿವಮೊಗ್ಗ, ಬೆಳಗಾವಿ, ಕೊಡಗು, ಹಾಸನ, ಉಡುಪಿ, ಕಾರವಾರ, ಚಿಕ್ಕಮಗಳೂರು, ದಾವಣಗೆರೆ, ಗದಗ, ಯಾದಗಿರಿ ಹಾಗೂ ಕಲಬುರಗಿ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 26-20
ಮಂಗಳೂರು: 28-24
ಶಿವಮೊಗ್ಗ: 26-21
ಬೆಳಗಾವಿ: 25-21
ಮೈಸೂರು: 27-21
ಮಂಡ್ಯ: 28-21
Advertisement
Advertisement
ಕೊಡಗು: 22-18
ರಾಮನಗರ: 28-21
ಹಾಸನ: 24-19
ಚಾಮರಾಜನಗರ: 28-21
ಚಿಕ್ಕಬಳ್ಳಾಪುರ: 27-20
ಕೋಲಾರ: 28-21
ತುಮಕೂರು: 27-21
ಉಡುಪಿ: 28-25
ಕಾರವಾರ: 28-26
ಚಿಕ್ಕಮಗಳೂರು: 23-18
ದಾವಣಗೆರೆ: 28-22
ಚಿತ್ರದುರ್ಗ: 28-21
ಹಾವೇರಿ: 28-22
ಬಳ್ಳಾರಿ: 32-24
ಗದಗ: 28-22
ಕೊಪ್ಪಳ: 30-23
ರಾಯಚೂರು: 33-24
ಯಾದಗಿರಿ: 32-24
ವಿಜಯಪುರ: 30-23
ಬೀದರ್: 30-22
ಕಲಬುರಗಿ: 31-24
ಬಾಗಲಕೋಟೆ: 31-23