ಬೆಂಗಳೂರಿನಲ್ಲಿಂದು ಮೋಡ ಕವಿದ ವಾತವರಣದ ಜೊತೆಗೆ ತುಂತುರು ಮಳೆಯಾಗುವ ಸಾಧ್ಯತೆಯಿದ್ದು, ಇನ್ನೂ ಎರಡು ದಿನ ಚಳಿ ಹೆಚ್ಚಾಗಲಿದೆ.
ನಗರದೆಲ್ಲೆಡೆ ಬೆಳಗ್ಗಿನಜಾವ ದಟ್ಟ ಮಂಜು ಆವರಿಸಿದೆ. ಇಂದು ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ಗೆ ತಲುಪುವ ಸಾಧ್ಯತೆಯಿದ್ದು, ಮುಂದಿನ 48 ಗಂಟೆಗಳು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಳಿಯ ನಡುವೆ ಇಂದಿನಿಂದ ಮೂರು ದಿನ ಮಳೆ ಕಾಟ ಇರಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಾರಣದಿಂದಾಗಿ ನವೆಂಬರ್ 22 ರಿಂದ 24ರ ವರೆಗೆ ಮಳೆಯಾಗುವ ಮುನ್ಸೂಚನೆಯಿದೆ. ಕರಾವಳಿ, ದಕ್ಷಿಣ ಒಳನಾಡಿನ ಅನೇಕ ಕಡೆ, ಉತ್ತರ ಒಳನಾಡಿ ಕೆಲ ಭಾಗಗಳಲ್ಲಿ ಮಳೆ ಸಾಧ್ಯತೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ವಿಜಯಪುರ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರಾವಾರದಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 25-19
ಮಂಗಳೂರು: 30-24
ಶಿವಮೊಗ್ಗ: 29-21
ಬೆಳಗಾವಿ: 29-19
ಮೈಸೂರು: 27-20
ಮಂಡ್ಯ: 27-20
ಮಡಿಕೇರಿ: 22-16
ರಾಮನಗರ: 26-20
ಹಾಸನ: 26-19
ಚಾಮರಾಜನಗರ: 28-20
ಚಿಕ್ಕಬಳ್ಳಾಪುರ: 24-19
ಕೋಲಾರ: 24-19
ತುಮಕೂರು: 26-19
ಉಡುಪಿ: 30-24
ಕಾರವಾರ: 31-24
ಚಿಕ್ಕಮಗಳೂರು: 26-18
ದಾವಣಗೆರೆ: 29-21
ಹುಬ್ಬಳ್ಳಿ: 31-21
ಚಿತ್ರದುರ್ಗ: 28-20
ಹಾವೇರಿ: 31-21
ಬಳ್ಳಾರಿ: 29-21
ಗದಗ: 30-21
ಕೊಪ್ಪಳ: 30-22
ರಾಯಚೂರು: 31-21
ಯಾದಗಿರಿ: 33-22
ವಿಜಯಪುರ: 32-21
ಬೀದರ್: 30-18
ಕಲಬುರಗಿ: 32-21
ಬಾಗಲಕೋಟೆ: 32-31