ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕುಂಠಿತಗೊಂಡಿದ್ದ ಮುಂಗಾರು ಇಂದಿನಿಂದ ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 3-4 ದಿನಗಳ ಕಾಲ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಹಗುರವಾಗಿ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಅಲ್ಲದೇ ಕೆಲವೆಡೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
Advertisement
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾರೀ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ಉಳಿದ ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬುರಗಿ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಸಾಧರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 22 ಡಿಗ್ರಿ, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 30-20
ಮಂಗಳೂರು: 29-24
ಶಿವಮೊಗ್ಗ: 28-21
ಬೆಳಗಾವಿ: 25-21
ಮೈಸೂರು: 29-21
ಮಂಡ್ಯ: 30-21
ಮಡಿಕೇರಿ: 22-17
ರಾಮನಗರ: 29-21
ಹಾಸನ: 25-19
ಚಾಮರಾಜನಗರ: 30-21
ಚಿಕ್ಕಬಳ್ಳಾಪುರ: 27-19
ಕೋಲಾರ: 30-21
ತುಮಕೂರು: 27-20
ಉಡುಪಿ: 28-24
ಕಾರವಾರ: 28-25
ಚಿಕ್ಕಮಗಳೂರು: 23-18
ದಾವಣಗೆರೆ: 28-22
ಹುಬ್ಬಳ್ಳಿ: 27-21
ಚಿತ್ರದುರ್ಗ: 27-21
ಹಾವೇರಿ: 27-22
ಬಳ್ಳಾರಿ: 32-23
ಗದಗ: 28-22
ಕೊಪ್ಪಳ: 30-23
ರಾಯಚೂರು: 30-23
ಯಾದಗಿರಿ: 28-23
ವಿಜಯಪುರ: 28-22
ಬೀದರ್: 24-21
ಕಲಬುರಗಿ: 27-22
ಬಾಗಲಕೋಟೆ: 29-23
Web Stories