ಕಳೆದೊಂದು ವಾರದಿಂದ ಮಳೆಗೆ(Rain) ತತ್ತರಿಸಿರುವ ಬೆಂಗಳೂರಿನಲ್ಲಿ(Bengaluru) ಇನ್ನೂ ಒಂದು ವಾರಗಳ ಕಾಲ ವರುಣನ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ(Weather) ಇಲಾಖೆ ಸೂಚನೆ ನೀಡಿದೆ. ಕರಾವಳಿಗೆ ಮುಂದಿನ 4 ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳಿಗೆ ಮುಂದಿನ 2 ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬೆಳಗಾವಿ, ಬೀದರ್, ಗುಲ್ಬರ್ಗಾ, ಯಾದಗಿರಿ ಭಾಗದಲ್ಲಿ ಭಾರೀ ಮಳೆಯಾಗಲಿದೆ.
ದಕ್ಷಿಣ ಒಳನಾಡಿಗೆ ಇಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಮಗಳೂರಿಗೆ ಭಾರೀ ಮಳೆ ಸಾಧ್ಯತೆಯಿದ್ದು, ಇಂದು ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೂರು ದಿನದ ಬಳಿಕ ಮಳೆಪ್ರಮಾಣದಲ್ಲಿ ಕೊಂಚ ಇಳಿಕೆಯಾಗಲಿದ್ದು, ಬೆಂಗಳೂರಿನಲ್ಲಿ ಮೂರು ತಿಂಗಳು ಮಳೆಯಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-20
ಮಂಗಳೂರು: 28-24
ಶಿವಮೊಗ್ಗ: 27-21
ಬೆಳಗಾವಿ: 24-21
ಮೈಸೂರು: 28-21
ಮಂಡ್ಯ: 29-20
ಕೊಡಗು: 22-18
ರಾಮನಗರ: 29-20
ಹಾಸನ: 24-19
ಚಾಮರಾಜನಗರ: 29-20
ಚಿಕ್ಕಬಳ್ಳಾಪುರ: 28-19
ಕೋಲಾರ: 29-20
ತುಮಕೂರು: 28-20
ಉಡುಪಿ: 29-24
ಕಾರವಾರ: 28-26
ಚಿಕ್ಕಮಗಳೂರು: 24-18
ದಾವಣಗೆರೆ: 28-22
ಚಿತ್ರದುರ್ಗ: 28-21
ಹಾವೇರಿ: 27-22
ಬಳ್ಳಾರಿ: 31-23
ಗದಗ: 27-21
ಕೊಪ್ಪಳ: 28-22
ರಾಯಚೂರು: 30-23
ಯಾದಗಿರಿ: 28-23
ವಿಜಯಪುರ: 27-22
ಬೀದರ್: 26-21
ಕಲಬುರಗಿ: 28-22
ಬಾಗಲಕೋಟೆ: 27-22