ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ರಾಜ್ಯದಲ್ಲಿ ತನ್ನ ಆರ್ಭಟ ಶುರು ಮಾಡಲಿದ್ದಾನೆ. ರಾಜ್ಯದಲ್ಲಿ ಎರಡು ದಿನಗಳ ಕಾಲ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
Advertisement
ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ದಕ್ಷಿಣ ಒಳನಾಡಿನಲ್ಲಿ ನವೆಂಬರ್ 13 ಹಾಗೂ 14ನೇ ತಾರೀಖು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡು ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಚಳಿ ಕೂಡ ಮುಂದುವರೆಯಲಿದೆ.
Advertisement
Advertisement
Advertisement
ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 23-19
ಮಂಗಳೂರು: 33-25
ಶಿವಮೊಗ್ಗ: 31-21
ಬೆಳಗಾವಿ: 31-18
ಮೈಸೂರು: 26-19
ಮಂಡ್ಯ: 26-20
ಮಡಿಕೇರಿ: 24-17
ರಾಮನಗರ: 26-20
ಹಾಸನ: 26-18
ಚಾಮರಾಜನಗರ: 25-20
ಚಿಕ್ಕಬಳ್ಳಾಪುರ: 24-19
ಕೋಲಾರ: 23-19
ತುಮಕೂರು: 26-19
ಉಡುಪಿ: 33-26
ಕಾರವಾರ: 34-26
ಚಿಕ್ಕಮಗಳೂರು: 27-18
ದಾವಣಗೆರೆ: 31-21
ಚಿತ್ರದುರ್ಗ: 29-21
ಹಾವೇರಿ: 32-21
ಬಳ್ಳಾರಿ: 32-22
ಗದಗ: 31-19
ಕೊಪ್ಪಳ: 31-21
ರಾಯಚೂರು: 32-21
ಯಾದಗಿರಿ: 33-21
ವಿಜಯಪುರ: 32-18
ಬೀದರ್: 29-17
ಕಲಬುರಗಿ: 32-19
ಬಾಗಲಕೋಟೆ: 33-20