ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ. ರಾಜ್ಯಾದ್ಯಂತ ಹಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಹಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಇಂದು ಕರಾವಳಿ, ಉತ್ತರ ಕನ್ನಡ ಜಿಲ್ಲೆ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ದಕ್ಷಿಣ ಒಳನಾಡು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 27-19
ಮಂಗಳೂರು: 32-24
ಶಿವಮೊಗ್ಗ: 31-19
ಬೆಳಗಾವಿ: 29-21
ಮೈಸೂರು: 28-19
Advertisement
ಮಂಡ್ಯ: 28-19
ಮಡಿಕೇರಿ: 26-17
ರಾಮನಗರ: 28-18
ಹಾಸನ: 27-18
ಚಾಮರಾಜನಗರ: 28-19
ಚಿಕ್ಕಬಳ್ಳಾಪುರ: 27-17
ಕೋಲಾರ: 27-17
ತುಮಕೂರು: 28-17
ಉಡುಪಿ: 32-24
ಕಾರವಾರ: 32-25
ಚಿಕ್ಕಮಗಳೂರು: 27-17
ದಾವಣಗೆರೆ: 31-20
ಹುಬ್ಬಳ್ಳಿ: 31-21
ಚಿತ್ರದುರ್ಗ: 30-19
ಹಾವೇರಿ: 31-20
ಬಳ್ಳಾರಿ: 32-20
ಗದಗ: 30-21
ಕೊಪ್ಪಳ: 32-21
ರಾಯಚೂರು: 32-21
ಯಾದಗಿರಿ: 32-21
ವಿಜಯಪುರ: 29-21
ಬೀದರ್: 31-19
ಕಲಬುರಗಿ: 31-21
ಬಾಗಲಕೋಟೆ: 31-21