ರಾಜ್ಯದ ಹವಾಮಾನ ವರದಿ 01-04-2023

Public TV
1 Min Read
WEATHER 1 e1679398614299

ಬೇಸಿಗೆ ಬೇಗೆಯಿಂದ ಕಂಗೆಟ್ಟಿದ್ದ ಕರುನಾಡ ಜನತೆಗೆ ಮಳೆರಾಯ ಗುಡ್‌ನ್ಯೂಸ್ ನೀಡಿದ್ದಾನೆ. ಮುಂದಿನ 3 ದಿನ ರಾಜ್ಯಾದ್ಯಂತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನಲ್ಲಿ ಮುಂದಿನ 3 ದಿನಗಳ ಕಾಲ ಮಳೆ ಇರಲಿದ್ದು, ಮಂಡ್ಯ, ಮೈಸೂರು, ಕೋಲಾರ, ಹಾಸನ, ಕೊಡಗು, ಚಾಮರಾಜನಗರ, ಸೇರಿದಂತೆ ಹಲವೆಡೆ ಮಳೆಯಾಗಲಿದೆ. ಅದೇ ರೀತಿಯಾಗಿ ಉತ್ತರ ಒಳನಾಡಿನಲ್ಲೂ ಇಂದು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಒಣಹವೆ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿಯೂ ಇಂದು ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮೋಡ ಕವಿದ ವಾತಾವರಣ ಹಾಗೂ ಗಾಳಿಯ ಪ್ರಮಾಣ ಹೆಚ್ಚಾಗಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

weather 1

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 32-21
ಮಂಗಳೂರು: 32-24
ಶಿವಮೊಗ್ಗ: 37-18
ಬೆಳಗಾವಿ: 36-18
ಮೈಸೂರು: 34-21
ಮಂಡ್ಯ: 35-21

weather

ಮಡಿಕೇರಿ: 31-16
ರಾಮನಗರ: 34-22
ಹಾಸನ: 34-18
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 32-19

weather

ಕೋಲಾರ: 32-21
ತುಮಕೂರು: 33-20
ಉಡುಪಿ: 33-24
ಕಾರವಾರ: 33-23
ಚಿಕ್ಕಮಗಳೂರು: 34-17
ದಾವಣಗೆರೆ: 37-19

weather

ಹುಬ್ಬಳ್ಳಿ: 37-19
ಚಿತ್ರದುರ್ಗ: 36-19
ಹಾವೇರಿ: 37-19
ಬಳ್ಳಾರಿ: 38-23
ಗದಗ: 37-21
ಕೊಪ್ಪಳ: 36-21

weather

ರಾಯಚೂರು: 38-23
ಯಾದಗಿರಿ: 37-22
ವಿಜಯಪುರ: 36-22
ಬೀದರ್: 35-21
ಕಲಬುರಗಿ: 37-22
ಬಾಗಲಕೋಟೆ: 37-22

Share This Article