ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಲೇ ಇದೆ. ಮುಂಜಾನೆ ಸ್ವಲ್ಪ ಚಳಿಯ ಅನುಭವವಾದರೆ ಹೊತ್ತಾಗುತ್ತಿದ್ದಂತೆಯೇ ಬಿಸಿಲು ಜಾಸ್ತಿಯಾಗುತ್ತಿದೆ. ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದಂತೆಯೇ ಬಿಸಿಲಿನ ಝಳಕ್ಕೆ ಜನ ಹೈರಾಣಾಗುತ್ತಿದ್ದಾರೆ. ಹೀಗಾಗಿ ಜನ ತಂಪುಪಾನೀಯಗಳತ್ತ ಮೊರೆ ಹೋಗುತ್ತಾರೆ. ಕೆಲವು ಜಿಲ್ಲೆಗಳು ಸೇರಿದಂತೆ ಬೆಂಗಳೂರಿನಲ್ಲಿ ನೀರಿನ ಅಭಾವ ಉಂಟಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಈಗಾಗಲೇ ತಾಪಮಾನ ಏರಿಕೆಯಾಗಿದ್ದು, ರಾಜ್ಯದಲ್ಲಿ ಇನ್ನೂ 1 ವಾರ ಬಿಸಿಲು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ದಿನ ರಾಜ್ಯದ ಹೆಚ್ಚಿನ ಕಡೆ ಮೋಡ ಕವಿದ ವಾತಾವರಣ ಇರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 32-22
ಮಂಗಳೂರು: 31-23
ಶಿವಮೊಗ್ಗ: 34-18
ಬೆಳಗಾವಿ: 33- 18
ಮೈಸೂರು: 36-22
Advertisement
ಮಂಡ್ಯ: 35-22
ಮಡಿಕೇರಿ: 32-17
ರಾಮನಗರ: 34-23
ಹಾಸನ: 32-18
ಚಾಮರಾಜನಗರ: 36-22
ಚಿಕ್ಕಬಳ್ಳಾಪುರ: 32-21
Advertisement
ಕೋಲಾರ: 31-21
ತುಮಕೂರು: 32-21
ಉಡುಪಿ: 30-23
ಕಾರವಾರ: 31-22
ಚಿಕ್ಕಮಗಳೂರು: 31-17
ದಾವಣಗೆರೆ: 34- 19
ಹುಬ್ಬಳ್ಳಿ: 34-18
ಚಿತ್ರದುರ್ಗ: 33-19
ಹಾವೇರಿ: 34-18
ಬಳ್ಳಾರಿ: 37-23
ಗದಗ: 34-19
ಕೊಪ್ಪಳ: 35-21
ರಾಯಚೂರು: 37- 24
ಯಾದಗಿರಿ: 36- 24
ವಿಜಯಪುರ: 34- 21
ಬೀದರ್: 34- 21
ಕಲಬುರಗಿ: 36-22
ಬಾಗಲಕೋಟೆ: 35- 21